;

ಗ್ರಂಥಾಲಯಕ್ಕೆ ಉಪನಿರ್ಧೇಶಕರು ಭೆಟ್ಟಿ ಪರಿಶೀಲನೆ.

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

*ಕೂಡ್ಲಿಗಿ:ಗ್ರಂಥಾಲಯಕ್ಕೆ ಉಪನಿರ್ಧೇಶಕರು ಭೆಟ್ಟಿ ಪರಿಶೀಲನೆ*-ವಿಜಯನಗರ ಜಿಲ್ಲೆ ಕೂಡ್ಲಿಗಿ ಕೇಂದ್ರ ಗಂಥಾಲಯಕ್ಕೆ ಉಪ ನಿರ್ಧೇಶಕರಾದ ಬಿ.ಲಕ್ಷ್ಮೀರವರು ಭೆಟ್ಟಿ ಪರಿಶೀಲಿಸಿದರು,ಕಡತಗಳನ್ನು ಹಾಗೂ ಪುಸ್ಥಕ ದಾಸ್ಥಾನುಗಳನ್ನು ಪರಿಶೀಲಿಸಿದರು.ಗ್ರಂಥಾಲಯದಲ್ಲಿ ನೈರ್ಮಲ್ಯತೆ ಕಾಪಾಡಬೇಕು ಮತ್ತು ಓದುಗರ ಕೋರಿಕೆಗೆ ಸ್ಪಂಧಿಸಬೇಕೆಂದು ಸಿಬ್ಬಂದಿಗೆ ಸೂಚಿಸಿದರು,ನೂತನ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಸ್ಥಳೀಯ ಆಡಳಿತ ಜೊತೆ ಚರ್ಚಿಸಲಾಗುತ್ತಿದೆ ಮತ್ತು ಪತ್ರ ವ್ಯವಹಾರ ಜರುಗಿದೆ ಎಂದರು.ವಂದೇ ಮಾತರಂ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ವಿ.ಜಿ.ವೃಷಭೇಂದ್ರ ಮ‍ಾತನಾಡಿ, ಬಿಟ್ಟಗ್ರಂಥಾಲಯಕ್ಕೆ ಈಗಿರುವ ಕಟ್ಟಡ ತುಂಬಾ ಚಿಕ್ಕದಿದ್ದು ಓದುಗರಿಗೆ ತುಂಬಾ ಅನಾನುಕೂಲವಾಗುತ್ತಿದೆ,ಕೂಡಲೇ ಸುಸಜ್ಜಿತ ಬೇರೆಕಟ್ಟಡಕ್ಕೆ ಸ್ಥಳಾಂತರಿಸಲು ಕ್ರಮಕ್ಕೆ ಒತ್ತಾಯಿಸಿದರು.ನೂತನ ಗ್ರಂಥಾಲಯ ನೂತನ ಕಟ್ಟಡ ಪಟ್ಟಣದ ಹೃದಯಭಾಗದಲ್ಲಿ ನಿರ್ಮಿಸಿದ್ದಲ್ಲಿ ರೈತರಿಗೆ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತುಂಬಾ ಅನುಕೂಲವಾಗುತ್ತದೆ,ಕಾರಣ ಹಳೇಚಾವಡಿಯ ಶಿಥಾಲವಸ್ಥೆಯ ಕಟ್ಟಡ ತೆರವುಗೊಳಿಸಿ ಅದೇ ಜಾಗದಲ್ಲಿ ನೂತನ ಕಟ್ಟಡವನ್ನು ನಿರ್ಮಿಸಬಹುದಾಗಿದೆ. ಭಾಗದಲ್ಲಿ ನಿರ್ಮಿಸಲು ಕ್ರಮಕ್ಕೆ ಉಪನಿರ್ಧೇಶಕರಿಗೆ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಒತ್ತಾಯಿಸಿದರು.ತಾಲೂಕಿನ ಪತ್ರಕರ್ತರು ಗ್ರಂಥಾಲಯ ನೂತನ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಹಲವು ಬಾರಿ ವರದಿ ಮಾಡಿದ್ದಾರೆ,ಸಂಘ ಸಂಸ್ಥೆಳ ಪದಾಧಿಕಾರಿಗಳು ಮನವಿಗಳನ್ನ ಮಾಡಲಾಗಿದೆ ಕೂಡಲೇ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.ಶೀಘ್ರದಲ್ಲಿಯೇ ಈಗಿರುವ ಕಟ್ಟಡದಿಂದ ಗ್ರಂಥಾಲಯವನ್ನ ದೊಡ್ಡದಾದ ಕಟ್ಟಡಕ್ಕೆ ಸ್ಥಳಾಂತರಿಸಿ,ನೂತನ ಕಟ್ಟಡದ ವ್ಯವಸ್ಥೆ ಇಲಾಖೆ ಮಾಡಬೇಕೆಂದು ವೃಷಭೇಂದ್ರ ಅಧಿಕಾರಿಗಳಿಗೆ ಒತ್ತಾಯಿಸಿದರು.ಉಪನಿರ್ಧೇಶಕರಾದ ಲಕ್ಷ್ಮೀರವರು ಮಾತನಾಡಿದರು ಓದುಗರ ಸಾರ್ವಜನಿಕರ ಆಶಯದಂತೆ ಪಟ್ಟಣದ ಹೃದಯ ಭಾಗದಲ್ಲಿಯೇ ಕೇಂದ್ರ ಗ್ರಂಥಾಲಯ ನಿರ್ಮಾಣಕ್ಕೆ ಆಧ್ಯತೆ ನೀಡಲಾಗುತ್ತದೆ,ಈ ನಿಟ್ಟಿನಲ್ಲಿ ಅಗತ್ಯ ಪ್ರಾಮಾಣಿಕ ಪ್ರಯತ್ನ ನಡೆದಿದೆ ಓದುಗರಿಗೆ ಅಗತ್ಯ ಸೌಕರ್ಯ ಕಲ್ಪಿಸುವ ಎಲ್ಲಾ ಪ್ರಯತ್ನ ಇಲಾಖೆ ಮಾಡುತ್ತಿದೆ ಎಂದರು…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;