ತಾಲೂಕಿನ ಅಭಿವೃದ್ಧಿ ಕೆಲಸಕ್ಕೆ, ಶ್ರಮಿಸುತ್ತೇನೆ ನೂತನ ತಹಸೀಲ್ದಾರ್,….!!!!

*ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು* ಕೂಡ್ಲಿಗಿ ತಾಲೂಕಿನ ನೂತನ ತಹಸೀಲ್ದಾರ್ ಆಗಿ ನೇಮಕಗೊಂಡ ಶ್ರೀ ಟಿ. ಜಗದೀಶ್ ರವರನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಘಟಕ ಕೂಡ್ಲಿಗಿ ವತಿಯಿಂದ ಸ್ವಾಗತ ಕೋರಲಾಯಿತು ಈ ಸಂದರ್ಭದಲ್ಲಿ ತಹಸೀಲ್ದಾರ್ ರಾದ ಜಗದೀಶ್ ರವರು ಕೂಡ್ಲಿಗಿ ತಾಲೂಕಿನ ಸಮಗ್ರ ಅಭಿವೃದ್ಧಿ ನಮ್ಮ ಧ್ಯೇಯ ಸರ್ಕಾರದ ಸರ್ವ ಸೌಲಭ್ಯ ಗಳನ್ನು ಯಾವುದೇ ತಾರತಮ್ಯವಿಲ್ಲದೆ ಎಲ್ಲರಿಗೂ ಮುಟ್ಟಿಸುವ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಹಾಗೂ ಅತೀ ಶೀಘ್ರದಲ್ಲಿ sc, st ಹಾಗೂ obc ಜನಾಂಗದ ಎಲ್ಲಾ ನಾಯಕರೊಂದಿಗೆ ಚರ್ಚೆ ಮಾಡಿ ಸಮಸ್ಯೆಗಳ ನಿರ್ಮೂಲನೆ ಮಾಡುವಲ್ಲಿ ನಿಮ್ಮೆಲ್ಲರ ಸಹಕಾರ ಅತ್ಯಗತ್ಯ ಎಂದು ಹೇಳಿದರು ಹಾಗೂ ಬಡತನದಿಂದ ಕೂಡಿರುವ ತಾಲೂಕನ್ನು ಸಾಧ್ಯವಾದಷ್ಟು ಅಭಿವೃದ್ಧಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು ಈ ಸಂದರ್ಭದಲ್ಲಿ ಎಸ್. ದುರುಗೇಶ್ ಜಿಲ್ಲಾ ಸಂಚಾಲಕರು ವಿಜಯನಗರ ಜಿಲ್ಲೆ, ಕೆ. ಪರಶುರಾಮ್, ಸಂಚಾಲಕರು, ಡಿ ಎಂ ಈಶ್ವರಪ್ಪ ತಾಲ್ಲೂಕು ಡಿ ಎಸ್ ಎಸ್ ಸಂಘಟನೆ ಸಂಚಾಲಕರು ಸಿದ್ದಾಪುರ, ಬಿ. ಮಹೇಶ್ ತಾಲೂಕು ಸಂಘಟನಾ ಸಂಚಾಲಕರು, ದುರುಗೇಶ್ ಬಡೇಲಡಕು, ಡಿ ಎಸ್ ಎಸ್ ಸಂಚಾಲಕ ತಿಪ್ಪೇಹಳ್ಳಿ ಮಾರೇಶ್ ತಿಪ್ಪೇಸ್ವಾಮಿ ಮತ್ತಿತರರು ಇದ್ದರು.

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend