;

ಜನರ ಕಷ್ಟಗಳಿಗೆ ಸ್ಪಂದಿಸುವುದೇ ಆಧ್ಯ ಕರ್ಥವ್ಯ ನಂಜುಂಡ ಸ್ವಾಮಿ…!!!

ವರದಿ. ವೆಂಕಟೇಶ್, ಎಂ, ಎಲ್, ಬಳ್ಳಾರಿ

ಬಳ್ಳಾರಿ: ಪೊಲೀಸ್ ಇಲಾಖೆ ಸಮಾಜವನ್ನು ತಿದ್ದುವ ಕೆಲಸ ಮಾಡುತ್ತಿದ್ದು, ಸಮಾಜದಲ್ಲಿ ಜನರ ಕಷ್ಟ ಗಳಿಗೆ ಸ್ಪಂದಿಸುವ ಕಾರ್ಯ ನಮ್ಮ ಇಲಾಖೆಯಿಂದ ಆಗುತ್ತಿದೆ ಎಂದು ಬಳ್ಳಾರಿ ವಲಯದ ಪೊಲೀಸ್ ಮಹಾನಿರೀಕ್ಷಕ ಎಂ.ನಂಜುಂಡಸ್ವಾಮಿ ತಿಳಿಸಿದರು.
ಅವರು ನಗರದಲ್ಲಿಂದು ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಜಿಲ್ಲಾ ಸಶಸ್ತ್ರ ಪೊಲೀಸ್ ಕವಾಯುತು ಮೈದಾನದಲ್ಲಿ ಶುಕ್ರವಾರ ನಡೆದ ಪೊಲೀಸ್ ದ್ವಜಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪೊಲೀಸರಿಗೆ ಸಮಾಜದಲ್ಲಿ ಒಳ್ಳೆಯ ಗೌರವವಿದೆ. ಜನರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಿ.ನಮ್ಮ ಇಲಾಖೆಗೆ ಎರಡೇ ಎರಡು ಹಬ್ಬಗಳು. ಒಂದು ಬಾವುಟದ ಹಬ್ಬ, ಮತ್ತೊಂದು ಬಾವುಟ ಎತ್ತರಕ್ಕೆ ಹಾರಲಿ ಎಂದು ಹೋರಾಟ ಮಾಡಿ ಪ್ರಾಣಗಳನ್ನು ಬಲಿ ಕೊಟ್ಟ ಹುತಾತ್ಮರ ದಿನಾಚರಣೆಯ ಹಬ್ಬ. ಈ ಎರಡೂ ಹಬ್ಬಗಳಿಗೆ ಪೊಲೀಸ್ ಇಲಾಖೆಯವರು ತಪ್ಪದೇ ಭಾಗವಹಿಸಬೇಕು.

ಮಾನಸಿಕ ಮತ್ತು ದೈಹಿಕ ತೊಂದರೆಗಳನ್ನು ಬದಿ ಗಿಟ್ಟು ಸಾರ್ವಜನಿಕರ ಸೇವೆಯಲ್ಲಿ ನಿರತಾರಗುವ ಕಾರ್ಯ ಇಲಾಖೆಯ ಅಧಿಕಾರಿಗಳು ಮಾಡುತ್ತಿ ದ್ದಾರೆ. ಇದರಿಂದ ಸಾಮಾನ್ಯರ ಮನಸ್ಸಿಗೆ ನೆಮ್ಮದಿ ನೀಡುವುದು ನಮ್ಮೆಲ್ಲರ ಜವಾಬ್ದಾರಿ ಯಾಗಿದೆ,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಅವರು ಮಾತಾನಾಡಿ, ಪೊಲೀಸ್ ಇಲಾಖೆ ಇತರೆ ಇಲಾಖೆಗಳಗಿಂತ ವಿಭಿನ್ನವಾದದ್ದು, ವಿರಾಮವಿಲ್ಲದೆ ದುಡಿಯುವ ಇಲಾಖೆಯಾಗಿದೆ. ದೇಶದ ರಕ್ಷಣೆಗಾಗಿ ಗಡಿ ಕಾಯುವ ಸೈನಿಕರಂತೆ ಸಮಾಜದಲ್ಲಿ ನಡೆಯುವ ಅನೈತಿಕ ಚಟುವಟಿಕೆ ಗಳನ್ನು ತಡೆಯುವ ಉದ್ದೇಶದಿಂದ ಮಹತ್ವದ ಕಾರ್ಯವನ್ನು ಪೊಲೀಸ್ ಇಲಾಖೆ ಮಾಡುತ್ತಿದೆ ಎಂದರು.

ಪೊಲೀಸ್ ಧ್ವಜ ದಿನಾಚರಣೆಯ ಅಂಗವಾಗಿ ಪೊಲೀಸ್ ಧ್ವಜ ಮಾರುವುದರಿಂದ ಬರುವ ಶೇ.50ರಷ್ಟು ಹಣವನ್ನು ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ನಿಧಿಗೆ ನೀಡುವ ಮೂಲಕ ನಿವೃತ್ತ ಅಧಿಕಾರಿಗಳು ಜೀವನ ಸಾಗಿಸಲು ನೆರವು ನೀಡಲಾಗುವುದು. 3.75 ಲಕ್ಷ ಹಣವನ್ನು ಪೊಲೀಸ್ ಇಲಾಖೆಯ ನಿವೃತ್ತ ಪೊಲೀಸ್ ಅಧಿಕಾರಿಗಳು ಮತ್ತು ಕರ್ತವ್ಯ ನಿರ್ವಹಿಸುತ್ತಿ ರುವವರ ಮಕ್ಕಳ ವಿದ್ಯಾಭ್ಯಾಸ ನಿಧಿಗೆ ನೀಡಲಾಗಿದೆ ಎಂದರು.

ನಿವೃತ್ತ ಅಧಿಕಾರಿಗಳಿಗೆ ಸನ್ಮಾನ– 2020 ಏಪ್ರಿಲ್‌ ನಿಂದ ಮಾರ್ಚ್ 2021 ರವರಗೆ ನಿವೃತ್ತಿಯಾದ 9 ಜನ ಪಿಎಸ್ ಐ,‌ 18 ಎಎಸ್ ಐ, ಒಬ್ಬರು ಮಹಿಳಾ ಎಎಸ್ ಐ, 4 ಹೆಡ್ ಕಾನ್ ಸ್ಟೇಬಲ್, 6 ಎಆರ್ ಎಸ್ ಐ, 2 ಎಹೆಚ್ ಸಿ ಅಧಿಕಾರಿಗಳು ಸೇರಿದಂತೆ ಒಟ್ಟು 40 ಜನ ಪೊಲೀಸ್ ಅಧಿಕಾರಿಗಳನ್ನು ಈ ಸಮಯದಲ್ಲಿ ಸನ್ಮಾನಿಸಲಾಯಿತು. ನಿವೃತ್ತ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಹೆಚ್.ನಾಗರಾಜ್ ಅವರು ಮಾತಾನಾಡಿದರು.ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್.ಲಾವಣ್ಯ ವಂದಿಸಿದರು. ಜಿಲ್ಲಾ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಮತ್ತು ಇತರಿದ್ದರು.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;