ವರದಿ. ವಿರೇಶ್ ಬಳ್ಳಾರಿ

ಹಳೇಕೋಟೆ ಭಕ್ತರಿಂದ್ದ ಶ್ರೀಶೈಲಕ್ಕೆ ಪಾದಯಾತ್ರೆ* ಸಿರುಗುಪ್ಪ ತಾಲೂಕಿನ ನಂ 64 ಹಳೇಕೋಟೆಯ ಭಕ್ತರಿಂದ್ದ ಸತತವಾಗಿ 17 ವರ್ಷ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಪಾದಯಾತ್ರೆ ಕೈಗೊಂಡಿದ್ದಾರೆ. ಭಕ್ತರು ಸತತವಾಗಿ 17 ವರ್ಷಗಳ ಹಿಂದೆ 20 ರಿಂದ್ದ 30 ಜನ ಕಾಲು ನಡಿಗೆ ಆರಂಭಿಸಿದರು.ಅವರಾತ್ರಿ (ಅಮೃತ)ಅಮವಾಸ್ಯೆ 9 ದಿನ ಮುಂಚೆಯೆ ಹಳೇಕೋಟೆಯಿಂದ ಕಾಲು ನಡಿಗೆ ಮುಖಾಂತರ ತಮ್ಮ ದಿನನಿತ್ಯದ ಸಾಮಾಗ್ರಿಗಳನ್ನು ಜೊತೆಗೆ ಮಾತ್ರೆಗಳು ಊಟಕ್ಕೆ ಬೇಕಾಗುವ ಅಕ್ಕಿ ಬೆಳೆ ತರಕಾರಿ ಒಂದು ಆಟೋದಲ್ಲಿ ತೆಗೆದುಕೊಂಡು ಮೊದಲನೆ ದಿನ ಸುಮಾರು ಐವತ್ತು ಕಿಲೋಮೀಟರ್ ಹೋಗುತ್ತಾರೆ.ರಾತ್ರಿ ಸಮಯದಲ್ಲಿ ಒಂದು ಊರಲ್ಲಿ ತಂಗುತ್ತಾರೆ.ಮುಂಜಾನೆ ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಯಥಾವತ್ತಾಗಿ ಕಾಲು ನಡಿಗೆ ಪ್ರಾರಂಭಿಸುತ್ತಾರೆ. ಹೀಗೆ ಸುಮಾರು ಆರು ದಿನಗಳವರಿಗೆ ಸಾಗುತ್ತದೆ ಆರನೇ ದಿನ ವೆಂಕಟಪುರಕ್ಕೆ ಬಂದು ತಂಗುತ್ತಾರೆ. ಅಮೇಲೆ ಹಳೇಕೋಟೆಯಿಂದ ಸುಮಾರು 8 ಬಸ್ಸುಗಳಲ್ಲಿ ಭಕ್ತರು ಹೋಗುತ್ತಾರೆ. ಹಳೇಕೋಟೆಯಿಂದ ವೆಂಕಟಪುರಕ್ಕೆ ತಲಾ ಒಬ್ಬರಿಗೆ 350 ರೂಪಾಯಿ ಚಾರ್ಜ್ ಅಗುತ್ತೆ.ಇವರು ವೆಂಕಟಪುರಕ್ಕೆ ಬಂದು ಮೊದಲು ಪಾದಯಾತ್ರೆ ಕೈಗೊಂಡ ಭಕ್ತರನ್ನು ಸೇರಿಕೊಂಡು ರಾತ್ರಿ ವಾಸ್ತವ್ಯ ಮಾಡುತ್ತಾರೆ.ಅಲ್ಲಿಂದ ಬೆಳಿಗ್ಗೆ ಯಥಾರೀತಿ ನಡಿಗೆ ಆರಂಭ ಮಾಡುತ್ತಾರೆ ನಲ್ಲಮಲ್ಲ ಅರಣ್ಯ(ಫಾರಸ್ಟ) ಮೂಲಕ ಹೋಗಿ 7ನೇ ದಿನ ಅಡವಿಚಿಚ್ಚರಹಳ್ಳಿಯಲ್ಲಿ ವಾಸ್ತವ್ಯವಿದ್ದು ಅಲ್ಲಿಂದ ಬೇಟ್ಟ ಗುಡ್ಡಗಳಲ್ಲಿ ನೇರವಾಗಿ ಶ್ರೀ ಶೈಲಕ್ಕೆ ಹೋಗಿ ಪಾದಯಾತ್ರೆ ಮುಕ್ತಾಯ ಮಾಡುತ್ತಾರೆ. ಅಮವಾಸ್ಯೆ ದಿನ ದೇವರ ದರ್ಶನ ಮಾಡಿ ತಮ್ಮ ಕಷ್ಟಗಳನ್ನು ದೇವರಲ್ಲಿ ಹೇಳಿಕೊಳ್ಳುತ್ತಾರೆ.ಭಕ್ತರು ಬಸ್ಸಿನ ಮೂಲಕ ಊರಿಗೆ ಹಿಂದಿರುಗುತ್ತಾರೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
