ಸಿಂಧನೂರು : ಬಿಸಿಯೂಟ ಯೋಜನೆಯಡಿ ನೇರ ನಗದು ವರ್ಗಾವಣೆ ತಡೆಗೆ ಹಾಗೂ ಬಿಸಿಯೂಟ ನೌಕರರ ಬೇಡಿಕೆ ಈಡೇರಿಸಲು ಒತ್ತಾಯಿಸಿ ಮನವಿ ಪತ್ರ ಸಲ್ಲಿಕೆ.
ಮಧ್ಯಾಹ್ನದ ಬಿಸಿಯೂಟ ಯೋಜನೆಯ ಪ್ರಮುಖ ಉದ್ದೇಶ ಮಕ್ಕಳಿಗೆ ಶಾಲಾ ಅವಧಿಯಲ್ಲಿ ಬಿಸಿ ಬಿಸಿ ಊಟ ನೀಡುವುದರ ಮೂಲಕ ಅಪೌಷ್ಟಿಕತೆ ಹೋಗಲಾಡಿಸುವುದು, ಶಿಕ್ಷಣದಲ್ಲಿ ಏಕಾಗ್ರತೆ ಹೆಚ್ಚಿಸುವುದು ಆಗಿದೆ. ಅದರೆ ಕಳೆದ 2020 ಮಾರ್ಚ್ ತಿಂಗಳಿನಿಂದ ಕರೋನಾ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಶಾಲೆಗಳು ಮುಚ್ಚಿವೆ. ಶಾಲೆಯಲ್ಲಿ ಬಿಸಿಯೂಟ ನೀಡುವ ಪರಿಸ್ಥಿತಿ ಸಹ ಇರದ ಕಾರಣ ಈ ಮಕ್ಕಳಿಗೆ ಸಿಗಬೇಕಾದ ಅಹಾರವನ್ನು,ಧಾನ್ಯಗಳನ್ನು, ನೀಡುವ ಮುಖಾಂತರ ಅವರ ಮನೆಗಳಿಗೆ ನೀಡಲಾಗುತ್ತಿದೆ 2021ರ ಸಾಲಿನಲ್ಲಿ ಶಾಲೆಗಳು ಇದುವರೆಗೂ ಪ್ರಾರಂಭವಾಗಿರುವುದಿಲ್ಲ. ಕೇಂದ್ರ ಸರ್ಕಾರವು 15 ಜೂನ್ 2021 ರಂದು D. O. No, 1-2/2021-Desk (MDM) ಆದೇಶದ ಪ್ರಕಾರ ಸುಮಾರು 80 ಕೋಟಿ ಫಲಾನುಭವಿ ಮಕ್ಕಳಿಗೆ ಬೇಸಿಗೆ ರಜಾ ಅವಧಿಯ ಆಹಾರ ಧಾನ್ಯಗಳ ಬದಲಿಗೆ ಮೇ-ಜೂನ್ ತಿಂಗಳ ಹಣವನ್ನು ನೇರ ಮಕ್ಕಳ ಖಾತೆಗೆ ಹಾಕಲು ಆದೇಶಿಸಿದೆ. ಫಲಾನುಭವಿಗಳಿಗೆ ನೇರ ನಗದು ಕೊಟ್ಟರೆ ಅದು ಆಹಾರಕ್ಕೆ ಖರ್ಚು ಆಗುತ್ತದೆ.ಮತ್ತು ಮಕ್ಕಳಿಗೆ ಆಹಾರ ದಕ್ಕುತ್ತದೆ ಎಂಬುದಕ್ಕೆ ಖಾತ್ರಿಯಿಲ್ಲ, ಹಲವು ವರದಿಗಳು ಕೂಡ ಇದನ್ನು ಪುಷ್ಟೀಕರಿಸಿದೆ. ಅಕ್ಷರ ದಾಸೋಹ ಯೋಜನೆಯ ಉದ್ದೇಶ ಶಾಲಾ ಮಕ್ಕಳಿಗೆ ಆಹಾರವನ್ನು ನೇರವಾಗಿ ಉಣಬಡಿಸುವುದು.D. B. T. ಯೋಜನೆಯು ಈ ಉದ್ದೇಶಕ್ಕೆ ತದ್ವಿರುದ್ಧವಾಗಿದೆ. ಆದ್ದರಿಂದ ನಮ್ಮ ರಾಜ್ಯದಿಂದ ಶಾಲಾ ಮಕ್ಕಳಿಗೆ D. B. T. ಕೊಡಬಾರದು ಮತ್ತು ರಾಜ್ಯದಲ್ಲಿ ಬೇಸಿಗೆ ರಜೆಯ ಸಂದರ್ಭದಲ್ಲಿ ಆಹಾರ ಪದಾರ್ಥಗಳನ್ನು ಕೊಟ್ಟು ಒಳ್ಳೆಯ ಗುಣಾತ್ಮಕ ಅನುಭವ ನಮ್ಮ ರಾಜ್ಯಕ್ಕೆ ಇರುವದರಿಂದ H. R. D. ಇಲಾಖೆ ಕಳಿಸಿರುವ ಆದೇಶವನ್ನು ಜಾರಿ ಮಾಡಬಾರದೆಂದು ಬಿಸಿಯೂಟ ನೌಕರರ ಸಂಘ ತಮ್ಮ ಬೇಡಿಕೆಯನ್ನು ಒತ್ತಾಯಿಸಿದೆ.

