ಕಾನಹೊಸಹಳ್ಳಿ ಬಸ್ ನಿಲ್ದಾಣದ ಕಳಪೆ ಕಾಂಪೌಂಡ್ ದುರಸ್ಥಿಗೆ -ನಾಡ ಕಚೇರಿಗೆ ಮನವಿ.

ಕಾನಹೊಸಹಳ್ಳಿ ಬಸ್ ನಿಲ್ದಾಣದ ಕಳಪೆ ಕಾಂಪೌಂಡ್ ದುರಸ್ಥಿಗೆ -ನಾಡ ಕಚೇರಿಗೆ ಮನವಿ.

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿ K.S.R.T.C. ಬಸ್ ನಿಲ್ದಾಣದ ಸುತ್ತ ನಿರ್ಮಿಸಿರುವ ಕಂಪೌಂಡ್ ಕಳಪೆ ಕಾಮಗಾರಿ ಆಗಿದೆ. ಮಳೆ ಬಂದು ರಸ್ತೆಯಲ್ಲಿ ಹರಿಯುವ ನೀರು ಕಾಂಪೌಂಡಿನ ಬುನಾದಿ ಒಳಗೆ ನುಗ್ಗಿ ಕಾಂಪೌಂಡ್ ತಳ ಭಾಗ ಸಂಪೂರ್ಣ ಬಿರುಕು ಬಿಟ್ಟಿರುತ್ತದೆ. ಕಾಂಪೌಂಡ್ ನಿರ್ಮಿಸಿ ಎರಡು ತಿಂಗಳಲ್ಲಿಯೇ ಈ ರೀತಿಯಾಗಿರುವುದರಿಂದ ಸರಿಯಾದ ರೀತಿಯಲ್ಲಿ ಕಾಂಪೌಂಡ್ ನಿರ್ಮಾಣ ಮಾಡದೆ ಕಾಂಪೌಂಡ್ ಸುತ್ತಲೂ ಮಣ್ಣನ್ನು ಹಾಕುತ್ತಿದ್ದಾರೆ. ಆದುದರಿಂದ ತಾವುಗಳು ಶೀಘ್ರದಲ್ಲಿ ಸ್ಥಳ ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಹಾಗೂ ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ , ಉತ್ತಮ ರೀತಿಯಲ್ಲಿ ಬಸ್ಟ್ಯಾಂಡ್ ಸುತ್ತಲೂ ಉತ್ತಮ ಗುಣಮಟ್ಟದಲ್ಲಿ ಕಾಂಪೌಂಡ್ ನಿರ್ಮಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಬೇಕೆಂದು ತಮ್ಮಲ್ಲಿ ಕಾನಹೊಸಹಳ್ಳಿ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಕಾನಹೊಸಹಳ್ಳಿ ನಾಡಕಛೇರಿಯ ಉಪತಹಸೀಲ್ದಾರರಾದ ಚಂದ್ರಮೋಹನ್ ರವರಿಗೆ ಮನವಿ ಪತ್ರವನ್ನು ಸಲ್ಲಿಸಿದರು ಈ ಸಂದರ್ಭದಲ್ಲಿ ಸೂರ್ಯಪ್ರಕಾಶ್ ,ಗ್ರಾಮಪಂಚಯತಿ ಸದಸ್ಯರಾದ ಹೊನ್ನೂರಸ್ವಾಮಿ ಕರಿ ಬಸಪ್ಪ ಮಹಾಂತೇಶ್. ಅನಿಲ್ ಕುಮಾರ್, ಹರೀಶ್ ಸಂಘ ಸಂಸ್ಥೆಯ ಪದಾಧಿಕಾರಿಗಳು ಹೊಸಹಳ್ಳಿಯ ಗ್ರಾಮಸ್ಥರು ಸಾರ್ವಜನಿಕರು ಉಪಸ್ಥಿತರಿದ್ದರು.

ವರದಿ. ವಿರೇಶ್, ಕೆ, ಎಸ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend