ಸಿಂಧನೂರು : “ವಿಶ್ವ ಜಾನಪದ ದಿನಾಚರಣೆ ”
ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ (ರಿ) ಜಿಲ್ಲಾಘಟಕ ರಾಯಚೂರು ವತಿಯಿಂದ ವಿಶ್ವ ಜಾನಪದ ದಿನಾಚರಣೆ ಅಂಗವಾಗಿ ವಿಶೇಷ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮವನ್ನು ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾರಾಯಣಪ್ಪ ಮಾಡಶಿರವಾರ ಕಲ್ಯಾಣ ಕರ್ನಾಟಕದ ಜಾನಪದ ಅಕಾಡೆಮಿ ಜಿಲ್ಲಾ ಸದಸ್ಯರು ವಹಿಸಿದ್ದರು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಾರಾಯಣಪ್ಪ ಶ್ರಮ ಸಂಸ್ಕೃತಿಯ ಮೂಲದಿಂದ ಹುಟ್ಟಿರುವ ಜನಪದ ಕಲೆಗಳಿಗೆ ಈಗಲೂ ಬೇಡಿಕೆ ಹೆಚ್ಚಾಗುತ್ತಿದ್ದು, ಶ್ರಮದ ದಣಿವಿನ ನಿವಾರಣೆಗಾಗಿ ಹುಟ್ಟಿಕೊಂಡ ಹಾಡು-ಕುಣಿತ ಹಾಗೂ ವಾದ್ಯಸಂಗೀತ ಕಲೆಗಳು ಇಂದು ಜನಪದ ಕಲಾ ಪ್ರಕಾರಗಳಾಗಿ ಪ್ರದರ್ಶಿಸಲ್ಪಡುತ್ತಿವೆ. ಜನಪದ ಕಲಾವಿದರ ಜೀವನ ಮಟ್ಟ ಸುಧಾರಣೆಯಾಗುವಂತೆ ಸಮಾಜ ಮತ್ತು ಸರ್ಕಾರ ಶ್ರಮಿಸಬೇಕು,ರಾಜ್ಯ ಸರ್ಕಾರದಿಂದ ಕಲೆ ಮತ್ತು ಸಂಸ್ಕೃತಿಗೆ ಹೆಚ್ಚು ಪ್ರೋತ್ಸಾಹ ಧನ ದೊರೆಯುತ್ತಿದೆ. ಅಧಿಕಾರಿಗಳು ಕಲಾವಿದರು, ಈಗಾಗಲೇ ಸಲ್ಲಿಸಿರುವ ಮಾಸಾಶನವನ್ನು ಹೆಚ್ಚಿಗೆ ಮಾಡಬೇಕು ಮತ್ತು ಮಂಜೂರು ಮಾಡಬೇಕು. ಇಂದಿನ ಯುವ ಜನಾಂಗ ಜನಪದ ಕಲೆಗಳ ಕಲೆಯುವುಕೆಗೆ ಆಸಕ್ತಿ ತೋರುತ್ತಿದ್ದು,ಅವರಿಗೆ ಹಿರಿಯ ಕಲಾವಿದರು ಮಾರ್ಗದರ್ಶನ ನೀಡಬೇಕು ಎಂದು ಮಾತನಾಡಿದರು.
ಈ ಸಂದರ್ಭದಲ್ಲಿ ಜಾನಪದ ಕಲೆಗೆ ತಮ್ಮದೇ ಕೊಡುಗೆ ನೀಡಿದ ಹಿರಿಯ ಕಲಾವಿದರು ಹಾಗೂ ಜಾನಪದ ಲೋಕದ ಬೆಳವಣಿಗೆಗೆ ಶ್ರಮಿಸಿದ ವಿಶೇಷ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಮಾಡಲಾಯಿತು.
ವಿಶೇಷ ಸನ್ಮಾನಿತರು : “ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು “1)ಜಂಬಣ್ಣ ಹಸಮಕಲ್ ಹಗಲುವೇಷ ಮತ್ತು ಜನಪದ ಕಲಾವಿದರು.2) ಬಸಮ್ಮ ತತ್ವಪದ ಕಲಾವಿದರು.3) ಶರಣಪ್ಪ ಮಾನ್ವಿ ತತ್ವಪದ ಕಲಾವಿದರು.
ಈ ಸಂದರ್ಭದಲ್ಲಿ ಅಮರೇಶ್ ಹಸಮಕಲ್ ಕಲ್ಯಾಣ ಕರ್ನಾಟಕದ ರಾಜ್ಯ ಸಹಕಾರ್ಯದರ್ಶಿ, ಮರಿಯಪ್ಪ ವಲ್ಕಮದಿನ್ನಿ ,ಪುಟ್ಟರಾಜು , ಮೌಲಾಸಾಬ್, ತಿಮ್ಮಣ್ಣ, ಇನ್ನೂ ಅನೇಕ ಕಲಾವಿದರು ಭಾಗವಹಿಸಿದ್ದರು…

ವರದಿ.ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
