ರಕ್ಷಾಬಂಧ.ಇಂದು ನಾಡಿನಾದ್ಯಂತ ಸೋದರ-ಸೋದರಿಯರ ಉಲ್ಲಾಸ, ಉತ್ಸಾಹ ದಿಂದ ಆಚರಿಸುವ ಹಬ್ಬವಾಗಿದೆ..
ರಕ್ಷಾಬಂಧ, ರಕ್ಷೆ ಎಂದರೆ ರಕ್ಷಣೆ ಹಾಗೂ ಬಂಧನ ಎಂದರೆ, ಸಂಬಂಧ, ಈ ಎರಡು ಪದಗಳಿಂದ ಕೂಡಿದ ಹಬ್ಬವಾಗಿದೆ.
ಪ್ರಸ್ತುತ ಈ ಹಬ್ಬವು ಸೋದರ-ಸೋದರಿಯರ ನಡುವಿನ ಪ್ರೀತಿ ಮತ್ತು ಬಂಧದ ಸಮನಾರ್ಥಕ ವಾಗಿದೆ.
ಮತ್ತು ಇದು ರಕ್ಷಾಬಂಧ ಸೋದರ ಸೋದರಿಯರ ನಡುವಿನ ಪ್ರೀತಿಯನ್ನು ಬಲಪಡಿಸುವ ಮತ್ತು ಪುನರುಚ್ಚರಿಸುವ ಉತ್ಸವವಾಗಿದೆ ಎಂದು ಹೇಳಬಹುದು.
ಒಂದು ಕಡೆ ಸೋದರನು ತನ್ನ ಸೋದರಿಯನ್ನು ನೋಡಿಕೊಳ್ಳಬಹುದಾಗಿದೆ. ಮತ್ತು ತನ್ನ ಜೀವಿತ ಪರ್ಯಂತ ತಂಗಿಯನ್ನು ರಕ್ಷಿಸುವುದಾಗಿ ಭರವಸೆ ನೀಡುತ್ತಾನೆ.
ಮತ್ತೊಂದೆಡೆ ಸೋದರಿ ತನ್ನ ಸೋದರನ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತಾಳೆ.
ಈ ದಿನ ಸೋದರಿ ತನ್ನ ಸೋದರನ ಮಣಿಕಟ್ಟಿನ ಮೇಲೆ ಕಟ್ಟುವ ರೇಷ್ಮೆ ದಾರ ಕೇವಲ ಒಂದು ದಾರವಲ್ಲ,
ಅದು ಇಬ್ಬರ ನಡುವಿನ ಶುದ್ಧ ಪವಿತ್ರ ಮತ್ತು ನಿರಂತರ ಪ್ರೀತಿಯ ಗುರುತು ಇದಾಗಿದೆ ಜೊತೆಗೆ ಶಾಶ್ವತ ರಕ್ಷಣೆಗಾಗಿ ಮಂತ್ರದೊಂದಿಗೆ ಬೆರೆತಿದೆ ಮದುವೆಯಾಗಲು ಸೋದರನ ಮನೆಯಿಂದ ರಾಖಿಯನ್ನು ಕಟ್ಟಿಕೊಳ್ಳುವುದನ್ನು ಮರೆಯುವುದಿಲ್ಲ.
ಪವಿತ್ರವಾದ ಸೋದರ-ಸೋದರಿಯರ ರಾಖಿ ಹಬ್ಬವನ್ನು ನಾಡಿನಾದ್ಯಂತ ಉತ್ಸವದಿಂದ ಆಚರಿಸಿಕೊಳ್ಳುತ್ತಿದ್ದಾರೆ.
ರಾಖಿ ಹಬ್ಬದ ಶುಭಾಶಯಗಳನ್ನು, ನಮ್ಮ ಪತ್ರಿಕೆಯ ನೆಚ್ಚಿನ ವರದಿಗಾರರಿಗೂ, ಹಾಗೂ ಸಮಸ್ತ ಕನ್ನಡ ನಾಡಿನ, ಸೋದರ ಸೋದರಿಯರಿಗೆ, ರಾಕಿ ಹಬ್ಬದ ಶುಭಾಶಯಗಳು…

ಎಂಎಲ್ ವೆಂಕಟೇಶ್
ಉಪಸಂಪಾದಕರು
ಎಚ್ಚರಿಕೆ ಪತ್ರಿಕೆ.ಬಳ್ಳಾರಿ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
