ನೋಡಿ ರಾಜ್ಯದಲ್ಲಿ ರಾಜ್ಯಸರ್ಕಾರ ಹಾಗೂ ಕೇಂದ್ರ ಸರ್ಕಾರ, ಸಾರ್ವಜನಿಕರೂ ಸುಭಿಕ್ಷವಾಗಿರಬೇಕು ಎನ್ನುವ ನಿಟ್ಟಿನಲ್ಲಿ ಹತ್ತು ಹಲವು ಯೋಜನೆಗಳನ್ನು ಗ್ರಾಮಪಂಚಾಯಿತಿಯ ಒಂದು ಅಡಿಯಲ್ಲಿ ಕೆಲಸಗಳನ್ನು ಕಾರ್ಯರೂಪಕ್ಕೆ ತರುತ್ತದೆ ಆದರೆ, ಇಲ್ಲಿರುವ ಕೆಲವು ಅಧಿಕಾರಿಗಳು ಮಾತ್ರ ಸಾರ್ವಜನಿಕರ ಹಾಗೂ ಸರ್ಕಾರದ ಕಣ್ಣಿಗೆ ಮಣ್ಣನ್ನು ಎರಚಿ ಬಡವರಪಾಲಿನ ಹಣವನ್ನು ಲೂಟಿಮಾಡಿ ತಮ್ಮ ಒಂದು ಡೊಳ್ಳು ಹೊಟ್ಟೆಗಳನ್ನು ತುಂಬಿಸಿಕೊಂಡು ನನಗೂ ಇದಕ್ಕೂ ಸಂಬಂಧವಿಲ್ಲ ಎಂಬಂತೆ ವರ್ತನೆಯನ್ನು ಮಾಡುವುದು ಮಾತ್ರ ತುಂಬಾ ವಿಪರ್ಯಾಸ ಹಾಗೂ ನಮ್ಮ ರಾಜ್ಯಸರ್ಕಾರದ ಭ್ರಷ್ಟಆಡಳಿತ ವ್ಯವಸ್ಥೆ ಅಂದರೂ ತಪ್ಪಾಗಲಾರದು.
ಈಗ ನಾವು ಹೇಳ ಹೊರಟಿರುವ ವಿಷಯ ವಿಜಯನಗರ ಜಿಲ್ಲೆಯ, ಪಾಪಿನಾಯಕನಹಳ್ಳಿಯ ಭ್ರಷ್ಟಾಚಾರದ ಬಗ್ಗೆ, ಇಲ್ಲಿ ಒಬ್ಬರ ಮೇಲೊಬ್ಬರಂತೆ ಅಳೆಯ ಅಭಿವೃದ್ಧಿ ಅಧಿಕಾರಿಯ ಮೇಲೆ ಹಾಲಿ ಅಧಿಕಾರಿ ತನ್ನ ಒಂದು ದುಷ್ಟ ಆಡಳಿತವನ್ನು ತಳ್ಳಿಹಾಕುತ್ತ ಸಾರ್ವಜನಿಕರ ಬಾಳಲ್ಲಿ ಕೊಳ್ಳಿಯನ್ನು ಇಡುತ್ತ ಸಾಗುತ್ತಿರುವುದನ್ನು ನೋಡಿದರೆ ಇದರಲ್ಲಿ ಕಳ್ಳ ಯಾರೆಂಬುದೇ ಆಶ್ಚರ್ಯವಾಗಿದೆ ಅನ್ನುವ ಒಂದು ಅನುಮಾನ ಮನೆಮಾಡಿದೆ ಎನ್ನುತ್ತಾರೆ ಅಲ್ಲಿನ ನೋವುಂಡ ಸಾರ್ವಜನಿಕರು.ಮತ್ತು ನಮ್ಮ ಒಂದು ರಾಜ್ಯದಲ್ಲಿ ಗ್ರಾಮಪಂಚಾಯಿತಿಯ ಸೇವೆಯನ್ನು ಪಡೆಯಲು ಸಾರ್ವಜನಿಕರು ಹರಸಾಹಸ ಪಡಬೇಕಾಗುತ್ತಿರುವುದು ಎಲ್ಲರೂ ಕಂಡು, ಹಾಗೂ ಕೇಳಿರುವ ವಿಷಯವದು, ಇಲ್ಲಿರುವ ಹೆಗ್ಗಣದ ರೀತಿಯಲ್ಲಿರುವ ಅಧಿಕಾರಿಗಳು ಹೇಗೆ ಲಂಚ ಎನ್ನುವ ಒಂದು ಕುದುರೆಯನ್ನು ಹೇರಿ ಬಡವರ ಒಂದು ಬದುಕಿನಲ್ಲಿ ಸವಾರಿ ಮಾಡುತ್ತಾರೆ ಎಂದರೆ, ಸುಖಾ ಸುಮ್ಮನೆ ಯಾರೋ ಫೋಟೋ ಯಾರೋ, ಜಾಬ್ ಕಾರ್ಡ್ಗೆ ಹಾಕಿ ಉದ್ಯೋಗ ಖಾತ್ರೆಯಲ್ಲಿ ಹೇಗೆ ಸರ್ಕಾರದ ಹಣವನ್ನು ಲೂಟಿ ಮಾಡುತ್ತಾರೆ ಎಂದರೆ ನಮಗೇನು ಗೊತ್ತಿಲ್ಲ ಮಿಸ್ ಹಾಗಿ ಹಾಕಿದೀವಿ ಫೋಟೋನ ಎನ್ನುವ ಒಂದು ಉಡಾಪೆಯ ಉತ್ತರವನ್ನು ಕೊಡುತ್ತಾರೆ.

ಹಾಗೂ ಕೊಳವೆಬಾವಿಯ ಒಂದು ನಿರ್ವಹಣೆಯಲ್ಲಿ ಮೋಟಾರ್ ಪಂಪ್, ಬಿಡದೆ ಸುಮ್ಮನೆ ಬಿಲ್ ಗಳನ್ನು ಎತ್ತಿದ್ದಾರೆ ಎನ್ನುತ್ತಾರೆ ಇಲ್ಲಿನ ಹಲವು ಗ್ರಾಮಸ್ಥರು, ಮತ್ತು ಗುಡಿಸಲಿಗೆ ಬಣ್ಣಸುಣ್ಣವನ್ನು ಬಡಿದು ಬೋಗಸ್ ಬಿಲ್,_ಚಿಕ್ಕ ಚಿಕ್ಕ ಯೋಜನೆಗಳನ್ನು ತಮ್ಮ ಹೆಸರಿನಲ್ಲಿ ತಮ್ಮ ಸಂಬಂಧಿಕರ ಹೆಸರಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ನಕಲಿ ಧಾಖಲೆ ಸೃಷ್ಟಿಸಿ ಮಂಜೂರಾತಿ ಮಾಡಿಕೊಂಡು ನಿರ್ಮಾಣ ಮಾಡದೆ ಸರ್ಕಾರದ ಹಣ ದುರ್ಭಳಕೆ ಮಾಡಿಕೊಂಡು ಹಣ ಎತ್ತಿದ್ದು ಮತ ಹಾಕಿದ ಮತದಾರನಿಗೆ ಕಣ್ಣಿಗೆ ಮಣ್ಣು ಎರಚುತ್ತಿರುವ ಇವರು ಎಲ್ಲ ನಂಗೆ ಆಗಬೇಕೆಂದು ದುರ್ಬುದ್ದಿ ತುಂಬಿಕೊಡಿರುವ ಇವರ ಮನಸ್ಸಿನಲ್ಲಿ ಇವರಿಂದ ಗ್ರಾಮ ಅಭಿವೃದ್ಧಿ ಕಾಣಬಹುದೇ? ಸಾಧ್ಯವೇವಿಲ್ಲ ಮನೆಗಳು ಬಿಟ್ಟಿಲ್ಲ, ಕಕ್ಕಸ ಬಿಟ್ಟಿಲ್ಲ, ಬಚ್ಚಲ ಗುಂಡಿ ಬಿಟ್ಟಿಲ್ಲ, ಕಾಮಗಾರಿಗಳನ್ನು ಬಿಟ್ಟಿಲ್ಲ, ಎಲ್ಲವೂ ಇವ್ರಿಗೆ ಮತ ಹಾಕಿದವ್ರಿಗೆ ದ್ರೋಹ ಮಾಡುತ್ತಿರುವ ಹಿಂತಹವರಿಂದ ಗ್ರಾಮ ಅಭಿವೃದ್ಧಿ ಕಾಣುವುದು ಕನಸ್ಸಿನ ಮಾತು ಇಲ್ಲಿ ಎಲ್ಲವೂ ಪರ್ಸನಲ್ ಡೆವೇಲೋಪಮೆಂಟ್.

