;

ಅಭಿವೃದ್ಧಿಯಿಂದ ದೂರ ಉಳಿದ ಚಿಕ್ಕಮಲ್ಲನಹೊಳೆ ಗ್ರಾಮ, ಕಣ್ಣಿದ್ದು ಕುರುಡರಾದ ಜಾಣ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು…!!!

ಹಿರೇಮಲ್ಲನಹೊಳೆ ಜಗಳೂರು ತಾಲ್ಲೂಕಿನ ಗಡಿ ಗ್ರಾ.ಪಂ ಕೇಂದ್ರ, ಈ ಪಂಚಾಯಿತಿ ವ್ಯಾಪ್ತಿಯ ದೊಡ್ಡ ಗ್ರಾಮ ಚಿಕ್ಕಮಲ್ಲನಹೊಳೆ ಆದರೆ ಪಂಚಾಯಿತಿ ಆಡಳಿತದಿಂದ ಈ ಗ್ರಾಮ ಸಂಪೂರ್ಣ ನಿರ್ಲಕ್ಷ್ಯ ಒಳಗಾಗಿದೆ.
ಹೌದು ಚಿಕ್ಕಮಲ್ಲನಹೊಳೆ ಗ್ರಾಮದ ಮದ್ಯೆ ಪ್ರಮುಖ ರಸ್ತೆಯಲ್ಲಿ ಸಾರಗವಾಗಿ ನೀರು ಹರಿಯಲು ಸಮರ್ಪಕವಾದ ವ್ಯವಸ್ಥೆ ಇಲ್ಲದ ಕಾರಣ ಗಲೀಜು ನೀರು ರಸ್ತೆಗೆ ಹರಿಯುತ್ತಿದ್ದು ಜನರು ಮುಗು ಮುಚ್ಚಿಕೊಂಡು ಒಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸಾಂಕ್ರಾಮಿಕ ರೋಗದ ಭೀತಿ;
‘ನಿತ್ಯ ಇದೇ ರಸ್ತೆಯಲ್ಲಿ ಗ್ರಾಮದ ಜನರು ವಿದ್ರ್ಯಾರ್ಥಿಗಳು ಓಡಾಡುವುದಲ್ಲದೇ ಈ ರಸ್ತೆಯ ಸುತ್ತಮತ್ತ ಹಲವು ಮನೆಗಳಿದ್ದು, ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೇ ರಸ್ತೆ ಮೇಲೆ ಗೃಹ ಬಳಕೆಯ ನೀರು ದಿನ ನಿತ್ಯ ಹರಿಯುತ್ತಿದ್ದು, ಆದರಲ್ಲಿ ಕಸ, ತ್ಯಾಜ್ಯಗಳು ಸೇರಿ ಕೊಳೆಯುತ್ತಿದ್ದು, ದುರ್ವಾಸನೆ ಬೀರುತ್ತಿದೆ. ವಾಸನೆಯಲಿಯೇ ಜನರು ಓಡಾಡುವ ಹಾಗೂ ಜೀವನ ಸಾಗಿಸುವ ಪರಿಸ್ಥಿತಿ ಒಂದಡೆಯಾದರೆ ಕೊರೋನಾದಂತಹ ರೋಗಗಳ ಮಧ್ಯೆ ಡೆಂಗ್ಯೂ ಮಾಲೇರಿಯಾದಂತಹ ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ಜನರು ಭಯದಿಂದ ವಾಸಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಓಡಾಟಕ್ಕೆ ಕಿರಿಕಿರಿ;
ಗ್ರಾಮದ ಪ್ರಮುಖ ರಸ್ತೆಯಾಗಿರುವುದ್ದರಿಂದ ರಸ್ತೆ ವಿಶಾಲವಾಗಿದ್ದರು, ಹಲವು ಮನೆಗಳ ಗೃಹ ಬಳಕೆಯ ನೀರು ಇದೆ ರಸ್ತೆಯ ಮೇಲೆ ಹರಿಯುವುದ್ದರಿಂದ, ಮಕ್ಕಳು ಹಾಗೂ ವೃದ್ಧರು ಈ ರಸ್ತೆಯಲ್ಲಿ ಓಡಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಆಕಸ್ಮಿಕವಾಗಿ ಓಡಾಡುವ ಅಗತ್ಯ ಬಂದೊಂದಗಿದರು ಸ್ವಲ್ಪ ಎಚ್ಚರ ತಪ್ಪಿದರು ಕೊಳಚ್ಚೆ ನೀರಿಗೆ ಬೀಳುವುದು ಗ್ಯಾರಂಟಿ.
ಇದೇ ರಸ್ತೆಯಲ್ಲಿಯೇ ಜನಪ್ರತಿನಿಧಿಗಳ ಓಡಾಟ;
ಹೌದು ಇದು ಊರಿನ ಪ್ರಮುಖ ರಸ್ತೆಯಾಗಿರುವುದರಿಂದ ಗ್ರಾಮದ ಮೊದಲ ಪ್ರಜೆಗಳಾದ ಸದಸ್ಯರು ದಿನ ಬೆಳಗಾದರು ಇದೇ ಮಾರ್ಗವಾಗಿ ಓಡಾಡುತ್ತಾರೆ ಆದರೆ ಅವರಿಗೆ ಈ ಸಮಸ್ಯೆ ಬಗೆಹರಿಸುವ ಮನಸ್ಸಿಲ್ಲದಂತಾಗಿದೆ ಅಲ್ಲದೇ ಕಂಡು ಕಾಣದಂತೆ ವರ್ತಿಸುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಜನರು ಇಡೀ ಶಾಪ ಹಾಕುತ್ತಿದ್ದಾರೆ,

ದಾರಿಯುದ್ದಕ್ಕೂ ಕೊಳಚ್ಚೆ ನೀರು ಹರಿಯುತ್ತಿದ್ದು, ಗೃಹಬಳಕೆಯ ನೀರು ಹೋಗುವುದಕ್ಕೆ ಚರಂಡಿ ನಿರ್ಮಿಸದೇ ಇರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ ಆದ್ದರಿಂದ ಬಹುಬೇಗ ಈ ಸಮಸ್ಯೆಯನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಬಗೇಹರಿಸಬೇಕಿದೆ.
ಮಹೇಶ್ ಇ ಚಿಕ್ಕಮ್ಲಲನಹೊಳೆ

ಚಿಕ್ಕಮಲ್ಲನಹೊಳೆ ಗ್ರಾಮದ ಪ್ರಮುಖ ರಸ್ತೆಯಲ್ಲಿ ಮೇಲೆ ಸಮರ್ಪ ಚರಂಡಿ ಇಲ್ಲದೇ ದಿನ ಬಕೆಯ ನೀರು ರಸ್ತೆಗೆ ಹರಿಯುತ್ತಿರುವುದು ಗಮನಕ್ಕೆ ಬಂದಿದ್ದು, ಕೂಡಲೇ ಚರಂಡಿ ನಿರ್ಮಾಣ ಮಾಡುವುದಕ್ಕೆ ಸೂಚಿಸಲಾಗವುದು
ಎ ಅಂಜಿನಪ್ಪ ಹಿರೇಮಲ್ಲನಹೊಳೆ ಗ್ರಾ.ಪಂ ಪಿಡಿಓ.

ವರದಿ. ಸಂದೀಪ್, ಎಚ್, ಜಗಳೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;