ವಿಜಯನಗರ: ಜಿಲ್ಲೆ ಕೂಡ್ಲಿಗಿ ತಾಲೂಕು ಪೂಜಾರಹಳ್ಳಿ ಗ್ರಾಮ ಪಂಚಾಯಿತಿ.!ತಾಲ್ಲೂಕಿನ ಪೂಜಾರಹಳ್ಳಿ ಗ್ರಾಮದ ಹಾಗೂ ಕಲ್ಲಳ್ಳಿ ಗ್ರಾಮದ ಮಧ್ಯೆ ಇರುವ ಎಸ್ಸಿ ಕ್ಯಾಂಪ್ನಲ್ಲಿ ನೀರಿನ ಬವಣೆ ಹೆಚ್ಚಾಗಿದೆಯೆಂದು ಗ್ರಾಮಸ್ಥರು ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಿಕೊಂಡಿರುತ್ತಾರೆ. ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ದುರ್ಗಪ್ಪ ಮಾತನಾಡಿ, ನೀರಿನ ಸಮಸ್ಯೆ ಇರುವುದರಿಂದ ಒಂದು ಬೋರ್ ಹಾಕಿಸುತ್ತೇವೆ ಪಾಯಿಂಟನ್ನು ಮಾಡಿ ಹೋಗಿದ್ದಾರೆ ಆದರೂ ಇವರಿಗೆ ಬೋರ್ ಹಾಕಿಸಿಲ್ಲ ಪಂಚಾಯಿತಿಯಿಂದ ಕೇವಲ ಅರ್ಧ ಇಂಚು ನೀರು ಬಂದರೆ ಇಲ್ಲಿ 35 ಮನೆಗಳು ವಾಸಿಸುವ ಕುಟುಂಬಗಳಿದ್ದು ನೀರು ಸಾಕಾಗುತ್ತಿಲ್ಲ ಎಂದು ಹೇಳಿದರು. ಇನ್ನು ಮಹಿಳೆಯರು ಪಂಚಾಯಿತಿ ಕಡೆಯಿಂದ ಸರಿಯಾದ ರೀತಿಯಲ್ಲಿ ನೀರು ಸಿಗದ ಕಾರಣ ಬೇರೆಯವರ ಜಮೀನುಗಳಿಗೆ ಹೋಗಿ ನೀರು ತರುತ್ತಿದ್ದೇವೆ ನೀರು ಬಿಡುವ ಜಮೀನು ಮಾಲೀಕರಿಗೆ ಗ್ರಾಮ ಪಂಚಾಯಿತಿಯಿಂದ ಸರಿಯಾದ ರೀತಿಯಲ್ಲಿ ಹಣ ನೀಡಿದರೆ ನಮಗೆ ಸ್ವಲ್ಪ ನೀರು ಕುಡಿಯಲೂ ಬಿಡುತ್ತಾರೆ ಅವರಿಗೆ ಸಹ ಸರಿಯಾದ ರೀತಿಯಲ್ಲಿ ಹಣ ಕೊಟ್ಟಿರುವುದಿಲ್ಲ. ಹೂಟರೆ ನಾವು ಇಲ್ಲಿ ಸೂಚಿಸುವ ನಾವುಗಳು ಜಮೀನುಗಳಿಂದ ನೀರು ತಂದು ಸಾಕಾಗಿಹೋಗಿದೆ. ಬೇಸಿಗೆಕಾಲದಲ್ಲಿ ದನ ಕುರಿ ಮೇಕೆಗಳಿಗೆ ಅಂತೂ ವಿಪರೀತ ತೊಂದರೆ ಯಾಗಿರುತ್ತದೆ ಕಾರಣ ಶೀಘ್ರದಲ್ಲಿ ಸಂಬಂಧಪಟ್ಟ ಇಲಾಖೆಯವರು ನಮಗೆ ಬೋರ್ ಹಾಕಿಸಿ ನೀರಿನ ವ್ಯವಸ್ಥೆ ಮಾಡಿಕೊಟ್ಟು ದನಕರುಗಳಿಗೆ ನಮಗೂ ನೀರಿನ ವ್ಯವಸ್ಥೆ ಮಾಡಿ ಕೊಡುತ್ತಿವೆ ಎಂದು ನಂಬಿ ಮಾಧ್ಯಮದ ಮೂಲಕ ತಮಗೆ ಮನವಿಯನ್ನು ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿದರು. ಊರಿನ ಗ್ರಾಮಸ್ಥರಾದ ಮಾಜಿ ಸದಸ್ಯರು ದುರುಗಪ್ಪ, ಕರಿಬಸಪ್ಪ, ನಿಂಗಮ್ಮ, ತಿಪ್ಪಮ್ಮ, ಶಿಲ್ಪಮ್ಮ, ಲಕ್ಷ್ಮೀ, ಸಕ್ಕರಮ್ಮ, ರೂಪಮ್ಮ, ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
