;

ಮದುವೆಯಾಗುವುದಿಲ್ಲ ಎಂದ ಯುವತಿ! | ಗ್ರಾಮಕ್ಕೆ ಓಡಿ ಬಂದ ಅಧಿಕಾರಿಗಳ ದಂಡು…!!!

ಮದುವೆಯಾಗುವುದಿಲ್ಲ ಎಂದ ಯುವತಿ! | ಗ್ರಾಮಕ್ಕೆ ಓಡಿ ಬಂದ ಅಧಿಕಾರಿಗಳ ದಂಡು

ದಾವಣಗೆರೆ: ತನ್ನ ಗ್ರಾಮಕ್ಕೆ ರಸ್ತೆ ನಿರ್ಮಾಣ ಮಾಡದೇ ನಾನು ಮದುವೆಯಾಗುವುದಿಲ್ಲ ಎಂದು ಯುವತಿಯೊಬ್ಬಳು ಶಪಥ ಮಾಡಿದ್ದು, ಈ ಸುದ್ದಿ ರಾಜ್ಯ ಮಾತ್ರವಲ್ಲದೇ ರಾಷ್ಟ್ರದಾದ್ಯಂತ ವ್ಯಾಪಿಸಿದ್ದು, ಇದೀಗ ಯುವತಿಯ ಹೇಳಿಕೆಯಿಂದಾಗಿ ದಾವಣಗೆರೆ ಜಿಲ್ಲಾಡಳಿತಕ್ಕೆ ಬಿಸಿಮುಟ್ಟಿದ್ದು, ಅಧಿಕಾರಿಗಳು ಗ್ರಾಮಕ್ಕೆ ಆಗಮಿಸಿದ್ದಾರೆ.

ದಾವಣಗೆರೆ ತಾಲೂಕಿನ ಮಾಯಕೊಂಡದ ಎಚ್.ರಾಂಪುರದ ಯುವತಿ ಬಿಂದು ತನ್ನ ಗ್ರಾಮದಲ್ಲಿ ರಸ್ತೆ ಅವ್ಯವಸ್ಥೆಯ ಬಗ್ಗೆ ಸಿಡಿದೆದ್ದಿದ್ದು, ಇದೀಗ ಅವರ ಹೋರಾಟಕ್ಕೆ ಅಲ್ಪಮಟ್ಟಿನ ಜಯ ದೊರಕಿದ್ದು, ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಅವರು ಎಚ್. ರಾಂಪುರ ಗ್ರಾಮಕ್ಕೆ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಗ್ರಾಮಸ್ಥರಿಂದ ರಸ್ತೆ ಅವ್ಯವಸ್ಥೆ ಹಾಗೂ ಗ್ರಾಮಗಳ ಸಮಸ್ಯೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

ಜಿಲ್ಲಾಧಿಕಾರಿಗಳ ಭೇಟಿಯ ವೇಳೆ ಗ್ರಾಮಸ್ಥರು, ಕಾಡು ಪ್ರಾಣಿಗಳ ಕಾಟ, ನೆಟ್ ವರ್ಕ್ ತೊಂದರೆಗಳು, ಗುಡ್ಡಗಾಡು ಪ್ರದೇಶಗಳ ಸಂಕಷ್ಟಗಳು, ರಸ್ತೆ ಹಾಳಾಗಿ ಬಸ್ ಕೂಡ ಬಾರದೇ ಇರುವುದು ಇವೇ ಮೊದಲಾದ ಸಂಕಷ್ಟಗಳನ್ನು ಅಧಿಕಾರಿಗಳ ಬಳಿಯಲ್ಲಿ ತೋಡಿಕೊಂಡರು.

ರಸ್ತೆ ನಿರ್ಮಾಣಕ್ಕೆ ಒತ್ತಾಯಿಸಿ ಬಿಂದು ಅವರು ಪ್ರಧಾನಿಗೆ ಪತ್ರ ಬರೆದರೂ ಸ್ಪಂದನೆ ಸಿಕ್ಕಿರಲಿಲ್ಲ. ಹಾಗಾಗಿ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಪತ್ರಬರೆದು ಮನವಿ ಮಾಡಿಕೊಂಡಿದ್ದರು. ಇದಕ್ಕೆ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದರು….

ವರದಿ. ಪ್ರತಾಪ್, ಸಿ, ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;