ಜಗಳೂರು:- ರಾತ್ರೋ ರಾತ್ರಿ ಸಾವಿರಕ್ಕೂ ಅಧಿಕ ಮರಗಳನ್ನ ಕಡಿದು ಸುಟ್ಟು ಹಾಕಿದ ದುಷ್ಕರ್ಮಿಗಳು ಇದು ಜಗಳೂರು ತಾಲೂಕಿನ ಗೋಪಗೊಂಡನಹಳ್ಳಿ ಗ್ರಾಮದ ಪಕ್ಕದಲ್ಲಿ ಘಟನೆ.ಗ್ರಾಮದ ಗೋಮಾಳ ಜಾಗ ಒತ್ತುವರಿಗೆ ಕೆಲ ಭೂಗಳ್ಳರ ಸ್ಕೆಚ್ ಹಾಕಿರೋ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.. ಗೋಪಗೊಂಡನಹಳ್ಳಿಯಿಂದ 1 ಕಿಲೋ ಮೀಟರ್ ದೂರವಿರೋ ಗೋಮಾಳ ಜಾಗದಲ್ಲಿ ದುಷ್ಕರ್ಮಿಗಳ ಮರಗಳನ್ನ ಕಡಿದು ಜೆಸಿಬಿ ಮೂಲಕ ಬೇರು ಸಮೇತ ಮರಗಳನ್ನ ಕಿತ್ತು ಹಾಕಿದ್ದಾರೆ..
ಜಗಳೂರು ತಾಲೂಕಿನ ಕುಳ್ಳೋಬನಹಳ್ಳಿ ಸರ್ವೆ ನಂಬರ್ 2\1 ಹಾಗೂ ಸರ್ವೆ ನಂಬರ್ 2\2 ರಲ್ಲಿ 25 ಎಕರೆ ಜಮೀನಿನಲ್ಲಿ ಮರಗಳನ್ನ ಕಡಿದು ನಾಶ ಮಾಡಿದ ಭೂಗಳ್ಳರಿಗೆ ವಲಯ ಅರಣ್ಯ ಇಲಾಖೆ ಸಾಥ್ ನೀಡಿತಾ ಎಂದು ಶಂಕೆಗೆ ವ್ಯಕ್ತವಾಗುತ್ತದೆಮರಗಳನ್ನ ಕಡಿದು, ಸುಟ್ಟು ಹಾಕಿದರು ಇದುವರೆಗೂ ಯಾರ ಮೇಲು ಕ್ರಮವಿಲ್ಲ . ಮರ ಕಡಿದು ಸುಟ್ಟು ಹಾಕುವವರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಏನು ಮಾಡುತಿದ್ದರು ಎಂದು ಸರ್ವಜನಿಕರು ಆಕ್ರೋಶ ವ್ಯಕ್ತಪಡಿಸುತಿದ್ದು ತಪ್ಪಿತಸ್ಥರನ್ನ ಕೂಡಲೆ ಬಂಧಿಸುವಂತೆ ಒತ್ತಾಯಿಸಿದ್ದಾರೆ…

ವರದಿ.ಸಂದೀಪ್, ಎಚ್, ಜಗಳೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
