ಕೋವಿಡ್ ಕರ್ತವ್ಯದ ವೇಳೆ ಮೃತಪಟ್ಟ ಅಂಗನವಾಡಿ ಕಾರ್ಯಕರ್ತೆಗೆ ಸರ್ಕಾರದ ನೆರವು,ಕಳೆದ ವರ್ಷ ಕೊವಿಡ್ ಕರ್ತವ್ಯದ ವೇಳೆ ಮೃತಪಟ್ಟ ಹೊಸಪೇಟೆ ನಗರದ 15ನೇ ವಾರ್ಡಿನ 2ನೇ ಕೇಂದ್ರದ ಅಂಗನವಾಡಿ ಕಾರ್ಯಕರ್ತೆ ಶಾರದಾ ಕುಟುಂಬಕ್ಕೆ ಸರ್ಕಾರದ ವತಿಯಿಂದ ರೂ. 30 ಲ ಕ್ಷಗಳ ಬೃಹತ್ ಮೊತ್ತದ ಪರಿಹಾರ ಚೆಕ್ ನ್ನು ಸಚಿವ ಆನಂದ್ ಸಿಂಗ್ ರವರ ಕಾರ್ಯಾಲಯದಲ್ಲಿ ಹುಡಾ ಅಧ್ಯಕ್ಷರಾದ ಅಶೋಕ್ ಜೀರೆ, ಸಿ.ಡಿ.ಪಿ.ಓ. ಅಧಿಕಾರಿಗಳಾದ ಸಿಂಧೂ ಎಲಗಾರ್, ಧರ್ಮೇಂದ್ರ ಸಿಂಗ್ ಸಂದೀಪ್ ಸಿಂಗ್, ವಿತರಿಸಿದರು. ಸಚಿವ ಆನಂದ್ ಸಿಂಗ್ ರವರ ಸತತ ಪ್ರಯತ್ನದಿಂದ ಇದು ಸಾಧ್ಯವಾಯಿತು ಎಂದು ಕುಟುಂಬಸ್ಥರು ಅಭಿನಂದನೆ ಸಲ್ಲಿಸಿದರು ಈ ವೇಳೆ ಸಚಿವರ ಕಾರ್ಯಾಲಯದ ಸಿಬ್ಬಂದಿ ಉಪಸ್ಥಿತರಿದ್ದರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
