ಕೂಡ್ಲಿಗಿ:ನಮ್ಮ ಹಣ ನಮಗೆ ಕೊಡಿ-ಸಿಐಟಿಯು ಆಗ್ರಹ…!!!

ಕೂಡ್ಲಿಗಿ:ನಮ್ಮ ಹಣ ನಮಗೆ ಕೊಡಿ-ಸಿಐಟಿಯು ಆಗ್ರಹ..
-ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ,ಸಿಐಟಿಯು ಹೋರಾಟಗಾರರು,ಮನೆಯಂಗಳದಲ್ಲಿ ತಮ್ಮ ಸಂಘಟನೆಯ ಕೆಲ ಪದಾಧಿಕಾರಿಗಳ ಸಹಯೋಗದಲ್ಲಿ ಪ್ರತಿಭಟಸಿದರು.
ಕೇಂದ್ರ ಸರ್ಕಾರ ಜನವಿರೋಧಿ ಕಾಯ್ದೆಗಳನ್ನ ರದ್ದುಗೊಳಿಸಬೇಕು,ಸರ್ಕಾರ ಕಾರ್ಮಿಕರಿಗೆ ತಲಾ ಮೂರು ಸಾವಿರ₹ ಘೋಷಿಸಿದೆ.ಪ್ರತಿ ಕಾರ್ಮಿಕರಿಗೆ ಹತ್ತು ಸಾವಿರ₹ ಪರಿಹಾರ ಮಂಜೂರು ಮಾಡಬೇಕು ಎಂದು ಸಿಐಟಿಯು ಮುಖಂಡ ಗುನ್ನಳ್ಳಿ ರಾಘವೇಂದ್ರ ಆಗ್ರಹಿಸಿದ್ದಾರೆ.ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಮಿಕರ ಕಲ್ಯಾಣ ನಿಧಿ ಹಣವನ್ನು, ಕಾರ್ಮಿಕರಿಗೇ ವಿನಯೋಗಿಸಬೇಕಿದ್ದು ಲಾಕ್ ಡೌನ್ ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ಪರಿಹಾರ ಹಣ ನೀಡಬೇಕಿದೆ ಎಂದಿದ್ದಾರೆ.ರೈತ ಹಾಗೂ ಕಾರ್ಮಿಕರ ವಿರೋಧಿ ನೀತಿ ಕಾಯ್ದೆಗಳನ್ನ ರದ್ದುಗೊಳಿಸಿ,ಇತರೆ ತಮ್ಮ ಹಕ್ಕೋತ್ತಾಯಗಳನ್ನು ಈಡೇರಿಸಬೇಕಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ
ಸಿಐಟಿಯು ಈ ಮೂಲಕ ಒತ್ತಾಯಿಸುತ್ತದೆ ಎಂದರು. ಕಾರ್ಮಿಕರಾದ ಬೆಲ್ದಾರ್ ಚಿನ್ನಾಪ್ರಪ್ಪ ಸೇರಿದಂತೆ ಹಲವು ಕಾರ್ಮಿಕರು ಇದ್ದರು.

ವರದಿ.ಡಿ.ಎಂ.ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend