ದಿನಾಂಕ 18/07/2021 ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಬಾಗಳಿ ಗ್ರಾಮದಲ್ಲಿ ಇಂದು ಹರಪನಹಳ್ಳಿಯ ನೆಚ್ಚಿನ ಮನೆ ಮಗಳು *ಶ್ರೀಮತಿ ಎಂಪಿ ವೀಣಾ ಮಹಾಂತೇಶ್*ಅವರು ಕೋವಿಡ್ ಕಾರಣದಿಂದ ಮದುವೆ ಸಮಾರಂಭಗಳು ರದ್ದಾಗಿ ಸಂಕಷ್ಟಕ್ಕೀಡಾದ, ಆಧುನಿಕತೆಯ ಪ್ರಭಾವದಲ್ಲಿ ನಶಿಸಿ, ಅಳಿವಿನ ಅಂಚಿನಲ್ಲಿರುವ ಸೋಬಾನ ಪದ ಹಾಡುವ ಕಲೆಯ ಗ್ರಾಮೀಣ್ ಮಹಿಳಾ ತಂಡದ,ಬಡ ಕಲಾವಿದರಿಗೆ ರೇಷನ್ ಕಿಟ್ ಮತ್ತು ಸೀರೆ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಮಹಿಳೆಯರು ಸೋಬಾನ ಪದ ಗಾಯನ ಮಾಡುವದರ ಮೂಲಕ ಎಂಪಿ ವೀಣಾಕ್ಕ ಅವರಿಗೆ ಹೃತ್ಪೂರ್ವಕ ಧನ್ಯವಾದ ಸಲ್ಲಿಸಿ ಕ್ಷೇತ್ರದ ವಿವಿಧ ವರ್ಗಗಳ ಸಮಸ್ಯೆ , ಅವಶ್ಯಕತೆಗಳನ್ನು ಅರಿತಿರುವ ವೀಣಾಕ್ಕ ನಮ್ಮ ಹರಪನಹಳ್ಳಿಯ ಜನಪ್ರತಿನಿಧಿಯಾಗಲಿ ಎಂಬ ಆಶಯ ವ್ಯಕ್ತಪಡಿಸಿ ಮನಃಪೂರ್ವಕವಾಗಿ ಶುಭಹಾರೈಸಿದರು..

ವರದಿ. ಪ್ರತಾಪ್, ಸಿ, ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
