ವರದಿ.ಡಿ. ಎಂ. ಈಶ್ವರಪ್ಪ ಸಿದ್ದಾಪುರ

*ದಿನಾಂಕ.04.03.2021. ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು*
ಒಳಮೀಸಲಾತಿ ಗಾಗಿ ಆಗ್ರಹಿಸಿ ಅನಿರ್ದಿಷ್ಟ ಕಾಲದ ಅಹೋರಾತ್ರಿ ಪ್ರತಿಭಟನೆ ಧರಣಿ
ಸಾಮಾಜಿಕ ನ್ಯಾಯಕ್ಕಾಗಿ SC.ST.OBC ಜಾತಿ ಜನಸಂಖ್ಯೆ ಅನುಗುಣವಾಗಿ ಮೀಸಲಾತಿ ಮತ್ತು ಒಳಮೀಸಲಾತಿ ಗಾಗಿ ಆಗ್ರಹಿಸಿ ದಿನಾಂಕ 25 .2 .2021 ರಿಂದ ಬೆಂಗಳೂರಿನ ಮೌರ್ಯ ಸರ್ಕಲಿನಲ್ಲಿ ನಡೆಸುತ್ತಿರುವ “ಅನಿರ್ದಿಷ್ಟ ಕಾಲದ ಆಹೋರಾತ್ರಿ ಧರಣಿ ” ಯಲ್ಲಿ ದಿನಾಂಕ 6 .3. 2021 ರಂದು ಶನಿವಾರದಂದು ಬೆಳಿಗ್ಗೆ ಬೆಂಗಳೂರಿನ ಮೌರ್ಯ ಸರ್ಕಲ್ ನಲ್ಲಿ ನಡೆಯುವ ಪ್ರತಿಭಟನೆಗೆ ವಿಜಯನಗರ ಜಿಲ್ಲಾ ಸಮಿತಿ ಎಲ್ಲಾ ತಾಲೂಕುಗಳನ್ನೊಳಗೊಂಡ ದಲಿತ ಸಂಘರ್ಷ ಸಮಿತಿ ಮುಖಂಡರು ಸಂಚಾಲಕರು ಸಂಘಟನಾ ಸಂಚಾಲಕರು ಕಾರ್ಯಕಾರಣಿ ಸದಸ್ಯರು ಮತ್ತು ಎಲ್ಲಾ ಹಂತದ ಪದಾಧಿಕಾರಿಗಳು ಹೋಬಳಿ ಮಟ್ಟದ ಹಾಗೂ ಗ್ರಾಮ ಮಟ್ಟದ ದಲಿತ ಸಂಘರ್ಷ ಸಮಿತಿ ಸಂಚಾಲಕರು ಸಂಘಟನೆ ಸಂಚಾಲಕರು ಸದಸ್ಯರು ಪದಾಧಿಕಾರಿಗಳು ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ. ವಿಜಯನಗರ ಜಿಲ್ಲಾ ಸಂಚಾಲಕರಾದ . ಕೂಡ್ಲಿಗಿ ಎಸ್ ದುರುಗೇಶ. ಕೂಡ್ಲಿಗಿ ತಾಲೂಕು ದಲಿತ ಸಂಘರ್ಷ ಸಮಿತಿ ಸಂಚಾಲಕರಾದ ಕಂದಗಲ್ ಪರಶುರಾಮ ಮನವಿ ಮಾಡಿಕೊಂಡಿರುತ್ತಾರೆ….
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
