ವರದಿ. ಎಚ್ಚರಿಕೆ ಪತ್ರಿಕಾ ವರದಿಗಾರರು

[3/4, 08:28] echharike:ಬಡವರ ಬದುಕಲ್ಲಿ ಆಟ ವಾಡಿತ ವಿಧಿ!ಅಥವಾ ಯಾರಾದರೂ ಹೋಗಲಿ ನಾವು ಮಾತ್ರ ಇರೋದೇ ಹೀಗೆ ಎನ್ನುವಂತಹ ಭ್ರಷ್ಟ ಆಡಳಿತ ವ್ಯವಸ್ಥೆ ಇದರ ಮದ್ಯೆ ಇನ್ನೆಷ್ಟು ಬಡ ಜನರ ಬಲಿಗಾಗಿ ಕಾಯ್ದು ಕುಳಿತಿದೆಯೋ ಈ ಹಾಳಾದ ರಾಷ್ಟ್ರೀಯ ಹೆದ್ದಾರಿ, ಇದು ಚಿತ್ರದುರ್ಗದಿಂದ ಮಹಾರಾಷ್ಟ್ರಕ್ಕೆ ಹೋಗುವ ಹಾಗೂ ಮೊನ್ನೆ ಮೊನ್ನೆ ತಾನೇ ಹೊಸದಾಗಿ ನವಿಕರಿಸಿದ ರಸ್ತೆಯಿದು ಇದಕ್ಕೆ ಸರಿಯಾದ ಮುಂದಾಲೋಚನೆ ಇಲ್ಲದೆ ನಿರ್ಮಾಣ ಮಾಡಿ ಬಡವರ ಬದುಕನ್ನು ಮೋಟಕುಗುಳಿಸುತ್ತಿದೆ ಈ ನಮ್ಮ ರಾಜ್ಯ ಸರ್ಕಾರ, ಇಷ್ಟೆಲ್ಲಾ ಹೇಳುತ್ತಿರುವುದು ರಾಷ್ಟ್ರಿಯ ಹೆದ್ದಾರಿ 50ರ ಬಗ್ಗೆ ಇಲ್ಲಿ ಹಗಲಿರುಳು ಎಂಬದೆ ಹಲವಾರು ಅಪಘಾತಗಳು ಸಂಭವಿಸುತ್ತವೆ. ಅದರಲ್ಲಿ ಬದುಕಿ ತಮ್ಮ ಒಂದು ಜೀವನವನ್ನು ಹಾಳು ಮಾಡಿಕೊಂಡು ಸಮಾಜಕ್ಕೆ ಹೊರೆಯಾಗಿ ಬದುಕ್ಕುತ್ತಿರುವರು ಹಲವು ಜನ, ಮತ್ತು ಹಲವಾರು ಮಕ್ಕಳು ತಮ್ಮ ಒಂದು ತಂದೆ ತಾಯಿಯನ್ನು ಕಳೆದುಕೊಂಡು ಬೀದಿಗೆ ಬಿದ್ದಿರುವರು ಸುಮಾರು ಕುಟುಂಬಗಳು ಇಷ್ಟೆಲ್ಲಾ ಅವ್ಯವಸ್ಥೆಯಾ ಆಗರವಾಗಿರುವುದು.

