;

ಸರ್ಕಾರದ ವಿರುದ್ಧ ಸಿಡಿದೆದ್ದ ಖಾಸಗಿ ಶಾಲೆಗಳು…!!!

ಸರ್ಕಾರದ ವಿರುದ್ಧ ಸಿಡಿದೆದ್ದ ಖಾಸಗಿ ಶಾಲೆಗಳು: ಅನುಮತಿ ಇಲ್ಲದೆಯೇ ಶಾಲೆ ಆರಂಭಕ್ಕೆ ಮುಂದಾಯ್ತೇ ರುಪ್ಸಾ?
ಕೊವಿಡ್ 2ನೇ ಅಲೆಯನ್ನು ನಿಯಂತ್ರಿಸಲು ಶಾಲೆಗಳನ್ನು ಬಂದ್ ಮಾಡಲಾಗಿದ್ದು, ಇನ್ನೂ ಶಾಲೆಗಳನ್ನು ತೆರೆಯುವ ಬಗ್ಗೆ ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿಲ್ಲ. ಈ ನಡುವೆ ಸರ್ಕಾರದ ವಿರುದ್ಧ ಖಾಸಗಿ ಶಿಕ್ಷಣ ಸಂಸ್ಥೆಗಳು ತಿರುಗಿ ಬಿದ್ದಿದ್ದು, ಸರ್ಕಾರ ಶಾಲೆ ತೆರೆಯುವಿಕೆಯ ಬಗ್ಗೆ ನಿರ್ಧಾರ ಕೈಗೊಳ್ಳದಿದ್ದರೆ, ನಾವೇ ಶಾಲೆಗಳನ್ನು ತೆರೆಯುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಶಾಲೆಗಳನ್ನು ತೆರೆಯುವ ಬಗ್ಗೆ ರುಪ್ಸಾ ಸಂಘಟನೆ ಜುಲೈ 31ರವರೆಗೆ ಡೆಡ್ ಲೈನ್ ನೀಡಿತ್ತು. ಆದರೆ, ಇನ್ನೂ ಕೂಡ ಶಾಲೆಗಳನ್ನು ತೆರೆದಿಲ್ಲ. ಹೀಗಾಗಿ ನಾಳೆಯಿಂದ(ಆಗಸ್ಟ್ 2) ಶಾಲೆಗಳನ್ನು ತೆರೆಯಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ. ರಾಜ್ಯದಲ್ಲಿ ಸದ್ಯ ಸಚಿವ ಸಂಪುಟ ಕೂಡ ರಚನೆಯಾಗಿಲ್ಲ. ಹೀಗಾಗಿ ಶಾಲಾ ಆರಂಭದ ವಿಚಾರ ಇನ್ನಷ್ಟು ವಿಳಂಬವಾಗುತ್ತದೆ ಎನ್ನುವ ಅಭಿಪ್ರಾಯಗಳ ನಡುವೆಯೇ ರುಪ್ಸಾ ಸರ್ಕಾರದ ಆದೇಶವಿಲ್ಲದಿದ್ದರೂ, ಶಾಲಾ ಆರಂಭಕ್ಕೆ ಮುಂದಾಗಿದೆ ಎಂದು ವರದಿಯಾಗಿದೆ.
ಇನ್ನೂ ಶಾಲಾ ಆರಂಭದ ಬಗ್ಗೆ ಇಂದು ರುಪ್ರಾ ಸಂಘಟನೆ ಸುದ್ದಿಗೋಷ್ಠಿ ನಡೆಸಲಿದೆ ಎಂದು ಹೇಳಲಾಗಿದೆ. ರುಪ್ರಾ ಅಧ್ಯಕ್ಷ ಲೇಪಾಕ್ಷಿ ಸುದ್ದಿಗೋಷ್ಠಿ ನಡೆಸುತ್ತಾರೆ ಎಂದು ತಿಳಿದು ಬಂದಿದ್ದು, ಆಗಸ್ಟ್ 1ರಂದು ಮಧ್ಯಾಹ್ನ 12 ಗಂಟೆಯ ವೇಳೆ ಸುದ್ದಿಗೋಷ್ಠಿ ನಡೆಯಲಿದೆ ಎಂದು ತಿಳಿದು ಬಂದಿದೆ..

ವರದಿ. ಪ್ರತಾಪ್, ಸಿ, ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;