;

ಅಗ್ನಿಶಾಮಕದಳದ ವಾಹನವನ್ನು ಕಲ್ಪಿಸುವಂತೆ ಮನವಿ…

 

ಅಗ್ನಿಶಾಮಕದಳದ ವಾಹನವನ್ನು ಕಲ್ಪಿಸುವಂತೆ ಮನವಿ.
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿ ಕೇಂದ್ರದಲ್ಲಿ ಅಗ್ನಿ ಶಾಮಕ ವಾಹನವನ್ನು ಕಲ್ಪಿಸುವಂತೆ ನಾಡಕಚೇರಿಗೆ ವಿವಿಧ ಸಂಘನೆಗಳ ಮುಖಂಡರು ಸೋಮವಾರ ಮನವಿ ಸಲ್ಲಿಸಿದರು
ಯುವ ಮುಖಂಡರಾದ ವೀರೇಶ್ ಕಿಟ್ಟಪ್ಪನವರ್ ಮಾತನಾಡಿ, ಹೊಸಹಳ್ಳಿ ಸುತ್ತಲಿನ ಹಳ್ಳಿಗಳು ಕೂಡ್ಲಿಗಿ ತಾಲೂಕು ಕೇಂದ್ರಕ್ಕೆ 40-50 ಕಿ.ಮೀ ದೂರದಲ್ಲಿವೆ. ಈ ಹಳ್ಳಿಗಳಲ್ಲಿ ಬೇಸಿಗೆ ಅವಧಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಅನಾಹುತಗಳು ನಡೆದ ಸಂದರ್ಭದಲ್ಲಿ ಕೂಡ್ಲಿಗಿ, ಕೊಟ್ಟೂರು, ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕು ಕೇಂದ್ರಗಳಿಂದ ಅಗ್ನಿ ಶಾಮಕ ದಳದವರು ಆಗಮಿಸಬೇಕಿದೆ.

 

ಅಲ್ಲಿಂದ ಘಟನಾ ಸ್ಥಳಗಳಿಗೆ ಅಗ್ನಿ ಶಾಮಕ ವಾಹನ,ಬರಲು ಸುಮಾರು ಅರ್ಧಗಂಟೆ ಯಿಂದ ಒಂದು ಸಮಯ ಬೇಕಾಗುತ್ತದೆ. ಅಗ್ನಿ ಅನಾಹುತ ತಪ್ಪಿಸಲು ಲಾಗುವುದಿಲ್ಲ ಅದರಿಂದ ಹೊಸಹಳ್ಳಿ ಹೋಬಳಿ ಕೇಂದ್ರ ಸ್ಥಾನದಲ್ಲಿ ಅಗ್ನಿ ಶಾಮಕ ವಾಹನವನ್ನು ಮತ್ತು ಸಿಬ್ಬಂದಿ ಯನ್ನು ಕಲ್ಪಿಸುವಂತೆ ಸಂಬಂಧಪಟ್ಟ ಮೇಲಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಮನವಿಯನ್ನು ನಾಡಕಚೇರಿ ಉಪ ತಹಸೀಲ್ದಾರ್ ಸಿ.ಚಂದ್ರಮೋಹನ್,ಹೊಸಹಳ್ಳಿಯ ಕಂದಾಯ ನಿರೀಕ್ಷಕ ಮುರಳಿಕೃಷ್ಣ ಸ್ವೀಕರಿಸಿದರು. ಮುಖಂಡರಾದ. ಗ್ರಾಪಂ ಸದಸ್ಯ ಎಂ.ಹೊನ್ನೂರಪ್ಪ, ಯಶ್ವಂತ ಕುಮಾರ, ಜಿ.ಬಿ.ರವಿಚಂದ್ರ, ಎಂ.ಸಿದ್ದನಗೌಡ, ಸ್ಮಾಟಿ ನಾಗೇಂದ್ರ ಹೇಮಂತ್, ನಡುವಲಮನೆ ತಿಪ್ಪೇಸ್ವಾಮಿ, ಸಿ. ಬಿ. ನಾಗೇಶ್ ಮಂಜುನಾಥ ಸ್ವಾಮಿ,
ಗೀತಾ, ಎಲ್. ವಿರೂಪಾಕ್ಷಿ, ರಾಜಪ್ಪ, ಮನ್ಸೂರ್, ಸಿಪಿಎಂ ಚಂದ್ರು ಹಾಗು ಸಾರ್ವಕನಿಕರು ಉಪಸಿದ್ದರು ಇದ್ದರು

ವರದಿ. ಕೆ.ಎಸ್. ವೀರೇಶ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;