ಚಿತ್ರದುರ್ಗ ಜಿಲ್ಲಾ ಮೊಳಕಾಲ್ಮೂರು ತಾಲ್ಲೂಕಿನ ರಾಯಪುರ ಗ್ರಾಮ ಪಂಚಾಯಿತಿಯಲ್ಲಿ ಇಂದು (ಆಗಸ್ಟ್-6) ಪರಿಸರ ಪ್ರೇಮಿ ರಾಘವೇಂದ್ರ ಅವರು ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಸಸಿ ಕೊಡುವ ಮೂಲಕ ಆಚರಿಸಲಾಯಿತು. ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಗ್ರಾಪಂ ವ್ಯಾಪ್ತಿಯ ನಾಗರಿಕರಿಗೆ ಸಸಿಗಳನ್ನು ವಿತರಿಸಿ ಮಾತನಾಡಿದರು. ಭೂಮಿಯ ಮೇಲೆ ಪ್ರಕೃತಿಯನ್ನುಶಸಮತೋಲನದಲ್ಲಿಟ್ಟುಕೊಂಡಲ್ಲಿ ಯಾವುದೇ ವಿಕೋಪಗಳಿಗೆ ಒಳಗಾಗದೆ ಸಕಾಲಕ್ಕೆ ಮಳೆ ಬೆಳೆಗಳಾಗಿ ಸಮೃದ್ಧವಾಗಿ ಮನುಷ್ಯನು ಜೀವನ ಸಾಗಿಸಬಹುದಾಗಿದೆ. ಮನುಷ್ಯನು ಸ್ವಾರ್ಥಕ್ಕಾಗಿ ಪರಿಸರದಲ್ಲಿನ ಅತ್ಯಂತ ಬೆಲೆ ಬಾಳುವ ಅಮೂಲ್ಯವಾದ ಅರಣ್ಯ ಸಂಪತ್ತನ್ನು ಹಾಳು ಮಾಡಿದ್ದಲ್ಲಿ ಪ್ರಕೃತಿ ವಿಕೋಪಗಳುಂಟಾಗಿ ಮನುಷ್ಯನು ಸೇರಿದಂತೆ ಸಕಲ ಜೀವರಾಶಿಗಳು ವಿನಾಶಕ್ಕೆ ತುತ್ತಾಗಲಿವೆ. ಪರಿಸರದದಲ್ಲಿನ ಗಿಡ ಮರಗಳನ್ನು ಮನುಷ್ಯನು ಹಾಳು ಮಾಡಿರುವುದರಿಂದ ಪ್ರಸ್ತುತದಲ್ಲಿ ಕೊರೊನಾ ಮಹಾಮಾರಿಗೆ ತುತ್ತಾಗಿರುವ ಸೋಂಕಿತರಿಗೆ ಆಕ್ಸಿಜನ್ ಕೊರತೆಯುಂಟಾಗಿ ಸಾಕಷ್ಟು ಸಾವು-ನೋವುಗಳು ಸಂಭವಿಸಿದೆ. ಭಯದ ವಾತಾವರಣದಲ್ಲಿ ಜೀವನ ಸಾಗಿಸಬೇಕಾಗಿದೆ. ತಾಲೂಕಿನ 16 ಪಂಚಾಯತಿ ಗಳಲ್ಲಿ ಉಚಿತವಾಗಿ 1000 ಗಿಡಗಳನ್ನು ನೀಡಲಾಗಿದ್ದು ನಾಗರಿಕರು ಸದುಪಯೋಗ ಪಡೆದುಕೊಂಡು ಗಿಡಗಳನ್ನು ಬೆಳೆಸಿ ನಾಡು ಉಳಿಸಿ ಎಂದು ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನೂರುಲ್ಲಾ, ಗ್ರಾ.ಪಂ ಅಧ್ಯಕ್ಷರಾದ ಮಲ್ಲಿಕಾರ್ಜುನ್, ಸದಸ್ಯರಾದ ಸೌಮ್ಯ ಈ, ಬೋರಯ್ಯ, ಜೆ.ಪಿ ತಿಪ್ಪೇಸ್ವಾಮಿ ಸೇರಿದಂತೆ ಗ್ರಾಮ ಪಂಚಾಯತಿ ಸದಸ್ಯರುಗಳು, ಗ್ರಾ.ಪಂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು,…

ವರದಿ. ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
