*ಗುಡೇಕೋಟೆ:ಇದ್ದೂ ಇಲ್ಲದಂತಿರುವ ಪಶುಆಸ್ಪತ್ರೆ,ರೈತರ ಗೋಳು ಗಣನೆಗೆ ಇಲ್ಲ..*-
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಗುಡೇಕೋಟೆ ಹೋಬಳಿ ಕೇಂದ್ರವಾಗಿದ್ದು,ಗ್ರಾಮಂ ಕೇಂದ್ರ ಸ್ಥಾನಕ್ಕೆಭಾಜನವಾಗಿದೆ ಸಾವಿರಾರು ರೈತರು ಸಾವಿರಾರು ಜಾನುವಾರುಗಳನ್ನ ಹೊಂದಿದೆ.
ಆದರೆ ಇಲ್ಲಿಯ ಪಶುಚಿಕಿತ್ಸಾ ಕೇಂದ್ರ ಮಾತ್ರ ಸದಾ ಬಾಗಿಲು ಹಾಕಲಾಗಿರುತ್ತೆ ಎಂಬ ದೂರಿದೆ. ವಾರದ ಬೆರಳೆಣಿಕೆಯ ದಿನಗಳಲ್ಲಿ ಬಾಗಿಲು ತೆರೆದಿರುತ್ತೆ.
ಪಶು ವೈದ್ಯರಿಲ್ಲ ಮತ್ತು ಸಿಬ್ಬಂದಿ ಇದ್ದರೂ ಉಪಯೋಗವಿಲ್ಲ ಎನ್ನುತ್ತಾರೆ ಗ್ರಾಮಸ್ಥರು,ತಾಲೂಕು ಮಟ್ಟದ ಅಧಿಕಾರಿ ಒಮ್ಮೆಯೂ ಭೆಟ್ಟಿಯಾಗಿ ಸಮಸ್ಯೆ ಪರಿಶೀಲಿಸಿಲ್ಲ,ಗ್ರಾಮ ಪಂಚಾಯ್ತಿ,ತಾಲೂಕು ಪಂಚಾಯ್ತಿ,ಜಿಲ್ಲಾಪಂಚಾಯ್ತಿ,ಎಪಿಎಂಸಿ ಮೆಂಬರ್ ಗಳು ರೈತರ ಗೋಳು ಆಲಿಸುತ್ತಿಲ್ಲ ಹೆಸರಿಗೆ ಇದ್ದಾರೆ ಅಷ್ಟೆ ಎಂದು ರೈತರು ಆಕ್ರೋಶ ವ್ಯೆಕ್ತಪಡಿಸಿದ್ದಾರೆ.
ಅನನುಭವಿ ಸಿಬ್ಬಂದಿ ಇದ್ದು ಅವರ ಕಾರ್ಯವೈಖರಿಯಿಂದ ಜಾನುವಾರುಗಳ ಮೇಲೆ ದುಷ್ಪಪರಿಣಾಮ ಬೀರುತ್ತಿವೆ, ಇದರಿಂದಾಗಿ ಅವರಿಂದ ಅನಾನು ಕೂಲವೇ ಹೊರತು ಅನುಕೂಲವಾಗುತ್ತಿಲ್ಲ ಎಂದು ರೈತರು ದೂರಿದ್ದಾರೆ.
ಸಂಬಂಧಿಸಿದಂತೆ ಇಲಾಖಾ ಉನ್ನತಾಧಿಕಾರಿಗಳು ಸೂಕ್ತ ಕ್ರಮ ಜರುಗಿಸಬೇಕಾಗಿದೆ,ಶೀಘ್ರವೇ ಆಗತ್ಯ ವೈದ್ಯರನ್ನ ನೇಮಿಸಬೇಕಿದೆ ಮತ್ತು ನುರಿತ ಅನುಭವಿ ಸಿಬ್ಬಂಧಿಯನ್ನ ನೇಮಿಸಬೇಕಾಗಿದೆ.
ಅಗತ್ಯ ಅಧುನಿಕ ಸಲಕರಣಿಗಳನ್ನ ಮತ್ತು ಅಗತ್ಯ ಔಷಧಿ ಸೌಕರ್ಯಗಳನ್ನು ಒದಗಿಸಬೇಕಿದೆ ಎಂದು ರೈತರು ಒತ್ತಾಯಿಸಿದ್ದಾರೆ. ರೈತರ ಜೀವನಕ್ಕೆ ಕೃಷಿ, ಹೈನುಗಾರಿಕೆ ಮತ್ತು ಪಶುಸಂಗೋಪನಯೇ ಜೀವಾಳವಾಗಿದ್ದು,ಪಶುಗಳು ರೋಗ ಋಜನಿಗಳಿಗೆ ತುತ್ತಾದಾಗ ಅಗತ್ಯ ಚಿಕಿತ್ಸೆ ದೊರಕದೇ ಸಾವನ್ನಪ್ಪುತ್ತಿವೆ. ಮತ್ತು ಅನಾರೋಗ್ಯಕ್ಕೀಡಾದಾಗ ರೈತರು ಚಿಕಿತ್ಸೆಗೆ ತೀರ ಪರದಾಡುವಂತಾಗಿದೆ. ಕಾರಣ ಅವುಗಳ ಕ್ಷೇಮಕ್ಕಾಗಿ ಪಶುವೈದ್ಯಕೀಯ ಚಿಕಿತ್ಸೆ ಅನಿವಾರ್ಯವಾಗಿದೆ,ಕಾರಣ ಜಿಲ್ಲಾಡಾಳಿತ ಶೀಘ್ರವೇ ಅಗತ್ಯ ವೈಧ್ಯರನ್ನ ಹಾಗೂ ಸಿಬ್ಬಂದಿಯನ್ನ ಕಲ್ಪಿಸಬೇಕೆಂದು ರೈತರು ಈ ಮೂಲಕ ಒತ್ತಾಯಿಸಿದ್ದಾರೆ.
ಮಾನ್ಯ ಶಾಸಕರಾದ ಎನ್
ವೈ.ಗೋಪಾಲಕೃಷ್ಣರವರು ಜನಪರ ಕಾಳಜಿಯುಳ್ಳವರಾಗಿದ್ದು,ಅವರು ಈ ಕುರಿತು ಶೀಘ್ರವೇ ಅಗತ್ಯ ಕ್ರಮ ಜರುಗಿಸಬೇಕೆಂದು ರೈತರು ಹಾಗೂ ಗ್ರಾಮಸ್ಥರು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಈ ಮೂಲಕ ಕೊರಿದ್ದಾರೆ.
ವರದಿ. ಡಿ. ಎಂ.ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
