ವರದಿ. ಎಚ್ಚರಿಕೆ ಪತ್ರಿಕಾ ವರದಿಗಾರ

ದಿನಾಂಕ 08-02-2021 ರಂದು ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿ ಪಟ್ಟಣದಲ್ಲಿ ಶ್ರೀ ಎಂ.ಪಿ. ಪ್ರಕಾಶ್ ರವರ ಸ್ಮಾರಕದಲ್ಲಿ ಕರ್ನಾಟಕದ ಮಾಜಿ ಉಪ ಮುಖ್ಯಮಂತ್ರಿ, ಸಾಂಸ್ಕ್ರತಿಕ ರಾಜಕಾರಣಿ, ಹಾಗೂ ನಮ್ಮೆಲ್ಲರ ಆರಾಧ್ಯ ಚೇತನ *ಶ್ರೀ ಎಂ.ಪಿ ಪ್ರಕಾಶ್* ಅವರ ಪುಣ್ಯಸ್ಮರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು .

ಪರಮಪೂಜ್ಯ *ಶ್ರೀ ಮಾ.ನಿ.ಪ್ರ ಡಾ. ಹಿರಿಶಾಂತವೀರ ಮಹಾಸ್ವಾಮಿಗಳು, ಗವಿಮಠ*, ಹೂವಿನ ಹಡಗಲಿ ಹಾಗೂ ಪರಮಪೂಜ್ಯ *ಶ್ರೀ ಮ.ನಿ.ಪ್ರ. ಚನ್ನಬಸವ ಶಿವಯೋಗಿ ಮಹಾಸ್ವಾಮಿಗಳು, ಹಿರೇಮಲ್ಲನಕೆರೆ ಮಠ* ಅವರು ಧಿವ್ಯ ಸಾನ್ನಿಧ್ಯವನ್ನು ವಹಿಸಿ ಎಂಪಿ ಪ್ರಕಾಶರ ರಾಜ್ಯಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು. ಉಪಸ್ಥಿತಿ : *ಶ್ರೀಮತಿ ಎಂ.ಪಿ. ರುದ್ರಾಂಬ ಪ್ರಕಾಶ್* ಗೌರವಾಧ್ಯಕ್ಷರು, ಶ್ರೀ ಎಂ.ಪಿ ಪ್ರಕಾಶ್ ಸಮಾಜಮುಖಿ ಟ್ರಸ್ಟ್ (ರಿ), *ಶ್ರೀಮತಿ ಎಂ.ಪಿ. ವೀಣಾ* ಹಾಗೂ *ಶ್ರೀಮತಿ ಎಂ.ಪಿ. ಸುಮಾ* , *ಡಾ ಮಹಾಂತೇಶ್ ಚರಂತಿಮಠ* ಉಪಸ್ಥಿತರಿದ್ದರು . , ಆಪಾರ ಬಂದು ಬಳಗ , ಹಡಗಲಿ , ಹರಪನಹಳ್ಳಿ ಮತ್ತು ರಾಜ್ಯದ ಅನೇಕ ಭಾಗಳಿಂದ ಆಗಮಿಸದ ಅಭಿಮಾನಿಗಳು ಗೌರವ ನಮನಗಳನ್ನು ಸಲ್ಲಿಸಿದರು . *ಶ್ರೀ ರವೀಂದ್ರ ಸೊರಗಾವಿ* ಮತ್ತು ತಂಡ ಗೀತ ನಮನಗಳನ್ನು ಸಲ್ಲಿಸಿದರು . *ಶ್ರೀ ಮಹಾಂತೇಶ್* ಬುರ್ಲಿ ಥಿಯೇಟರ್ ತಂಡ. ಹಗರಿಬೊಮ್ಮನಹಳ್ಳಿ ಅವರು ರಂಗ ನಮನಗಳನ್ನು ಸಲ್ಲಿಸಿದರು .
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