ಸ್ವಚ್ಛ ಭಾರತ ಮಿಷನ್ (ಗ್ರಾಮೀಣ)
_ಗ್ರಾಮೀಣ ಸ್ವಚ್ಛತೆಗೆ ವಿಶೇಷ ಒತ್ತು ನೀಡುವ ಹಿನ್ನೆಲೆಯಲ್ಲಿ ಕೇಂದ್ರ ಪುರಸ್ಕೃತ ಯೋಜನೆಯಾದ ಸಂಪೂರ್ಣ ಸ್ವಚ್ಛತಾ ಆಂದೋಲನವನ್ನು 2005 ರಿಂದ ಮಾರ್ಚ್ 2012 ರವರೆಗೆ ಹಾಗೂ ನಿರ್ಮಲ ಭಾರತ್ ಅಭಿಯಾನ ಕಾರ್ಯಕ್ರಮವನ್ನು ಏಪ್ರಿಲ್ 2012 ರಿಂದ ಅಕ್ಟೋಬರ್-2, 2014 ರವರೆಗೆ ರಾಜ್ಯದ ಎಲ್ಲಾ 30 ಜಿಲ್ಲೆಗಳಲ್ಲಿ ತೀವ್ರವಾಗಿ ಅನುಷ್ಠಾನಗೊಳಿಸಲಾಯಿತು. ಪ್ರಸ್ತುತ ಕೇಂದ್ರ ಸರ್ಕಾರವು ಇದೇ ನಿರ್ಮಲ ಭಾರತ ಅಭಿಯಾನ ಕಾರ್ಯಕ್ರಮವನ್ನು ಪುನರ್ ನಾಮಕರಣ ಮಾಡಿ ಹೊಸ ರೂಪದೊಂದಿಗೆ ದಿನಾಂಕ 02.10.2014 ರಿಂದ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಹೆಸರಿನಡಿ ಅನುಷ್ಠಾನ ಮಾಡಲಾಗುತ್ತಿದೆ._
_ಗ್ರಾಮೀಣ ಪ್ರದೇಶಗಳ ಎಲ್ಲಾ ಕುಟುಂಬಗಳಲ್ಲಿ, ಶಾಲೆಗಳಲ್ಲಿ, ಅಂಗನವಾಡಿಗಳಲ್ಲಿ ಶೌಚಾಲಯಗಳಿರಬೇಕು, ಮಲ-ಮೂತ್ರ ವಿಸರ್ಜನೆಗಳಿಗೆ ಶೌಚಾಲಯಗಳನ್ನೇ ಬಳಸಬೇಕು, ಉತ್ತಮ ನಿರ್ವಹಣೆ ಇರಬೇಕು, ಗ್ರಾಮದ ಬೀದಿಗಳು, ಓಣಿಗಳು ಶುಚಿಯಾಗಿರಬೇಕು, ಇದರ ಜೊತೆಗೆ ಮನೆಗಳ ಹಾಗೂ ಗ್ರಾಮದ ಕಸ, ಬಳಸಿದ ನೀರು