;

ಮಸ್ಕಿ ವಿಧಾನಸಭೆ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಮತದಾರರಿಗೆ ಅಕ್ರಮವಾಗಿ ಹಣ ಹಂಚಿಕೆ…!!!

ವರದಿ. ದುಗ್ಗಪ್ಪ ಸಿಂಧನೂರು

ಮಸ್ಕಿ ವಿಧಾನಸಭೆ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಮತದಾರರಿಗೆ ಅಕ್ರಮವಾಗಿ ಹಣ ಹಂಚಿಕೆ ಮಾಡುತ್ತಿರುವ ವಿಡಿಯೋ ತುಣುಕೊಂದು ಗುರುವಾರ ವೈರಲ್ ಆಗಿದ್ದು ,ಕ್ಷೇತ್ರದ ಪಾಮನಕಲ್ಲೂರು ಪಂಚಾಯಿತಿ ವ್ಯಾಪ್ತಿಯ ಹರ್ವಪೂರ್,ಬಳಗನೂರ್ ಕ್ಷೇತ್ರದ ಬೆಳ್ಳಿಗನೂರು, ದುರ್ಗಾ ಕ್ಯಾಂಪ್ ಗ್ರಾಮಗಳಲ್ಲಿ ಮಹಿಳೆಯರನ್ನು ಒಂದು ಕಡೆ ಸೇರಿಸಿ ಬಿಜೆಪಿ ಪಕ್ಷದ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಅವರಿಗೆ ಮತ ಹಾಕುವಂತೆ ಅಮಿಷ ಒಡ್ಡಿ ರಾಜಾರೋಷವಾಗಿ ಹಣ ಹಂಚಿಕೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಮಾಜಿ ಸಚಿವರಾದ ಶಿವರಾಜ್ ತಂಗಡಿ ಅವರು ಆರೋಪಿಸಿದ್ದಾರೆ. ಮತ್ತು ಅಕ್ರಮದಲ್ಲಿ ಭಾಗಿಯಾದ ಬಳಗಾನೂರು ಪಿಎಸ್ಐ ಮತ್ತು ತುರುವಿಹಾಳ ಪಿಎಸ್ಐ ಅವರನ್ನು ಅಮಾನತು ಮಾಡಬೇಕೆಂದು ಎಚ್ಚರಿಸಿದರು. ಕಾನೂನಿನ ಪ್ರಕಾರ ಬಿಜೆಪಿ ಪಕ್ಷದ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಅವರನ್ನು ಚುನಾವಣೆ ಸದಸ್ಯತ್ವದಿಂದ ರದ್ದುಮಾಡಬೇಕು, ದುಡ್ಡು ಹಂಚುವವರ ವಿರುದ್ಧ ಕೇಸು ದಾಖಲಿಸಿ ಅವರನ್ನು ಜೈಲಿಗೆ ಕಳಿಸಬೇಕೆಂದು ಚುನಾವಣಾಧಿಕಾರಿಗೆ ಮನವರಿಕೆ ಮಾಡಿಕೊಟ್ಟರು.

ಹಣ ಹಂಚಲು ಹಾಸನ್ ಶಿವಮೊಗ್ಗ-ಬೆಂಗಳೂರು ಜಿಲ್ಲೆಯಿಂದ ಬಂದಿದ್ದ ತಂಡವನ್ನು ಬಂಧಿಸಬೇಕು ಜಿಲ್ಲೆಯಿಂದ ಗಡಿಪಾರು ಮಾಡಬೇಕೆಂದು ಎಂದು ಕೃಷ್ಣಬೈರೇಗೌಡ ಒತ್ತಾಯಿಸಿದರು ನಂತರ ಕಚೇರಿಗೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ಮಾಡಲಾಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ಸಿನ ಹಿರಿಯರಾದ ರಾಮಲಿಂಗಾರೆಡ್ಡಿ ,ಆರ್ ಧ್ರುವನಾರಾಯಣ್,ಎಚ್ ಎಂ ರೇವಣ್ಣ,ಹಂಪನಗೌಡ ಬಾದರ್ಲಿ, ಎನ್.ಎಸ್ ಬೋಸರಾಜ್ ,ರಿಜ್ವಾನ್ ಅರ್ಷದ್,ಬಸನಗೌಡ ಬಾದರ್ಲಿ, ಹೆಚ್ ಆಂಜನೇಯ, ರಾಘವೇಂದ್ರ ಇಟ್ನಾಳ , ಅಮರೇ ಗೌಡ ಬಯ್ಯಪೂರ್ ,ಬಿ ವಿ ನಾಯಕ್ ,ಇನ್ನೂ ಅನೇಕ ಹಿರಿಯ ಸಚಿವರು ಶಾಸಕರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮುಖಂಡರು ಭಾಗವಹಿಸಿದ್ದರು…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;