;

ಮೊಳಕಾಲ್ಮೂರು: ತಾಲ್ಲೂಕು ಕಚೇರಿಯಲ್ಲಿ “ವಿಶ್ವಗುರು” ಜಗಜ್ಯೋತಿ” ಶ್ರೀ ಬಸವಣ್ಣ ನವರ ೮೮೮ನೇ ಜಯಂತೋತ್ಸವ ಕಾರ್ಯಕ್ರಮ.!!

ಚಿತ್ರದುರ್ಗ: ಮೊಳಕಾಲ್ಮೂರು ಇಂದು ಮೇ 14 ಪಟ್ಟಣದ ತಾಲ್ಲೂಕು ಆಡಳಿತ ವತಿಯಿಂದ “ವಿಶ್ವಗುರು” ಜಗಜ್ಯೋತಿ” ಶ್ರೀ ಬಸವಣ್ಣ ನವರ ೮೮೮ನೇ ಜಯಂತೋತ್ಸವ ಕಾರ್ಯಕ್ರಮವನ್ನು ಸರಳವಾಗಿ ಸಾಂಕೇತಿಕವಾಗಿ ಆಚರಿಸಲಾಯಿತು. ತಹಸೀಲ್ದಾರ್ ಟಿ ಸುರೇಶ್ ಕುಮಾರ್ ಅವರ ಮಾತನಾಡಿದರು. ಮಾನವ ಜನ್ಮ ದೊಡ್ಡದಲ್ಲ, ಮಾನವೀಯತೆ ದೊಡ್ಡದು.. ಧರ್ಮ ದೊಡ್ಡದಲ್ಲ, ದಯೆ ದೊಡ್ಡದು ” ಬಸವಣ್ಣನವರ ಈ ಮಾತು ಸಾರ್ವಕಾಲಿಕ… ಇಂದು ಕಾಯಕ, ದಾಸೋಹ, ಸಮಾನತೆಯ ತತ್ವಗಳನ್ನು ವಿಶ್ವಕ್ಕೆ ಸಾರಿದ 12ನೇ ಶತಮಾನದ ಕ್ರಾಂತಿಕಾರಿ ಬಸವಣ್ಣನ ಜಯಂತಿ. ಕೋವಿಡ್ 2ನೇ ಅಲೆ ಉಲ್ಬಣದಿಂದಾಗಿ ಈ ಬಾರಿ ಬಸವ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಇಓ ಕ್ಷೇತ್ರ ಶಿಕ್ಷಣಾಧಿಕಾರಿ ಯಾದ ಯುವರಾಜ್ ನಾಯಕ, ತಾಸಿಲ್ದಾರ್ ಟಿ ಸುರೇಶ್ ಕುಮಾರ್, ಕ್ಷೇತ್ರ ಸಮನ್ವಯ ಅಧಿಕಾರಿ ಎಂ ಹನುಮಂತಪ್ಪ, ಪಟ್ಟಣ ಪಂಚಾಯತಿಯ ಸದಸ್ಯರಾದ ಟಿ.ಪಿ ರವಿಕುಮಾರ್, ವಿನಯ್, ಸಣ್ಣ ಎಲ್ಲಪ್ಪ, ಉಪ ತಹಶೀಲ್ದಾರ್ ಏಳುಕೋಟೆ, ತುಮಕೂರ್ಲಹಳ್ಳಿ ಓಬಣ್ಣ, ರಂಗನಾಥ್, ಹಾಗೂ ಸಿಬ್ಬಂದಿವರ್ಗದವರು ಉಪಸ್ಥಿತರು.

ವರದಿ. ಮಂಜುನಾಥ್, ಎಚ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;