ಕೂಡ್ಲಿಗಿ: ಮರಳಿ ಬಾರದೂರಿಗೆ. ಎಎಸೈ ಪಯಣ-ಸಂತಾಪ…!!!

*ಕೂಡ್ಲಿಗಿ: ಮರಳಿ ಬಾರದೂರಿಗೆ. ಎಎಸೈ ಪಯಣ-ಸಂತಾಪ*-

ವಿಜಯನಗರ ಜಿಲ್ಲೆ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಕೊರೋನಾ ಛಾಯೆ ಆವರಿಸಿದೆ,ಈಗಾಗಲೇ ಹಲವು ದಿನಗಳ ಹಿಂದೆ ಆರು ಜನ ಪೊಲೀಸ್ ಸಿಬ್ಬಂದಿಗೆ ಕೊರೋನಾ ಸೋಂಕು ತಗುಲಿತ್ತು,ಆವರೆಲ್ಲರೂ ಚಿಕಿತ್ಸೆ ಪಡೆದು ಸಂಪೂರ್ಣ ಗುಣಮುಖರಾಗಿದ್ದಾರೆ.
ಆದ್ರೆ ಎಎಸೈ ವಿರುಪಾಕ್ಷಪ್ಪ ಎಂಬುವವರನ್ನು ಸೋಂಕು ಬಲಿತೆಗೆದುಕೊಂಡಿದ್ದು,ಇದು ಅವರ ಕುಟುಂಬ ಮಾತ್ರವಲ್ಲ ಠಾಣೆಯ ಸಿಬ್ಬಂದಿಯನ್ನ ಮತ್ತು ನಾಗರೀಕರನ್ನ ದುಖಃಕ್ಕೀಡುಮಾಡಿದೆ.ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಎಎಸೈ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ವಿರುಪಾಕ್ಷಪ್ಪ(58),ಕೊರೋನಾಗೆ ಬಲಿಯಾಗಿದ್ದಾರೆ.ಇವರು ಮೂಲತಃ ಸಂಡೂರು ತಾಲೂಕು ಚೋರನೂರು ಗ್ರಾಮದವರಾಗಿದ್ದು,ಅವರು ಹಲವು ವರ್ಷಗಳಿಂದ ಕೂಡ್ಲಿಗಿ ಠಾಣೆಯಲ್ಲಿ ಕರ್ಥವ್ಯ ನಿರ್ವಹಿಸುತ್ತಿದ್ದರು.ಅವರು ಕಳೆದ ಹಲವು ದಿನಗಳಿಂದ ಕೊರೋನಾ ಸೋಂಕಿನಿಂದ ಬಳಲುತಿದ್ದು.ಚಿಕಿತ್ಸೆ ದಾಖಲಾಗಿದ್ದರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ, ಪೊಲೀಸ್ ಇಲಾಖಾ ಉನ್ನತಾಧಿಕಾರಿಗಳು ಮತ್ತು ಕೂಡ್ಲಿಗಿ ಡಿವೈಎಸ್ಪಿ ಜಿ.ಹರೀಶ,ಸಿಪಿಐ ವಸಂತ ಆಸೋದೆ,ಪಿಎಸೈ ಸುರೇಶ ಸೇರಿದಂತೆ ಠಾಣೆಯ ಅಧಿಕಾರಿಗಳು,ಸಿಬ್ಬಂದಿವರ್ಗ,ನಾಗರೀಕರು,ಜನಪ್ರತಿನಿಧಿಗಳು,ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು ವಿರುಪಾಕ್ಷಪ್ಪರ ಅಗಲಿಕೆಗೆ ಸಂತಾಪ ವ್ಯೆಕ್ತಪಡಿಸಿದ್ದಾರೆ…

 

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend