ಸಿಂಧನೂರು :ಮಾನವೀಯತೆ ಮೆರೆದ ಶಾಸಕರ ಪುತ್ರ ಅಭಿಷೇಕ್ ನಾಡಗೌಡ.
ನಗರದಲ್ಲಿ 17 ನೇ ವಾರ್ಡಿನ ನಿವಾಸಿ ಸರಸ್ವತಿ ಎಂಬ ಮಹಿಳೆ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಳು.ಇಂದು ಸಾರ್ವಜನಿಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಆ ಮಹಿಳೆಗೆ ಐದು ವರ್ಷದ ಮಗು ಇದ್ದು ಆ ಮಗು ತನ್ನ ತಾಯಿಯ ಶವವನ್ನು ಸಂಸ್ಕಾರ ಮಾಡಲು ಅಂಗಲಾಚುತ್ತಿರುವ ಪತ್ರಿಕೆಯ ವರದಿಗಾರ ಆಸ್ಪತ್ರೆಗೆ ತೆರಳಿ ಮಗುವಿನಿಂದ ಮಾಹಿತಿ ಪಡೆದು ಶಾಸಕರ ಸಹೋದರಾದ ಬಸವರಾಜ್ ನಾಡಗೌಡರಿಗೆ ವಿಷಯ ತಿಳಿಸಿದಾಗ ಬಸವರಾಜ್ ನಾಡಗೌಡ ಮತ್ತು ಶಾಸಕರ ಪುತ್ರ ಅಭಿಷೇಕ್ ನಾಡಗೌಡ ಆಸ್ಪತ್ರೆಗೆ ಬಂದು ಶವವನ್ನು ಖುದ್ದು ತಾವೇ ಮುಂದುನಿಂತು ಅಂತಿಮ ಶವ ಸಂಸ್ಕಾರ ನೆರವೇರಿಸಿದರು. ನಂತರ ಆ ಮಹಿಳೆಯ ಸಂಬಂಧಿಕರೊಡನೆ ಮಗುವನ್ನು ಕಳಿಸಿದರು, ಮಗುವಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಸೂಚನೆ ನೀಡಿದರು.ಸರ್ಕಾರಿ ಸೌಲಭ್ಯಗಳನ್ನು ಒದಗಿಸಿಕೊಡುತ್ತೇವೆ.ಮಗುವಿನ ಜೀವನಕ್ಕೆ ಏನಾದರೂ ಸಮಸ್ಯೆ ಇದ್ದರೆ ನಮಗೆ ತಿಳಿಸಿ ಎಂದು ಆ ಮಹಿಳೆಯ ಸಂಬಂಧಿಕರಿಗೆ ಭರವಸೆ ನೀಡಿದರು.
ತಂದೆ ಶಾಸಕರು ಆಗಿದ್ದಾಗ ಅವರ ಮಕ್ಕಳು ದೇಶ-ವಿದೇಶ ಸುತ್ತಾಡುತ್ತಾ ಕಾಲ ಕಳೆಯುವ ಕಾಲದಲ್ಲಿ ತಂದೆಗೆ ತಕ್ಕ ಹಾಗೆ ಬಡಜನರ ಪರ ಸರಳತೆ ಮೆರೆದಿದ್ದಾರೆ. ತಾಲೂಕಿನ ಕ್ಷೇತ್ರದ ಶಾಸಕರ ಪುತ್ರ ಅಭಿಷೇಕ್ ನಾಡಗೌಡ ಅವರು ಕ್ಷೇತ್ರದಲ್ಲಿ ಸಾಮಾಜಿಕ ಕೆಲಸ, ಮತ್ತು ಯಾರಿಗಾದರೂ ಏನೇ ಸಮಸ್ಯೆ ಇದ್ದರೂ ತಕ್ಷಣ ಸಮಸ್ಯೆಯನ್ನು ಬಗೆಹರಿಸುವ ಮನಸುಳ್ಳವರಾಗಿದ್ದಾರೆ. ಈ ಸಂದರ್ಭದಲ್ಲಿ 17 ನೇ ವಾರ್ಡಿನ ಸದಸ್ಯರ ಪುತ್ರರಾದ ಬಿ. ರಾಘು,ಬಿ.ಅಜಯ್, 14 ನೇ ವಾರ್ಡಿನ ಸದಸ್ಯ ಶರಣಪ್ಪ ಉಪ್ಪಲದೊಡ್ಡಿ, ಶಿವರಾಜ್ ಬಾಗಲವಾಡ,ನದಿಮುಲ್ಲಾ, ಮರಿಯಪ್ಪ, ರಾಜಶೇಖರ್ , ಮುಸ್ಲಿಂ ಯುವಕರು , ಅಭಿಷೇಕ್ ನಾಡಗೌಡ ಅಭಿಮಾನಿಗಳು ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ್ದರು…

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
