;

ಅಗಲಿದ ದಲಿತ ಶಿಕ್ಷಕರಿಬ್ಬರಿಗೆ ಭಾವಪೂರ್ಣ ಶ್ರದ್ಧಾಂಜಲಿ ನುಡಿ ನಮನ…!!!

ವರದಿ ಜುಲೈ 18 ಕೂಡ್ಲಿಗಿ

ಅಗಲಿದ ದಲಿತ ಶಿಕ್ಷಕರಿಬ್ಬರಿಗೆ ಭಾವಪೂರ್ಣ ಶ್ರದ್ಧಾಂಜಲಿ ನುಡಿ ನಮನ:-

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು
ದಲಿತ ಸಂಘರ್ಷ ಸಮಿತಿ ಹಾಗೂ ದಲಿತ ವಿದ್ಯಾರ್ಥಿ ಒಕ್ಕೂಟ.ಚಂದ್ರಶೇಖರಪುರ.ಗ್ರಾಮ ಘಟಕದ ವತಿಯಿಂದ ಶ್ರದ್ಧಾಂಜಲಿ ನುಡಿ ನಮನ ಕಾರ್ಯಕ್ರಮ ಡಾ/ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ದಲ್ಲಿ ಮೆಣದಬತ್ತಿ ಬೆಳಗುವ ಮೂಲಕ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಮೌನಾಚರಣೆ ಮಾಡಲಾಯಿತು.

*ಅನೇಕ ವಿದ್ಯಾರ್ಥಿಗಳಿಗೆ ಅಕ್ಷರ ಕಲಿಸಿದ ಗ್ರಾಮದ ಹೆಚ್.ನಾಗಪ್ಪ.ಹಿರೆಹೆಗ್ಡಾಳ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಗುರುಗಳು.ಹಾಗೂ.ಖಾನಹೋಸಹಳ್ಳಿಯ ಸರ್ಕಾರಿ ಬಾಲಕಿಯರ ಪ್ರೌಢಶಾಲೆ.ಇಂಗ್ಲೀಷ್ ಶಿಕ್ಷಕರಾದ ಗಂಗಾಧರ ನಿಧಾನದಿಂದ ಶಿಕ್ಷಣ ಕ್ಷೇತ್ರಕ್ಕೆ ದೊಡ್ಡ ನಷ್ಟ ವಾಗಿದೆ ಎಂದು ಯುವ ಲೇಖಕ ಭೀಮರೆಡ್ಡಿ (ಕನಸು). ಮಾತನಾಡಿದರು.

ಇಂದಿನ ಯುಗದಲ್ಲಿ ಯಾವುದೇ ಫಲಾಪೇಕ್ಷೆ ಇಲ್ಲದೆ ಹೆಚ್.ನಾಗಪ್ಪ ಹಾಗೂ ಗಂಗಾಧರ ಶಿಕ್ಷಕರು ಇಂಗ್ಲಿಷ್ ವಿಷಯ ಬೋಧನೆ ಮಾಡುತ್ತಾ ಸಾವಿರಾರೂ ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿ ದ್ದಾರೆ.ಇವರುಗಳು ಮಾತೃ ಹೃದಯದ ವ್ಯಕ್ತಿಗಳಾಗಿ ದ್ದರು.ಅವರು ಇತರರನ್ನು ಸಂತೋಷದಲ್ಲಿ ತಾನು ಖುಷಿ ಕಾಣುವ ನಿಷ್ಕಲ್ಮಶವಾದ ವ್ಯಕ್ತಿ ಹಾಗೂ ಅತ್ಯುತ್ತಮ ಸಂಘಟನ ಚತುರ . ಸಂಗೀತಗಾರ.ಸ್ನೇಹಜೀವಿಗಳನ್ನ ಕಳೆದು ಕೋಂಡಿರುವುದು ಅತ್ಯಂತ ನೋವಿನ ಸಂಗತಿ ಯಾಗಿದೆ ಎಂದೇಳಿದರು.
ಇದಕ್ಕೂ ಮುಂಚಿತವಾಗಿ ಗೆಳೆಯರು ಶಿಕ್ಷಣ ಪ್ರೇಮಿಗಳು.ವಿದ್ಯಾರ್ಥಿಬಳಗದವರು.ಮೌನಚರಣೆ ಮಾಡುವುದರ ಮೂಲಕ ಆಗಲಿದ ದಲಿತ ಶಿಕ್ಷಕರಿಬ್ಬರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ದ.ಸಂ.ಸ.ಅದ್ಯಕ್ಷರಾದ ಹೆಚ್.ಎಸ್.ಶಿವರಾಜ್.ಶಂಶಾಕ್.ತಿಪ್ಪೇಸ್ವಾಮಿ.ಪರಶುರಾಮ.ಲಿಂಗರಾಜ್.ಗಿರೀಶ್.ಬಸವರಾಜ್.ಗುರುರಾಜ್.ಹಟ್ಟಿಯ ಯಜಮಾನರು ಪ್ರಮುಖರಿದ್ದರು.

ವರದಿ. ಬಸಣ್ಣಿ ಬಣವಿಕಲ್ಲು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;