;

ಸುಭೀಕ್ಷಾ ಸಾವಯವ ಮಳಿಗೆ ಉದ್ಘಾಟನೆ…!!!

ಸುಭೀಕ್ಷಾ ಸಾವಯವ ಮಳಿಗೆ ಉದ್ಘಾಟನೆ

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹುಲಿಕೆರೆ ಗ್ರಾಮದ ಸಾವಯವ ಕೃಷಿಕ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿಶ್ವೇಶ್ವರ ಸಜ್ಜನ್ ರವರ ಆನಂದ್ ವಿಹಾರ ಹೋಟೆಲ್ ನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತೀಯ ವ್ಯವಸ್ಥೆ ಪ್ರಮುಖರಾಗಿರುವ ಶ್ರೀ ಮಂಗೇಶ ಭೇಂಡೆ ಜಿ, ಸಾವಯವ ಕೃಷಿ ಮಿಷನ್ ನ ಅಧ್ಯಕ್ಷರು ಹಾಗೂ ಸುಭಿಕ್ಷಾ ಆರ್ಗ್ಯಾನಿಕ್ ಫರ್ಮರ್ಸ್ ಮಲ್ಟಿ ಸ್ಟೇಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ನ ಅಧ್ಯಕ್ಷರು ಆನಂದ್ ಹಾಗೂ ವಿಶ್ವೇಶ್ವರ ಸಜ್ಜನ್ ಸುಲೋಚನಾ ಸಜ್ಜನ್ ಸೇರಿ ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪ ಪುಷ್ಪಾರ್ಚನೆ ಮಾಡುವುದರ ಮೂಲಕ ಅನಾವರಣಗೊಳಿಸಿದರು.


ಪ್ರತಿಯೊಬ್ಬ ರೈತರು ಸಾವಯವ ಮುಖೇನ ಬೆಳೆಗಳಾದ ನವಣೆ ಅರ್ಕ ಸಾವೆ ಮುಂತಾದ ಸಿರಿಧಾನ್ಯಗಳನ್ನು ಬೆಳೆಯಬೇಕು. ಅರಣ್ಯ ಕೃಷಿ ಮಾಡುವುದರಿಂದ ರೈತರಿಗೆ ಹೆಚ್ಚು ಲಾಭವಾಗುತ್ತದೆ ಎಂದು ಸಾವಯವ ಕೃಷಿಕರಾದ ಮತ್ತು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ವಿಶ್ವೇಶ್ವರ ಸಜ್ಜನ್ ತಿಳಿಸಿದರು.
ಕರ್ನಾಟಕದಲ್ಲಿ ಸಾವಯುವ ಕೃಷಿ ರೈತರು ಬೆಳೆದ ಬೆಳೆಗಳಿಗೆ ಸಮರ್ಪಕವಾದ ಮಾರುಕಟ್ಟೆಯಲ್ಲಿ ಯೋಗ್ಯವಾದ ಬೆಲೆ ದೊರೆಯುವಂತಾಗಬೇಕು.

ನಂತರ ಸುಭಿಕ್ಷಾ ಆರ್ಗ್ಯಾನಿಕ್ ಫಾರ್ಮರ್ ಮಲ್ಟಿಸ್ಟೇಟ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ನಲ್ಲಿ 1 ಲಕ್ಷ ಸಾವಯವ ರೈತರ ಸದಸ್ಯತ್ವ ನೋಂದಣಿ ಮಾಡುವ ಗುರಿ. ಪ್ರತಿ ಮನೆಗಳು ಸಾವಯವ ಸಿರಿಧಾನ್ಯಗಳ ಬಳಸುವಂತಹ ಮನೆಗಳ ಆಗಬೇಕು ಎಂದು ಸಾವಯವ ಕೃಷಿ ಮಿಷನ್ ನ ಅಧ್ಯಕ್ಷರು ಹಾಗೂ ಸುಭಿಕ್ಷಾ ಆರ್ಗಣಿಕ್ ಫರ್ಮರ್ಸ್ ಮಲ್ಟಿಸ್ಟೇಟ್ ಕೋ-ಆಪರೇಟಿವ್ ಲಿ ಅಧ್ಯಕ್ಷರಾದ ಆನಂದ್ ತಿಳಿಸಿದರು.
ಸಾವಯವ ಸಿರಿಧಾನ್ಯ ಬೆಳೆಗಳು ಬೆಳೆಯುವುದರಿಂದ ರೈತರ ಆದಾಯ ದ್ವಿಗುಣಗೊಳ್ಳುತ್ತದೆ ಮತ್ತು ಅರ್ಕ ಸಾವೆ ನವಣೆ ಕೂದಲ ಕೊರ್ಲೆ ಇನ್ನು ಮುಂತಾದ ಸಿರಿ ಧಾನ್ಯಗಳನ್ನು ಬಳಸುವುದರಿಂದ ಆರೋಗ್ಯವಂತ ಸಮಾಜ ನಿರ್ಮಾಣವಾಗುತ್ತದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ವ್ಯವಸ್ಥಾ ಪ್ರಮುಖರಾದ ಮಂಗೇಶ್ ಬೆಂಡೆ ಜಿ ತಿಳಿಸಿದರು.


ಇದೇ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲೆಯ ವಿಭಾಗ ಪ್ರಚಾರಕರಾದ ಸೋಮಶೇಖರ್ ಜಿ. ಅರವಿಂದ್ ಸಜ್ಜನ್. ವಿವೇಕಾನಂದ ಸಜ್ಜನ್. ಮಹೇಶ್ ಶಿಕ್ಷಕರು. ಅನಂತಪದ್ಮನಾಭ ಕೂಡ್ಲಿಗಿ. ಕೆಜಿ ಬಸವರಾಜ್ ಕೆಂಚಮಲ್ಲನಹಳ್ಳಿ. ಬಸವಕುಮಾರ ಹುಲಿಕೆರೆ. ಪೂಜಾರಹಳ್ಳಿ ತಿಪ್ಪೇಸ್ವಾಮಿ. ಕೊಟ್ರೇಶ್ ನಿಂಬಳಗೆರೆ.ಪುನೀತ್ ಐನಾಪುರ.ಭರತ್ ಸಜ್ಜನ್. ಬಸವರಾಜ ರಂಗನಾಥನ ಹಳ್ಳಿ. ಸಂಗಮೇಶ್ವರ ಸ್ವಾಮಿ ಐನಳ್ಳಿ. ಶ್ರೀಕಂಠಸ್ವಾಮಿ ಹುಲಿಕೆರೆ. ಬಾಬು ಹುಲಿಕೆರೆ.ಸಂಸ್ಥೆಯ ಸಿಇಓ ಚೈತ್ರ .ಗಿರೀಶ್. ಶಂಭುಲಿಂಗ ಹಳಗೆರಿ. ಅಮರೇಶ.ಮಂಜುನಾಥ.ಸೇರಿ ಸಂಸ್ಥೆಯ ಸದಸ್ಯರು ಹಾಗೂ ಅನೇಕ ಸಾವಯವ ಕೃಷಿಕರು ಸೇರಿ ಇತರರು ಇದ್ದರು..


ವರದಿ ಕೆಎಸ್ ವೀರೇಶ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;