ಕೂಡ್ಲಿಗಿ:- ಗಂಗಾಮತ ಸಮಾಜದ ವ್ಯಕ್ತಿಯ ಮೇಲೆ ಸುಳ್ಳು ಜಾತಿನಿಂದನೆಃ ಖಂಡನೆ
ಕೂಡ್ಲಿಗಿಃ ಹೂವಿನಹಡಗಲಿ ತಾಲೂಕು ಹೊಳಗುಂದಿ ಗ್ರಾಮದ ಬಾರಿಕರ ಶಿವಪ್ಪ ಅವರ ಕುಟುಂಬದ ಮೇಲೆ ಜಗಳದಲ್ಲಿ ಭಾಗಿಯಾಗದೇ ಇದ್ದರೂ ಯಾವುದೋ ಪ್ರಭಾವಿಗಳ ಒತ್ತಡಕ್ಕೆ ಮಣಿದು ಸುಳ್ಳುಜಾತಿ ನಿಂದನೆ ಪ್ರಕರಣದ ದಾಖಲಿಸಿದ್ದು ಖಂಡನೀಯವಾಗಿದ್ದು ಸುಳ್ಳು ಜಾತಿನಿಂದನೆ ಪ್ರಕರಣ ದಾಖಲಿಸಿದವರ ಮೇಲೆ ಕ್ರಮಕೈಗೊಳ್ಳಬೇಕು ಬಾರಿಕರ ಶಿವಪ್ಪ ಅವರ ಕುಟುಂಬಕ್ಕೆ ನ್ಯಾಯ ದೊರಕಬೇಕೆಂದು ಕೂಡ್ಲಿಗಿ ತಾಲೂಕು ಗಂಗಾಮತ ಸಮಾಜದ ಅಧ್ಯಕ್ಷ ಗುಡೇಕೋಟೆ ಶ್ರೀನಿವಾಸ್ ಗೃಹಸಚಿವರಿಗೆ ಒತ್ತಾಯಿಸಿದರು.
ಅವರು ಬುಧವಾರ ಕೂಡ್ಲಿಗಿ ತಾಲೂಕು ಗಂಗಾಮತ ಸಮಾಜದಿಂದ ಹೊಳಗುಂದಿಯ ಬಾರಿಕರ ಶಿವಪ್ಪ ಅವರ ಮೇಲೆ ದುರುದ್ದೇಶಪೂರ್ವಕವಾಗಿ ಜಾತಿನಿಂದನೆ ಪ್ರಕರಣ ಖಂಡಿಸಿ ತಹಶೀಲ್ದಾರ್ ಮೂಲಕ ರಾಜ್ಯದ ಗೃಹಸಚಿವರಿಗೆ ಮನವಿ ಸಲ್ಲಿಸಿದ ನಂತರ ಮಾತನಾಡುತ್ತಿದ್ದರು. ಹೂವಿನ ಹಡಗಲಿ ತಾಲೂಕಿನ ಹೊಳಗುಂದಿಯಲ್ಲಿ ಕಣದಲ್ಲಿ ದಾರಿಬಿಡುವ ಬಗ್ಗೆ ಗ್ರಾಮದ ಶಾಂತನಗೌಡ ಹಾಗೂ ಬಾರಿಕರ ಶಿವಪ್ಪ ಅವರ ಕುಟುಂಬಗಳ ಮದ್ಯೆ ಸೆ,೧೦ರಂದು ಜಗಳವಾಗಿದೆ. ಈ ಬಗ್ಗೆ ಹೂವಿನಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಜಗಳ ನಡೆಯುವಾಗ ಆ ವ್ಯಕ್ತಿ ಇಲ್ಲದಿದ್ದರೂ ಸಹ ಯಾವುದೋ ಒತ್ತಡಕ್ಕೆ ಮಣಿದು ಮೂರನೇ ವ್ಯಕ್ತಿಯೊಬ್ಬ ಬಾರಿಕರ ಶಿವಪ್ಪನ ಮೇಲೆ ಜಾತಿನಿಂದನೆ ಪ್ರಕರಣ ದಾಖಲಿಸಿರುವುದು ಖಂಡನೀಯ ಪೊಲೀಸರು ಈ ಬಗ್ಗೆ ತನಿಖೆ ನಡೆಸಿ ಇಂತವರ ವಿರುದ್ದ ಕ್ರಮಕೈಗೊಂಡು ಬಾರಿಕರ ಶಿವಪ್ಪ ಅವರ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದರು.
ವಿಜಯನಗರ ಜಿಲ್ಲೆ ಗಂಗಾಮತ ಸಂಘದ ಸದಸ್ಯರಾದ ಪ್ರಕಾಶ್ ತಲಾರಿ ಮಾತನಾಡಿ ಗಂಗಾಮತ ಸಮುದಾಯದವರು ಊರಲ್ಲಿ ಆಯಗಾರರ ಕೆಲಸ ಮಾಡಿಕೊಂಡು ಎಲ್ಲಾ ವರ್ಗಗಳ ಜೊತೆಗೆ ಸೌಹಾರ್ದಯುತ ಬಾಂಧವ್ಯ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ. ಗಂಗಾಮತ ಸಮುದಾಯವು ಸಹ ಶೋಷಣೆಗೊಳಗಾಗಿರುವ ಸಮುದಾಯವಾಗಿದ್ದು ಶಿಕ್ಷಣ, ಅನಕ್ಷರತೆ,ಸಂಘಟನೆ ಕೊರತೆಯಿಂದ ತೀರಾ ಹಿಂದುಳಿದ ಸಮುದಾಯವಾಗಿದೆ. ಇಂತಹ ಹಿಂದುಳಿದ ಸಮಾಜದ ವಿರುದ್ದ ಜಾತಿನಿಂದನೆ ಪ್ರಕರವಣವನ್ನು ವಿನಾಃಕಾರಣ ದುರುದ್ದೇಶಪೂರ್ವಕವಾಗಿ ದಾಖಲಿಸಿರುವುದು ಖಂಡನೀಯವಾಗಿದೆ…

ವರದಿ. ಬಸಣ್ಣಿ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