ಮುಂತಾದವುಗಳನ್ನು ಉತ್ತಮವಾಗಿ ನಿರ್ವಹಿಸಬೇಕು. ಒಟ್ಟಾರೆ ರಾಜ್ಯದ ಎಲ್ಲಾ ಗ್ರಾಮಗಳ ಸಂಪೂರ್ಣ ಸ್ವಚ್ಛತೆಗೆ ಪೂರಕವಾದ ಚಟುವಟಿಕೆಗಳನ್ನು ಸ್ವಚ್ಛ ಭಾರತ್ ಮಿಷನ್(ಗ್ರಾಮೀಣ) ಅಡಿಯಲ್ಲಿ ಕೈಗೊಳ್ಳಲಾಗುತ್ತಿದೆ.ಮತ್ತು ಸರ್ಕಾರದ ಹಲವು ಯೋಜನೆ ಹಾಗೂ,ಕೇಂದ್ರ ಸರ್ಕಾರದ ಒಂದು ಮಹತ್ವಾಕಾಂಕ್ಷೆಯ ಯೋಜನೆ ಉದ್ಯೋಗಖಾತ್ರಿ.ಬಡವರಿಗೆ ಅಕುಶಲ ಕೆಲಸವನ್ನು ನೀಡುವ ಮೂಲಕ ಯುಪಿಎ ಸರ್ಕಾರ ಮಾನವ ಹಕ್ಕುಗಳನ್ನು ಎತ್ತಿ ಹಿಡಿದಿದೆ.ಅದು ಅವತ್ತಿನಿಂದ ಇವತ್ತಿನವರೆಗೂ ಅಕ್ರಮವಾಗಿ ಅನುಷ್ಠಾನಗೊಳ್ಳುತ್ತಿದೆ.ನೋಂದಾಯಿತ ಕೂಲಿ ಕಾರ್ಮಿಕನ ಹೆಸರಿನಲ್ಲಿ ಕೆಲ ಹಾದರಕ್ಕೆ ಜನ್ಮಿಸಿದ ಜನ ಹಣ ಕೊಳ್ಳೆ ಹೊಡೆಯುತ್ತಿದ್ದಾರೆ,ಇದು ಸುಲಭವಾದದ್ದು ಭ್ರಷ್ಟ ಅಧಿಕಾರಿಗಳಿಂದ.ಈ ಸಮಸ್ಯೆ ಪರಿಹಾರವಾಗಬೇಕಾದರೆ ಗ್ರಾಮೀಣ ಭಾರತದ ಪ್ರಜ್ಞಾವಂತ ಯುವಕರು ಸಂಘಟಿತರಾಗಬೇಕು,ಆ ಮೂಲಕ ಹೋರಾಟಕ್ಕೆ ಮುಂದಾಗಬೇಕು.ಯಾವ ಮುಲಾಜು ಮತ್ತು ಭಯಗಳಿಗೆ ಒಳಗಾಗದೆ ದೂರು ಬರೆಯಬೇಕು.ಹೀಗಾದಾಗ ಮಾತ್ರ ದೇಶ ಉಳಿಯುತ್ತದೆ.ಇಲ್ಲದಿದ್ದರೆ ಆ ಅಕ್ರಮ ಸಂತಾನಿಗಳು ದೇಶವನ್ನು ಕೊಳ್ಳೆ ಹೊಡೆಯುತ್ತಾರೆ!

