;

ಕಾನಹೊಸಹಳ್ಳಿ ಮೂರನೇ ದಿನದ ಲಾಕ್ ಡೌನ್ ಪೂರ್ಣ ಯಶಸ್ವಿಯಾಗಿತ್ತು.

*ದಿನಾಂಕ 12.5. . 2021 ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕಾನಹೊಸಹಳ್ಳಿ*

ಕಾನಹೊಸಹಳ್ಳಿ ಮೂರನೇ ದಿನದ ಲಾಕ್ ಡೌನ್ ಪೂರ್ಣ ಯಶಸ್ವಿಯಾಗಿತ್ತು. ಸರ್ಕಾರದ ಆದೇಶದಂತೆ ಬೆಳಿಗ್ಗೆ 6 ಗಂಟೆಯಿಂದ 9:00 45 ನಿಮಿಷದವರೆಗ ಕಿರಾಣಿ ಅಂಗಡಿ. ಬಟ್ಟೆಯಂಗಡಿ ಹೋಟೆಲ್ ಕಟ್ಟಿಂಗ್ ಶಾಪ್ ಗಳು ಬ್ರಾಂಡಿ ಅಂಗಡಿಗಳು ತೆರೆದಿದ್ದವು, ಹೋಟೆಲ್ ಮತ್ತು ಬ್ರಾಂದಿ ಅಂಗಡಿಗಳಲ್ಲಿ ಪಾರ್ಸಲ್ ವ್ಯವಸ್ಥೆ ಮಾಡಲಾಗಿತ್ತು. ಕಾನಹೊಸಹಳ್ಳಿ ಜನರು ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಂದ ಕಾನಹೊಸಹಳ್ಳಿ ಗೆ ಬಂದ ಜನರು 10 ಗಂಟೆ ಒಳಗಾಗಿ ತಮಗೆ ಬೇಕಾದ ಸಾಮಾನುಗಳನ್ನು ಕೊಂಡುಕೊಂಡು ತಮ್ಮ ತಮ್ಮ ಊರಿಗೆ ವಾಪಸಾದರು. ಕಾನಹೊಸಹಳ್ಳಿ ಯಲ್ಲಿ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಬಾಗಿಲು ಹಾಕಿಕೊಂಡರು. ಔಷಧಿ ಅಂಗಡಿಗಳು ಹೊರತುಪಡಿಸಿ ಎಲ್ಲ ಅಂಗಡಿಗಳು ಮುಚ್ಚಿದ್ದವು. ಕಾನಹೊಸಹಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದರು. ಕಾನಹೊಸಹಳ್ಳಿಯ ಗ್ರಾಮ ಪಂಚಾಯಿತಿ ಸಿಬ್ಬಂದಿ ತಮ್ಮ ಪಂಚಾಯತಿ ವಾಹನದ ಮೂಲಕ ಕರೋನಾ ಎರಡನೇ ಹಲೇ ಹರಡುವುದು ಬಗ್ಗೆ ತಮ್ಮ ವಾಹನದ ಧ್ವನಿಸುರಳಿಯ ಮೂಲಕ ಜಾಗೃತಿ ಮೂಡಿಸಿದರು. ಯಾವುದೇ ರೀತಿಯ ಘಟನೆಗಳು ನಡೆಯದಂತೆ ಮೂರನೇ ದಿನದ ಕಾನಹೊಸಹಳ್ಳಿ ಯ ಲಾಕ್ ಡೌನ್ ಯಶಸ್ವಿಯಾಗಿ ಪೂರ್ಣಗೊಂಡಿತು.

*ಡಿ ಎಂ ಈಶ್ವರಪ್ಪ ಸಿದ್ದಾಪುರ*

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;