;

ನೆಲಬೊಮ್ಮನಹಳ್ಳಿ:ಸಿಡಿಲಿಗೆ 20 ಮೇಕೆಗಳು ಬಲಿ*

*ನೆಲಬೊಮ್ಮನಹಳ್ಳಿ:ಸಿಡಿಲಿಗೆ 18ಮೇಕೆಗಳು ಬಲಿ*
-ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ನೆಲ ಬೊಮ್ಮನಹಳ್ಳಿ ಗ್ರಾಮದಲ್ಲಿ,ಬಾಲರಾಜ ತಂದೆ ಈರಪ್ಪ ಇವರು ಹೊಲದಲ್ಲಿ ಮೇಕೆಗಳನ್ನು ಮೇಯಿಸುವ ಸಂದರ್ಭದಲ್ಲಿ ಸಿಡಿಲು ಬಡಿದು 18 ಮೇಕೆಗಳು ಸಾವನ್ನಪ್ಪಿವೆ.
ಒಟ್ಟು 21 ಮೇಕೆಗಳಿದ್ದು 18 ಮೇಕೆಗಳು ಸಿಡಿಲಿಗೆ ಬಲಿಯಾಗಿ ಸತ್ತಿವೆ,ಅಂದಾಜು ಎರಡು ಲಕ್ಷ ರೂ ಹಾನಿಯಾಗಿದೆ ಎಂದು ಬಾಲರಾಜ ಹೇಳುತ್ತಾರೆ.

ಕೆಲ ದಿನಗಳ ಹಿಂದೆಯಷ್ಟೆ ನೆಲ ಬೊಮ್ಮನಹಳ್ಳಿ ಗ್ರಾಮದಲ್ಲಿ ಸಿಡಿಲಿಗೆ ಎರಡು ಜನ ಬಲಿಯಾಗಿದ್ದರು, ಈ ದಿನ 18 ಮೇಕೆಗಳಿಗೆ ಸಿಡಿಲು ಹೊಡೆದಿರುವುದರಿಂದ ಗ್ರಾಮದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ಬಾಲರಾಜ್ ರಿಗೆ,ಕಂದಾಯ ಇಲಾಖಾಧಿಕಾರಿ ಪರಿಹಾರ ಧನ ಮಂಜೂರು ಮಾಡಬೇಕಿದೆ. ಸ್ಥಳಕ್ಕೆ ಗುಂಡುಮುಣುಗು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದ್ಯಾಮಣ್ಣ,ಮುಖಂಡರಾದ ಮಾಕನಡಕು ಕೊಟ್ರೇಶ್, ಕುಮಾರ, ತಳವಾರ ಅಂಜಿನಪ್ಪ,ಗ್ರಾಮಸ್ಥರು ಉಪಸ್ಥಿತರಿದ್ದರು.

*ಡಿ.ಎಂ.ಈಶ್ವರಪ್ಪ ಸಿದ್ದಾಪುರ*

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;