;

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಎಸ್.ಸಿ ಮೋರ್ಚಾ ಕಾರ್ಯಕಾರಣಿ ಸಭೆ..!

ವರದಿ. ಮಂಜುನಾಥ್, ಎಚ್

ಚಿತ್ರದುರ್ಗ: ಮೊಳಕಾಲ್ಮುರು ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಎಸ್.ಸಿ ಮೋರ್ಚಾ ಕಾರ್ಯಕಾರಣಿ ಸಭೆ..! ಪ್ರಧಾನಿ ನರೇಂದ್ರ ಮೋದಿಯವರ ಜನಪರ ಕಾರ್ಯಗಳಿಂದಾಗಿ ಇಡೀ ದೇಶದಲ್ಲಿ ಬಿಜೆಪಿ ಬಲಿಷ್ಠವಾಗಿದ್ದು ಪಕ್ಷದಲ್ಲಿ ಕೇವಲ ಹುದ್ದೆಗೆ ಅಂಟಿಕೊಳ್ಳದೆ ಪಕ್ಷ ಸಂಘಟನೆಗೆ ಮುಂದಾಗ ಬೇಕೆಂದು ಬಿಜೆಪಿ ಜಿಲ್ಲಾ ಎಸ್.ಸಿ. ಮೋರ್ಚಾ ಅಧ್ಯಕ್ಷ ಹಾಲಪ್ಪನವರ್‌ ಹೇಳಿದರು. ಪಟ್ಟಣದಬಿಜೆಪಿಕಚೇರಿಯಲ್ಲಿಸೋಮವಾರ ತಾಲೂಕು ಬಿಜೆಪಿ ಎಸ್ಸಿ ಮೋರ್ಚಾದಿಂದ ಆಯೋಜಿಸಿದ್ದ ಬಿಜೆಪಿ ಎಸ್ಸಿ ಮೋರ್ಚಾ ಕಾರ್ಯಕಾರಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಬಿಜೆಪಿಯಲ್ಲಿ ಕೇವಲ ಹುದ್ದೆ ಪಡೆದರೆ ಸಾಲದು. ಹುದ್ದೆಗೆ ತಕ್ಕಂತೆ ಪಕ್ಷ ಸಂಘಟನೆಗೆ ಮುಂದಾಗಬೇಕು. ಪ್ರಧಾನಿ ನರೇಂದ್ರ ಮೋದಿಯವರು ಸಾಕಷ್ಟು ಯೋಜನೆಗಳನ್ನು ಈ ದೇಶಕ್ಕಾಗಿ ಕೊಟ್ಟಿದ್ದಾರೆ ಎಂದು ಬಿಜೆಪಿ ಎಸ್.ಸಿ. ಮೋರ್ಚಾ ಜಿಲ್ಲಾಧ್ಯಕ್ಷ ಹಾಲಪ್ಪ ತಿಳಿಸಿದರು. ಪಟ್ಟಣದ ಜಿ.ಜೆ.ಪಿ ಕಾರ್ಯಾಲಯದಲ್ಲಿ ತಾಲ್ಲೂಕು ಎಸ್.ಸಿ. ಮೋರ್ಚಾ ತಾಲ್ಲೂಕು ಕಾರ್ಯಕಾರಿಣಿ ಸಭೆಯಲ್ಲಿ ಅವರುಮಾತನಾಡಿದರು. ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳು ಸೌದೆಯನ್ನು ತಂದು ಅಡುಗೆ ಮಾಡು ವಷ್ಟರಲ್ಲಿ ಅವರ ಕಣ್ಣುಗಳಿಗೆ ಹೊಗೆ ತುಂಬಿಕೊಂಡು ಅವರ ಆರೋಗ್ಯ ಕೆಡುತ್ತಿತ್ತು. ಆದರೆಉಜ್ಜಲಭವಿಷ್ಯ ಯೋಜನೆಯಡಿಯಲ್ಲಿ ಪ್ರತಿಯೊಂದು ಮನೆ ಮನೆಗಳಿಗೆ ಅಡುಗೆ ಅನಿಲ ಇರುವುದು ಇಂದುನಾವು ಕಾಣುತ್ತೇವ ಇಂತಹ ಉತ್ತಮ ಯೋಜನೆಗಳನ್ನು ದೇಶದ ಅಭಿವೃದ್ಧಿಗೋಸ್ಕರ ಸದಾ ಶ್ರಮಿಸುತ್ತಿರುವ ನಾಯಕ ಎಂದರೆ ಮೋದಿಯವರು ಎಂದರು. ಮಂಡಾಲಧ್ಯಕ್ಷ ಪಿ.ಎಂ.ಮಂಜುನಾಥ, ರಾಜ್ಯ ಎಸ್ಸಿ ಮೋರ್ಚಾ ಕಾರ್ಯಕಾರಿಣಿ ಸದಸ್ಯೆ ಭಾರ್ಗವಿ ದ್ರಾವಿಡ್ ಮಾತನಾಡಿದರು. ಎಸ್.ಸಿ.ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ನಾಗರಾಜ, ಪಾಂಡು, ಸಿದ್ದಾರ್ಥ, ಎನ್.ಪಿ.ಪ್ರಭಾಕರ, ಎಲ್.ಪರಮೇಶ್ವರಪ್ಪ, ಬಲರಾಮ್, ಮಹೇಶ ಇದ್ದರು.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;