ಮೊಳಕಾಲ್ಮೂರು: ಜಿಲ್ಲಾ ವರಿಷ್ಠಾಧಿಕಾರಿ ಜಿ.ರಾಧಿಕಾ ಅವರು ಸಾರ್ವಜನಿಕ ಆಸ್ಪತ್ರೆಗೆ ತಲಾ 2 ಆಕ್ಸಿಜನ್ ಸಿಲೆಂಡರ್‌ ವಿತರಣೆ.!!

ಚಿತ್ರದುರ್ಗ: ಮೊಳಕಾಲ್ಮೂರು ಮತ್ತು ರಾಂಪುರ ಮೇ-27 ಸಾರ್ವಜನಿಕ ಆಸ್ಪತ್ರೆಗೆ ತಲಾ ಎರಡು ಕಾನ್ಸಟ್ರೇಟರ್ ಆಕ್ಸಿಜನ್ ಸಿಲೆಂಡರ್‌ಗಳನ್ನ ಕೊಡುಗೆ ಯಾಗಿ ನೀಡಿದ್ದಾರೆ. ಜಿಲ್ಲಾ ವರಿಷ್ಠಾಧಿಕಾರಿ ಜಿ.ರಾಧಿಕಾ ಅವರ ಸೂಚನೆ ಮೇರೆಗೆ ಸಾರ್ವ ಜನಿಕ ಆಸ್ಪತ್ರೆ ವೈದ್ಯರಿಗೆ ಗುರುವಾರ ಹಸ್ತಾಂತರ ಮಾಡಿದ ಸಿಪಿಐ ಜೆ.ಬಿ.ವ ಉಮೇಶ್ ನಾಯಕ ಮಾತನಾಡಿ ಅತ್ಯಂತ ಹಿಂದುಳಿದ ತಾಲೂಕಿನಲ್ಲಿ ಕೊರೋನಾ ಬಡ ಜನರ ಜೀವವನ್ನು ಹಿಂಡುತ್ತಿದೆ. ರೋಗಕ್ಕೆ ತುತ್ತಾದವರು ಬೇಗ ಗುಣಮುಖರಾಗಿ ಮನೆ ಸೇರಲೆಂದು ಎಸ್ಪಿ ಮೇಡಂ 4 ಆಕ್ಸಿಜನ್ ಸಿಲೆಂಡರ್‌ಗಳನ್ನ ವೈಯಕ್ತಿಕವಾಗಿ ನೀಡುವ ಮೂಲಕ ತಮ್ಮ ಕೈಲಾದ ಅಳಿಲು ಸೇವೆ ಮಾಡಿದ್ದಾರೆ ಎಂದರು. ಇವರ ಸಹೋದರ ಜಿಲ್ಲಾ ಆಸ್ಪತ್ರೆಗೂ ಕೊಡುಗೆ ನೀಡಿರುವುದು ದೊಡ್ಡತನ ಎಂದು ಸಚಿವ ಶ್ರೀರಾಮುಲು ಸಹಿತ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ಆಪತ್ಕಾಲದಲ್ಲಿ ಬಡವರಿಗೆ ಪುನರ್ ಜನ್ಮಕೊಟ್ಟಂತೆ. ಆಸ್ಪತ್ರೆ ವೈದ್ಯರು ಸದ್ಬಳಕೆ ಮಾಡಿಕೊಂಡು ಬಡ ಜನರ ಸುರಕ್ಷಿತ ಆರೋಗ್ಯ ಕಾಪಾಡಬೇಕೆಂದರು. ಈ ಸಂದರ್ಭದಲ್ಲಿ ಸಿಪಿಐ ಜಿ.ಪಿ ಉಮೇಶ್ ನಾಯಕ್ ಪಿಎಸ್ಐ ಗುಡ್ಡಪ್ಪ, ಎನ್.ಕೆ. ಬಸವರಾಜ್ ಪಿಎಸ್ಐ, ಶ್ರೀರಾಮುಲು ಆಪ್ತ ಕಾರ್ಯದರ್ಶಿ ಪಾಪೇಶ್ ನಾಯಕ, ಪ.ಪಂ ಅಧ್ಯಕ್ಷ ಪಿ. ಲಕ್ಷ್ಮಣ, ಸದಸ್ಯ ಮಾಂಜುನಾಥ, ಡಾ” ಪಿ.ಎಂ.ಮಂಜುನಾಥ್, ಶ್ರೀರಾಮುಲು ಆಪ್ತ ಕಾರ್ಯದರ್ಶಿ ಪಾಪೇಶ್ ನಾಯಕ, ಡಾ,ಪಾರುಖ್, ಡಾ, ಗಿರಿಜಾ ಹಾಗು ಆರೋಗ್ಯ ಸಿಬ್ಬಂದಿ ಪೊಲೀಸರು ಇದ್ದರು.

ವರದಿ. ಮಂಜುನಾಥ್, ಎಚ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend