ಸಿಂಧನೂರು: ಬಹುಜನ ಸಮಾಜ ಪಕ್ಷ ವತಿಯಿಂದ ನಗರಸಭೆ ಪೌರಾಯುಕ್ತರಿಗೆ ಮನವಿ ಪತ್ರ ಸಲ್ಲಿಕೆ.
ನಗರದ ಪಿಡಬ್ಲ್ಯೂಡಿ ಕ್ಯಾಂಪಿನ ಕೇಂದ್ರ ಭಾಗದಲ್ಲಿರುವ ಡಾ. ಬಿ.ಆರ್.ಅಂಬೇಡ್ಕರ್ ವೃತ್ತದ ರಾಷ್ಟ್ರೀಯ ಹೆದ್ದಾರಿಯ ಸಿಸಿ ರಸ್ತೆ ಕಾಮಗಾರಿ ಅಗಲೀಕರಣ ಸಂದರ್ಭದಲ್ಲಿ ತಾಲೂಕಿನ ಎಲ್ಲಾ ಇಲಾಖೆಯ ಹಿರಿಯ ಅಧಿಕಾರಿಗಳು ,ಶಾಸಕರು ,ಜನಪ್ರತಿನಿಧಿಗಳು ಹಾಗೂ ಎಲ್ಲಾ ಸಮುದಾಯದ ಹಿರಿಯ ಮತ್ತು ಯುವಕ ಮುಖಂಡರ ನೇತೃತ್ವದಲ್ಲಿ ಒಂದು ಪೂರ್ವಭಾವಿ ಸಭೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವೃತ್ತವನ್ನು ಅಭಿವೃದ್ಧಿ ಗೊಳಿಸಲು ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ ಸ್ಥಳಾಂತರ ಮಾಡಿದ ನಂತರ ಯಾವೊಬ್ಬ ರಾಜಕಾರಣಿಯೂ, ಅಧಿಕಾರಿಯೂ ತಿರುಗಿ ಕೂಡಾ ನೊಡಿಲ್ಲ.ಕೇವಲ ಜಯಂತಿಯ ದಿನದಂದು ಮಾತ್ರ ರಾಜಕೀಯ ನಾಯಕರು, ಅಧಿಕಾರಿಗಳು ಭರವಸೆಗಳನ್ನು ಕೊಡುತ್ತಾರೆ ವಿನ: ಯಾವುದೇ ಅಭಿವೃದ್ಧಿ ಕೆಲಸ ಮಾಡಿರುವುದಿಲ್ಲ.ಹೆಚ್ಚು ಕಡಿಮೆ ಎರಡು ವರ್ಷಗಳೇ ಗತಿಸಿವೆ, ಹಾಗಾಗಿ ತಾವುಗಳು ಎಸ್ಸಿ-ಎಸ್ಟಿ ಅನುದಾನದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ರವರ ಮೂರ್ತಿ ಪ್ರತಿಷ್ಠಾಪನೆ ಮಾಡಲು ಗಾರ್ಡನ್ & ಇನ್ನಿತರ ಕಾಮಗಾರಿ ಮಾಡಲು ಸುಮಾರು 15 ಲಕ್ಷ ರೂ ಅನುದಾನ ಒದಗಿಸಿ ಕೊಡಬೇಕು.ಒಂದು ವೇಳೆ 15 ದಿನದೊಳಗೆ ಸರ್ಕಲ್ ಅಭಿವೃದ್ಧಿಗಗೊಳಿಸಲು ಅನುದಾನ ಕೊಡದಿದ್ದರೆ ಹೋರಾಟದ ಮೂಲಕ ಈ ಹಿಂದೆ ಇದ್ದ ಸ್ಥಳದಲ್ಲಿ ಭಾರತರತ್ನ, ಸಂವಿಧಾನ ಶಿಲ್ಪಿ, ಡಾ.ಬಿ.ಆರ್.ಅಂಬೇಡ್ಕರ್ ನಾಮಫಲಕ ಮರು ಸ್ಥಾಪನೆ ಮಾಡಲಾಗುವುದು ಇದಕ್ಕೆ ನಗರಸಭೆ ಆಡಳಿತವೆ ಜವಾಬ್ದಾರಿಯಾಗುತ್ತದೆ ಎಂದು ಬಿಎಸ್ಸಿ ತಾಲೂಕು ಅಧ್ಯಕ್ಷ ಹುಲುಗಪ್ಪ ಮಲ್ಕಾಪೂರು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಚನ್ನಬಸವ ಅಮಿನಗಡ ಬಿಎಸ್ಪಿ ನಗರ ಘಟಕ ಅಧ್ಯಕ್ಷರು, ಸಂತೋಷ. ಏಳುರಾಗಿ ಕ್ಯಾಂಪ್ ನಗರ ಘಟಕ ಪ್ರಧಾನ ಕಾರ್ಯದರ್ಶಿ, ನಿಂಗರಾಜ್ ಮಲ್ಲಾಪುರ್ ನಾಗಲಿಂಗ ಜವಳಗೇರಾ ಇನ್ನೂ ಅನೇಕ ಮುಖಂಡರು ನಾಮಪತ್ರ ಸಲ್ಲಿಕೆ ವೇಳೆ ಭಾಗವಹಿಸಿದ್ದರು…

ವರದಿ.ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
