ವರದಿ. ಡಿ.ಎಂ. ಈಶ್ವರಪ್ಪ ಸಿದ್ದಾಪುರ

*ಕರ್ನಾಟಕ ಪತ್ರಕರ್ತ ಸಂಘದಿಂದ ಪತ್ರಕರ್ತರಿಗೆ ಸಹಾಯ ಧನ*<>ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಫೆ6ರಂದು.ಕರ್ನಾಟಕ ಪತ್ರಕರ್ತರ ಸಂಘದ ಕೂಡ್ಲಿಗಿ ಅಧ್ಯಕ್ಷ ಬೆಳ್ಳಗಟ್ಟೆ ಕೃಷ್ಣಪ್ಪರಿಗೆ,ಕರ್ನಾಟಕ ಪತ್ರಕರ್ತರ ಸಂಘದಿಂದ 15000/- ರೂ ಮೊತ್ತವನ್ನು ಆರೋಗ್ಯ ಚಿಕಿತ್ಸೆಗೆಂದು ಸಹಾಯ ಧನ ನೀಡಲಾಯಿತು.ಕೂಡ್ಲಿಗಿ ತಾಲೂಕಿನ ಹಿರಿಯ ಪತ್ರಕರ್ತಬೆಳ್ಳಗಟ್ಟೆ ಕೃಷ್ಣಪ್ಪರು,ದವಡೆ ಕ್ಯಾನ್ಸರ್ ನಿಂದಾಗಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ.ಅವರ ಔಷಧೋಪಚಾರಕ್ಕಾಗಿ ಅವರಿಗೆ ಸಹಾಯಾರ್ಥವಾಗಿ ನೀಡಲಾಗಿದೆ,ಕ.ಪ.ಸಂಘದ ರಾಜ್ಯಧ್ಯಕ್ಷರಾದ ಮುರುಗೇಶ ಶಿವಪೂಜೆ ರವರ ಸೂಚನೆಯಂತೆ,ಸಂಘಟನೆಯ ಆರೋಗ್ಯ ನಿಧಿಯಿಂದ ನೀಡಲ್ಪಡುವ ಸಹಾಧನ ಇದಾಗಿದೆ.ಕರ್ನಾಟಕ ಪತ್ರಕರ್ತರ ಸಂಘದ ಪರವಾಗಿ ಕೃಷ್ಣಪ್ಪರಿಗೆ 15000/-ರೂ ನಗದು ಹಣ ನೀಡಲಾಯಿತು,ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಬಂಡ್ರಿ ಗೋಪಾಲ್ ಹಾಗೂ ವಿ.ಜಿ.ವೃಷಭೇಂದ್ರ ಸೇರಿದಂತೆ.ಪತ್ರಕರ್ತರಾದ ಕೆ.ಎಸ್.ಮುರುಳೀಧರ ಶೆಟ್ಟ್ರು,ಬಡಿಗೇರ ನಾಗರಾಜ,ಬಾಣದ ಶಿವಮೂರ್ತಿ,ಎಲೆ ನಾಗರಾಜ,ಜೂಗುಲರ ಸೊಲ್ಲೇಶ,ಸಮಾಜ ಸೇವಕ ನಾಣ್ಯಾಪುರ ಮಲ್ಲಪ್ಪ ಮುಂತಾದವರಿದ್ದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
