;

ಮೊಳಕಾಲ್ಮುರು: ಸಾರ್ವಜನಿಕ ಆಸ್ಪತ್ರೆಗೆ ದಿಢೀರ್ ಭೇಟಿ, ಕೋವಿಡ್ ಆರೋಗ್ಯ ಕೇಂದ್ರವನ್ನು ಪರಿಶೀಲಿಸಿದ ಸಿಇಒ ಡಾ.ನಂದಿನಿ ಅವರು ಭೇಟಿ.!!

ಚಿತ್ರದುರ್ಗ: ಮೊಳಕಾಲ್ಮುರು ಪಟ್ಟಣ ಸೇರಿ ತಾಲೂಕಿನ ರಾಂಪುರ, ಬಿ.ಜಿ.ಕೆರೆ ಆಸ್ಪತ್ರೆಗೆ ಜಿಪಂ ಸಿಇಒ ಡಾ.ನಂದಿನಿ ದಿಢೀರ್ ಭೇಟಿ ನೀಡಿ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಪರಿಶೀಲನೆ ನಡೆಸಿದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್ ಸೆಂಟರ್ ಮತ್ತು ಓಪಿಡಿ, ಔಷಧ ಕೊಠಡಿ, ಚುಚ್ಚು ಮದ್ದು ಕೊಠಡಿಗಳಿಗೆ ಭೇಟಿ ನೀಡಿ ವೈದ್ಯರಲ್ಲಿ ಮಾಹಿತಿ ಪಡೆದರು. ಕೊರೋನಾಮುಂಜಾಗ್ರತೆ ಕ್ರಮದ ಕುರಿತು ವೈದ್ಯರೊಂದಿಗೆ ಪ್ರಶ್ನಿಸಿದಾಗ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಸ್ತುತ 55 ಬೆಡ್ ಗಳನ್ನು ಕೋವಿಡ್ ಕೇರ್ ಸೆಂಟರ್‌ನಲ್ಲಿ ಮೀಸಲಿರಿಸಲಾಗಿದೆ. ಅದರಲ್ಲಿ 35 ಹಾಸಿಗೆಗಳನ್ನು ಕೋವಿಡ್ ಸೋಂಕಿತರಿಗೆ ಮೀಸಲಿಡಲಾಗಿದ್ದು, 16 ಹಾಸಿಗೆಗಳನ್ನು ಶಂಕಿತರಿಗೆ ಮೀಸಲಿಡಲಾಗಿದೆ. 3 ಹಾಸಿಗೆಗಳನ್ನು ಟೈಯೇಜ್‌ಗಾಗಿ ಮೀಸಲಿಡಲಾಗಿದೆ. ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಾಗದಂತೆ
ಮುಂಜಾಗ್ರತೆಯಾಗಿ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ವೈದ್ಯರು ತಿಳಿಸಿದರು. ರಾಂಪುರ ಸಾರ್ವಜನಿಕ ಆಸ್ಪತ್ರೆ ಹಾಗೂ ಬಿ.ಜಿ.ಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಸಿಇಒ ಕೊರೋನಾ ಪ್ರಕರಣಗಳ ಕುರಿತು ಚರ್ಚಿಸಿದರು. ಒಪಿಡಿಮತ್ತು ಒಳರೋಗಿಗಳ ಆಸನ ಮತ್ತು ಸಾಮಾಜಿಕ ಅಂತರದ ಕುರಿತು ಪರಿಶೀಲನೆ ನಡೆಸಿದರು. ಈ ವೇಳೆ ಅಲ್ಲಿನ ಆರೋಗ್ಯ ಸಹಾಯಕಿಯರು ಮತ್ತು ಸಿಬ್ಬಂದಿ ಜತೆ ಮಾತನಾಡಿ ಕೊರೋನಾ ನಿಯಮಗಳನ್ನು ಪಾಲಿಸಿಕೊಂಡು ಕರ್ತವ್ಯ ನಿರ್ವಹಿಸುವಂತೆ ಸೂಚಿಸಿದರು. ತಾಲೂಕು ವೈದ್ಯಾಧಿಕಾರಿ ಡಾ.ಸುಧಾ, ಎ.ಡಿ.ಸಂಪತ್ ಕುಮಾರ್ ಮತ್ತಿತರರಿದ್ದರು.

ವರದಿ. ಮಂಜುನಾಥ್, ಎಚ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;