ವಿಜಯನಗರ ಜಿಲ್ಲೆಯಾ, ಕೂಡ್ಲಿಗಿ ತಾಲೂಕಿನ, ಎಂ,ಬಿ,ಅಯ್ಯನಹಳ್ಳಿ ಗ್ರಾಮದಲ್ಲಿ ಈ ಒಂದು ರಾಷ್ಟ್ರಿಯ ಹೆದ್ದಾರಿ 50 ಊರಿನ ಮದ್ಯದಲ್ಲಿ ಆಯ್ದು ಹೋಗಿದ್ದು ಇದಕ್ಕೆ ಸರಿಯಾದ ವ್ಯವಸ್ಥೆಯನ್ನು ಕಲ್ಪಿಸದ ರಸ್ತೆ ನಿರ್ಮಾಣವನ್ನು ಮಾಡಲೆಂದು ಟೆಂಡರ್ ಪಡೆದ ಕಂಪನಿ, ಬೇಕಾ ಬಿಟ್ಟಿ ತನ್ನ ಒಂದು ಕೆಲಸವನ್ನು ಮಾಡಿ ಈಗ ದಿನನಿತ್ಯ ತಮ್ಮ ಒಂದು ಕೆಲಸ ಕಾರ್ಯಗಳಿಗೆ ಈ ಒಂದು ರಸ್ತೆಯನ್ನು ದಾಟಿ ಹೊಡಾಡುತ್ತಿರುವ ಬಡವರ ಪಾಡು ಮಾತ್ರ ತುಂಬಾ ನರಕಯಾತನೆ ಎಂದರು ತಪ್ಪಾಗಲಾರದು, ಹಾಗೂ ಈ ಒಂದು ಮಾರ್ಗದಲ್ಲಿ ಸರ್ಕಾರಿ ಪ್ರೌಢಶಾಲೆ ಹಾಗೂ ವಿದ್ಯಾರ್ಥಿ ನಿಲಯವಿದ್ದು ಇಲ್ಲಿ ಸಂಚರಿಸುವ ವಿದ್ಯಾರ್ಥಿಗಳಿಗೆ ಮಾತ್ರ ಇದು ಯಮಧಾರಿಯೇ ಸರಿ, ನೋಡಿ ಈ ಒಂದು ರಸ್ತೆಯನ್ನು ದಾಟಿ ದಿನನಿತ್ಯ ಸಂಚರಿಸಲು ಒಂದು “ಅಂಡರ್ ಬ್ರಿಡ್ಜ್ “ಸಹ ನಿರ್ಮಿಸಲು ಮೀನಾ ಮೇಶವನ್ನು ಎಣಿಸುತ್ತಿರುವ ಸರ್ಕಾರಕ್ಕೆ ಈ ಗ್ರಾಮದ ಜನರು ನಿತ್ಯ ಬಲಿಯನ್ನು ಕೊಡುವುದೊಂದೇ ಇಲ್ಲಿನ ಬಡಜನರು ಹಾಗೂ ವಿದ್ಯಾರ್ಥಿಗಳ ನಿತ್ಯದ ಬದುಕು ಎಂದರು ತಪ್ಪಾಗಲಾರದು.

ಈ ಒಂದು ರಸ್ತೆಗೆ “ಅಂಡರ್ ಪಾಸ್ “ನಿರ್ಮಿಸಿಕೊಡಲು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಹಲವು ಬಾರಿ ರಸ್ತೆತಡೆಯನ್ನು ಮಾಡಿದರು ಎಚ್ಚಟ್ಟುಕೊಳ್ಳದ ತಾಲೋಕು ಆಡಳಿತ ವ್ಯವಸ್ಥೆ ಇಲ್ಲಿ ಎಷ್ಟು ಆದಗೆಟ್ಟಿದೇ ಅಂತ ರಾಜ್ಯದ ಜನತೆ ವಿಚಾರಮಾಡಲಿ ರಸ್ತೆ ತಡೆಯನ್ನು ಮಾಡುವ ಬಂದು ಎಲ್ಲಾ ತರದ ಅಸ್ವಾಸನೆಯನ್ನು ಕೊಟ್ಟು ಹೋದ ಮಾನ್ಯ ತಾಲೋಕು ದಂಡಾಧಿಕಾರಿಗಳು ಇಲ್ಲಿಯ ತನಕವು ಇದರ ಬಗ್ಗೆ ಸ್ವಲ್ಪವು ಕಾಳಜಿಯನ್ನು ವಹಿಸಿಲ್ಲ ಇದರ ಪ್ರತಿಫಲವಾಗಿ, ಇಂದು ಬೆಳಗಿನ ಜಾವಾ ರಸ್ತೆಅಪಘಾತದಲ್ಲಿ ಓರ್ವ ಗ್ರಾಮದ ಗ್ರಾಮಸ್ಥರು ಸಾವನ್ನಪ್ಪಿದ್ದರೆ ಇದೆಲ್ಲ ಹೇಗೆ ಗೊತ್ತಾಗುತ್ತೆ ಹೇಳಿ ದೊಡ್ಡವರಿಗೆ ಅವರ ಮನೆಯವರೇನು ಸತ್ತಿಲ್ಲ ತಾನೇ ಸತ್ತಿರುವುದು ಗ್ರಾಮದ ವ್ಯಕ್ತಿ ಅಲ್ವಾ ಆದರೆ ಆಗಲಿ ಬಿಡಿ ನಮಗೇನು ಅನ್ನುವ ಒಂದು ಮನೋಸ್ಥಿತಿಗೆ ಯರು ಉತ್ತರ ಕೊಡಬೇಕು ಹೇಳಿ.