1)ಬಿಸಿಯೂಟ ನೌಕರರ ಎಪ್ರಿಲ್ ತಿಂಗಳಿನಿಂದ ಶಾಲೆ ಪ್ರಾರಂಭವಾಗುವವರೆಗೂ ವೇತನ ಪಾವತಿ ಮಾಡಬೇಕು. 2) ಬಿಸಿಯೂಟ ನೌಕರರಿಗೆ ಮುಂದಿನ ಕನಿಷ್ಠ 6 ತಿಂಗಳ ಪಡಿತರ ನೀಡಬೇಕು. 3)ಬಿಸಿಯೂಟ ನೌಕರರ ಕೆಲಸ ಖಾಯಂ ಮಾಡಿ ಶಾಸನಾತ್ಮಕ ಸವಲತ್ತುಗಳನ್ನು ಜಾರಿ ಮಾಡಬೇಕು. 4)ಲಾಕ್ ಡೌನ್ ಅವಧಿಯಲ್ಲಿ ಮುಂದಿನ 6 ತಿಂಗಳು ಪ್ರತಿ ತಿಂಗಳು ರೂ. 7500 /- ನೀಡಬೇಕು.5)ಬಿಸಿಯೂಟ ನೌಕರರಿಗೆ ಎಲ್ಐಸಿ ಆಧಾರಿತ ಪೆನ್ಶನ್ ನಿಗದಿ ಮಾಡಬೇಕು. 6)ಕೋವಿಡ್ 19 ನ್ನು ವೈದ್ಯಕೀಯ ತುರ್ತುಸ್ಥಿತಿ ಎಂದು ಪರಿಗಣಿಸಿ ಈ ನೌಕರರಿಗೆ ಹಾಗೂ ಕುಟುಂಬಗಳಿಗೆ ಚಿಕಿತ್ಸೆಯ ವೆಚ್ಚ ಸರ್ಕಾರವೇ ಭರಿಸಬೇಕು. 7) ಕೋವಿಡ್-19 ರ ಭಾಗವಾಗಿ ಕ್ವಾರಂಟೈನಲ್ಲಿದ್ದವರಿಗೆ ಅಡುಗೆ ಮಾಡಿ ಬಡಿಸುತ್ತಿರುವ ನೌಕರರಿಗೆ ವೇತನ ಪಾವತಿಸಬೇಕು.8)I.L.C ಶಿಫಾರಸುಗಳನ್ನು ಜಾರಿಮಾಡಬೇಕು. ಎಂದು ಹಕ್ಕೋತ್ತಾಯಿಸಿದರು.
ಈ ಸಂದರ್ಭದಲ್ಲಿ ರೇಣುಕಮ್ಮ ಜಿಲ್ಲಾ ಅಧ್ಯಕ್ಷರು, ವಿಶಾಲಾಕ್ಷಮ್ಮ ತಾಲೂಕು ಅಧ್ಯಕ್ಷರು, ಶರಣಮ್ಮ ಪಾಟೀಲ ಕಾರ್ಯದರ್ಶಿ, ಶೇಕ್ಷಾಖಾದ್ರಿ ಗೌರವಾಧ್ಯಕ್ಷರು, ಅಕ್ಷರ ದಾಸೋಹ ಬಿಸಿಯೂಟ ನೌಕರರ ಸಂಘ (ಸಿಐಟಿಯು) ತಾಲೂಕು ಸಮಿತಿ ಸಿಂಧನೂರು, ಬಿಸಿಯೂಟ ನೌಕರರು ಭಾಗವಹಿಸಿದ್ದರು…
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