ಮತ್ತು ಈ ಒಂದು ಗ್ರಾಮಪಂಚಾಯಿತಿಗೆ ಈ ಇಂದೇ ಅಂದರೆ 2019-20ರಲ್ಲಿ ಹಲವು ಯೋಜನೆಗೆ ಸರ್ಕಾರದ ಹಣ ಮುಂಜೂರಾದರೆ ಇಲ್ಲಿರುವ ಅಧಿಕಾರಿಗಳು ಹಾಗೂ ಬೆರಳಚ್ಚು ಖಾಸಗಿ ಅಧಿಕಾರಿ ಹಾಗೂ ಇನ್ನುಳಿದ ಭ್ರಷ್ಟರು ಯಾರಿಗೂ ಗೊತ್ತಾಗದ ಹಾಗೆ, ಸರ್ಕಾರದ ಹಣವನ್ನು ಗುಳುಂ ಮಾಡಿರುವ ಎನ್ನುವ ಒಂದು ವದಂತಿಗಳು ಸಹಾ ಅರಿದಾಡುತ್ತಿವೆ ಮತ್ತು ಈ ಇಂದೇ ಇದ್ದ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಇಂತಹ ಒಂದು ಲೂಟಿಗಳನ್ನು ಮಾಡಿ ಸಸ್ಪೆಂಡ್ ಸಹಾ ಆಗಿದ್ದಾರೆ ಎನ್ನುವ ಮಾತುಗಳು ಸಹಾ ಕೇಳಿಬರುತ್ತಿದ್ದು ಹಾಗೂ ಸಂಬಂಧ ಪಟ್ಟ ಇಂಜಿನಿಯರ್ಗಳು ಸಹಾ ಈ ಒಂದು ಕುತಂತ್ರದಲ್ಲಿ ಭಾಗಿಯಾಗಿ ವರ್ಷಕ್ಕೆ ಇಬ್ಬರಂತೆ ವರ್ಗಾವಣೆಯು ಸಹಾ ಆಗಿದ್ದಾರಂತೆ ಇಷ್ಟೆಲ್ಲ ನಡೆದರು ಸಹಾ ಅಲ್ಲಿರುವ ಜಿಲ್ಲಾಡಳಿತ ಕ್ರಮವನ್ನು ತೆಗೆದುಕೊಳ್ಳದೆ ಇರುವುದನ್ನು ನೋಡಿದರೆ ಅನುಮಾನವೆಂಬ ಭೂತ ಎಲ್ಲರನ್ನು ಕಾಡತೋದಾಗುತ್ತದೆ ಹಾಗೂ ಇದಕ್ಕೆಲ್ಲ ಯಾರ ಕುಮ್ಮಕ್ಕು ಇರಬಹುದೇಂಬ ಅನುಮಾನ ಮೂಡುತ್ತದೆ.
ಹಾಗೂ ರಾಜ್ಯದಲ್ಲಿ ಯಾರು ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಜನಪ್ರತಿನಿದಿನಗಳಿಂದ ಆಯ್ಕೆಯಾಗುತ್ತಾರೋ ಅವರೇ ಆಳ್ವಿಕೆ ಮಾಡಬೇಕು ಎನ್ನುವ ಒಂದು ಕಾನೂನು ಇದೆ ಆದರೆ ರಾಜ್ಯದ ಹಲವು ಗ್ರಾಮಪಂಚಾಯಿತಿಗಳಲ್ಲಿ, ತಾಯಿ ಗೆದ್ದರೆ ಮಕ್ಕಳೆಲ್ಲ ಸದಸ್ಯರು, ಅಧ್ಯಕ್ಷರು, ಉಪಾಧ್ಯಕ್ಷರು, ಎನ್ನುವ ಒಂದು ರೀತಿಯಲ್ಲಿ ದುರ್ವರ್ತನೆ ಮಾಡುವುದು ಎಷ್ಟು ಸರಿ ಮೊದಲು ಇದನ್ನು ಕಡಿವಾಣ ಹಾಕಿ, ಅಭಿವೃದ್ಧಿ ಸಲೀಸಾಗಿ ಸಾಗುವುದು ಅದನ್ನು ಬಿಟ್ಟು ಮೇಲೆ ಹೇಳಿದ ರೀತಿಯಲ್ಲಿ ಅಧಿಕಾರ ಚಲಾಯಿಸಿದರೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ದೂರನ್ನು ನೀಡಿ ಅಂತವರಿದ್ದರೆ ಅವರಿಗೆ ಕಾನೂನಿನ ಅಡಿಯಲ್ಲಿ ಶಿಕ್ಷೆಯಾಗುವುದು…
ಮುಂದುವರಿಯಲಿದೆ ಮುಂದಿನ ಸಂಚಿಕೆಯಲ್ಲಿ…
ವರದಿ. ಮಂಜುನಾಥ್ ದೊಡ್ಡಮನಿ ವಿಜಯನಗರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