ಮತ್ತು ತಾಲೂಕಿನ ಹೆಸರಾಂತ ಶಾಸಕರು ಮಾನ್ಯ ಏನ್. ವೈ. ಗೋಪಾಲಕೃಷ್ಣ ರವರಿಗೆ ಈ ಇಂದೇ ಸ್ವತಃ ನಾನೆ ಫೋನ್ ಮಾಡಿ ಈ ಒಂದು ರಸ್ತೆಯನ್ನು ಸರಿಪಡಿಸಲು ಮುಂದಾಗಿ ಎಂದು ಅವರ ಗಮನಕ್ಕೆ ತಂದರೆ, ಆಯಿತು ಬಿಡು ತಮ ನೋಡೋಣ ಎನ್ನುವ ಆರಿಕೆ ಉತ್ತರವನ್ನು ಕೊಟ್ಟು ಬೆಚ್ಚಗೆ ಮಲಗಿದರೆ ಇಂದು ಬಡ ಜೀವ ಈ ರಸ್ತೆಯಲ್ಲಿ ಬಲಿಯಾಗಿದೆ ಇದಕ್ಕೆಲ್ಲ ಉತ್ತರವನ್ನು ಕೊಡಲಿ ಮಾನ್ಯ ಶಾಸಕರು ಇದಕ್ಕೆನಾ ನಾವು ಜನನಾಯಕರನ್ನು ಆಯ್ಕೆ ಮಾಡುವುದು ಯೋಚಿಸಿ ಇನ್ನಾದರೂ ಈ ಒಂದು ಎಂ. ಬಿ. ಅಯ್ಯನಹಳ್ಳಿ ಗ್ರಾಮದ ರಸ್ತೆಯಲ್ಲಿ ರಸ್ತೆಯನ್ನು ದಾಟಿ ಹೋಗಲು ಅಂಡರ್ ಬ್ರಿಡ್ಜ್ ನಿರ್ಮಿಸಿಕೊಡಲು ಮುಂದಾಗುವರೋ ಅಥವಾ ಆ ವ್ಯಕ್ತಿಯೇನು ನಮ್ಮ ಒಂದು ಕುಟುಂಬದವನಲ್ಲ ಬಿಡು ಎನ್ನುವ ಒಂದು ದುರಂಕಾರದಿಂದ ಇನ್ನೂ ಹಲವು ಸಾರ್ವಜನಿಕರು ಬಲಿಯಾಗುವುದನ್ನು ನೋಡಿ ಖುಷಿಯನ್ನು ಪಡುವರೋ ಕಾಯ್ದು ನೋಡೋಣ, ಸಾಹೇಬ್ರೆ ಒಂದು ವಿಚಾರ ನೆನಪಿರಲಿ, ನಿಮಗಾಗಲಿ ನಿಮ್ಮ ಸರ್ಕಾರಕ್ಕಾಗಲಿ ನನ್ನದೊಂದು ಎಚ್ಚರಿಕೆಯಾ ಸಂದೇಶ,ಬಡವರ ಕೋಪ ದವಡೆಗೆ ಮೂಲ,ನೆನಪಿರಲಿ ಹಾಗೂ ಅತೀ ಶೀಘ್ರದಲ್ಲಿ ಈ ಒಂದು ಗ್ರಾಮದಲ್ಲಿ ಅಂಡರ್ ಬ್ರಿಡ್ಜ್ ನಿರ್ಮಿಸಿ ಸುಮಾರು ಜೀವಗಳು ಬಲಿಯಾಗುವುದನ್ನು ತಪ್ಪಿಸಿ ಎನ್ನುವುದೊಂದೇ ನಮ್ಮ ಒಂದು ಆಶಯ….
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
