ಮನವಿ ಕೊಟ್ಟರು ಮಾನವೀಯತೆಯನ್ನು ಮರೆತ ತಾಲೋಕು ದಂಡಾಧಿಕಾರಿಗಳು..

ಸಂಪಾದಕೀಯ
ಎಚ್ಚರಿಕೆ ಪತ್ರಿಕೆ ಸಂಪಾದಕರು
ನಾ ಕಲಿತ ಶಾಲೆ ಮತ್ತು ಹತ್ತು ಹಲವು ಸಮಾಜ ಸೇವಕರು ಹಾಗೂ ಹಲವು ಸರ್ಕಾರಿ ನೌಕರರನ್ನು ಸಮಾಜದ ಒಳಿತಿಗಾಗಿ ಸೃಷ್ಟಿ ಮಾಡಿದ ದೇಗುಲವದು,ಮತ್ತು ತಾಲೂಕಿನಲ್ಲಿ ತನ್ನದೇ ಆದ ವಿದ್ಯೆಯನ್ನು ದಾರೆಯರೆದ ದೇಗುಲವದು ಅಂದರೆ ಈಗ ನಾನು ಹೇಳ ಹೊರಟಿರುವ ಜ್ಞಾನದೇಗುಲವಿರುವುದು,ಬಳ್ಳಾರಿ ಜಿಲ್ಲೆಯ,ಕೂಡ್ಲಿಗಿ ಎಂಬ ಬಡ ತಾಲೂಕಿನಲ್ಲಿರುವ,ಎಂ.ಬಿ.ಅಯ್ಯನಹಳ್ಳಿ ಎಂಬ ಗ್ರಾಮದಲ್ಲಿರುವ ನೇತಾಜಿ ಸುಭಾಶ್ಚಂದ್ರ ಬೋಸ್ ಸರ್ಕಾರಿ ಪ್ರೌಢಶಾಲೆಯ ಬಗ್ಗೆ ಈ ಒಂದು ಜ್ಞಾನದೇಗುಲವು 1994 ರಲ್ಲಿ ನಮ್ಮ ಒಂದು ಪುಟ್ಟ ಗ್ರಾಮದಲ್ಲಿ ಸ್ಥಾಪನೆಯಾಯಿತು ಅಲ್ಲಿಂದ ಇಲ್ಲಿಯ ತನಕ ತಾಲೂಕಿನಲ್ಲಿ ತನ್ನದೇ ಆದ ವಿದ್ಯಾದಾನವನ್ನು ನೀಡುವುದರಲ್ಲಿ,ಅಲ್ಲಿನ ಶಿಕ್ಷಕ ಸಿಬ್ಬಂದಿಗಳು ಅವಿರತವಾಗಿ ಹಗಲಿರುಳು ಎಂಬುದನ್ನೆ ಮರೆತು ಸುಮಾರು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಿ ಈ ಒಂದು ಸಮಾಜಕ್ಕೆ ಕೊಡುಗೆಯಾಗಿ ನೀಡಿರುವುದು ಮಾತ್ರ ಗ್ರಾಮದ ಜನತೆಗೆ ತುಂಬಾ ಸಂತೋಷದ ಸಂಗತಿ.

ಅಂತಹ ಒಂದು ಶಾಲೆಯ ಮಾರ್ಗವಿರುವುದು ರಾಷ್ಟ್ರಿಯ ಹೆದ್ದಾರಿ 50 ನ್ನು ಸೀಳಿಕೊಂಡು ಹೋಗಿ ಮತ್ತು ಅಲ್ಲಿರುವ ಕೆರೆಯ ಅಂಗಳವನ್ನು ದಾಟಿ ಹೋಗಿ ನಮ್ಮ ಒಂದು ಶಾಲೆಯನ್ನು ತಲುಪುವುದು ಹರಸಾಹಸದ ವಿಷಯವೇ ಸರಿ,ಮತ್ತು ಇಡೀ ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ 50 ಅಂದರೆ ಹಗಲಿರುಳು ಅಪಘಾತ ಸಂಭವಿಸುವ ಮಾರ್ಗವದು ಅಂತಹ ಒಂದು ಮಾರ್ಗದಲ್ಲಿ ಆ ಒಂದು ಗ್ರಾಮದ ಸಾರ್ವಜನಿಕರ ಮಕ್ಕಳು ಸಂಚಾರ ಮಾಡಿ ಮನೆಯನ್ನು ಸೇರುವುದಕ್ಕೆ ಹರಾಸಾಹಸವೇ ಪಡಬೇಕು ಮತ್ತು ಈ ಒಂದು ನಮ್ಮ ವಿದ್ಯಾಲಯ ತೆರೆದು ಸುಮಾರು 27 ವರ್ಷಗಳೇ ಕಳೆದರು ಯಾವೊಬ್ಬ ರಾಜಕೀಯ ವ್ಯಕ್ತಿಯಾಗಲಿ ಮತ್ತು ಸಂಬಂಧ ಪಟ್ಟ ತಾಲೋಕು ಆಡಳಿತ ವ್ಯವಸ್ಥೆಯಾಗಲಿ ಇದನ್ನು ಸರಿಪಡಿಸುವ ಒಂದು ಯೋಚನೆಯು ಸಹ ಮಾಡಿಲ್ಲ ಈ ಒಂದು ಅವಧಿಯಲ್ಲಿ ಸುಮಾರು ಅಪಘಾತಗಳು ಸಂಭವಿಸಿದರು ಇದರ ಬಗ್ಗೆ ಯಾವೊಬ್ಬ ಸಂಬಂಧ ಪಟ್ಟ ತಾಲೋಕು ದಂಡಾಧಿಕಾರಿಗಳಾಗಲಿ ಮತ್ತು ಸಂಬಂಧ ಪಟ್ಟ ಶಾಸಕರು ಸಹ ಇದರ ಬಗ್ಗೆ ಕಾಳಜಿಯನ್ನು ವಹಿಸುವ ಒಂದು ಯೋಚನೆಯನ್ನು ಸಹ ಮಾಡಿಲ್ಲ ಹಾಗೂ ಈ ಮಾರ್ಗದಲ್ಲಿ ಅಂದರೆ ಚಿತ್ರದುರ್ಗ ದಿಂದ ಮಹಾರಾಷ್ಟ್ರಕ್ಕೆ ಅತೀ ಸಮೀಪದ ರಾಷ್ಟ್ರೀಯ ಹೆದ್ದಾರಿ ಎಂದು ಎಲ್ಲಾ ರಾಜ್ಯದ ಚಾಲಕರಿಗೂ ತಿಳಿದ ವಿಷಯವಾದ್ದರಿಂದ ಅನೇಕ ರಾಜ್ಯದ ವಾಹನಗಳು ಈ ಒಂದು ಮಾರ್ಗದಲ್ಲಿ ಸಂಚರಿಸುವುದರಿಂದ ಇಲ್ಲಿ ಅತೀ ಹೆಚ್ಚಾದ ಅಪಘಾತಗಳು ಸಂಭವಿಸುತ್ತವೆ ಆಗಂತ ಈ ಒಂದು ರಸ್ತೆಯನ್ನು ಸ್ಥಗಿತಗೊಳಿಸಿ ಎಂದು ಹೇಳಲು ನಾವು ಬಯಸುವುದಿಲ್ಲ ಈ ಒಂದು ರಸ್ತೆಗೆ ಒಂದಿಕೊಂಡಿರುವ ಗ್ರಾಮಗಳ ಒಂದು ಒಳಿತನ್ನು ನೋಡಿಕೊಂಡು ಮತ್ತು ಅಲ್ಲಿರುವ ಮೂಲಭೂತ ಸೌಕರ್ಯಗಳ ಸವಲತ್ತನ್ನು ಯಾವುದೇ ಹಾನಿಯಾಗದೆ ಅಲ್ಲಿನ ಗ್ರಾಮಗಳು ಪಡೆದುಕೊಳ್ಳುವ ರೀತಿಯಲ್ಲಿ ನಮ್ಮ ರಾಜ್ಯಸರ್ಕಾರ ನಿಗಾ ವಹಿಸಬೇಕು ಎಂಬುದೇ ನಮ್ಮ ಒಂದು ಕೋರಿಕೆ ಹಾಗೂ ಅವಶ್ಯಕತೆ ಇರುವ ಸ್ಥಳದಲ್ಲಿ,ರಸ್ತೆಯನ್ನು ದಾಟಲು ಪಾದಚಾರಿಗಳ ಸುಬಿಕ್ಷಾ ಮಾರ್ಗ ಹಾಗೂ ರೈತರು,ವಯೋವೃದ್ದರು,ಹಾಗೂ ಶಾಲಾ ಮಕ್ಕಳಿಗೆ ಅನುಕೂಲವಾಗುವ ರೀತಿಯಲ್ಲಿ ಇಲ್ಲಿನ ಮಾರ್ಗಗಳನ್ನು ಮಾಡುವುದಕ್ಕೆ,ಸಂಬಂಧ ಪಟ್ಟ ಗುತ್ತಿಗೆ ಪಡೆದ ಕಂಪನಿಗಳಿಗೆ ಸೂಚಿಸಿ ಮತ್ತು ಈ ಒಂದು ರಸ್ತೆಯಲ್ಲಿ ಬರುವ ಪ್ರತಿಯೊಂದು ಹಳ್ಳಿಗಳ ಒಳಿತಿಗಾಗಿ ಕ್ರಮವನ್ನು ಸೂಚಿಸುವಲ್ಲಿ ಮುಂದಾಗಲಿ ಹಾಗೂ ಈ ಒಂದು ರಸ್ತೆಯಾ ನಿರ್ಮಾಣ ಮಾಡುವುದಕ್ಕೆ.
ಶಾಲಾ ವಿದ್ಯಾರ್ಥಿಗಳು ತಮ್ಮ ಜೀವವನ್ನು ಕೈಯಲ್ಲಿಡಿದು ರಸ್ತೆಯನ್ನು ದಾಟುತ್ತಿರುವ ದೃಶ್ಯ…
ಗುತ್ತಿಗೆ ಪಡೆದ ಕಂಪನಿ,ತಾಲೂಕಿನ ಎಂ.ಬಿ. ಅಯ್ಯನಹಳ್ಳಿ ಗ್ರಾಮದಲ್ಲಿ ತನ್ನ ಬಿಡನ್ನು ಬಿಟ್ಟಿದ್ದು ಅಲ್ಲಿನ ಎಲ್ಲಾ ಅಪಘಾತಗಳ ಬಗ್ಗೆ ತಿಳಿದರು ಸಹ ಈ ಒಂದು ಶಾಲೆಗೆ ಹಾಗೂ ಈ ಮಾರ್ಗದ ರೈತರ ದಸ್ತಾನುಗಳನ್ನು ತಮ್ಮ ವ್ಯವಹಾರದ ಸ್ಥಳಗಳಿಗೆ ಹಾಗೂ ತಮ್ಮ ಎಲ್ಲಾ ಅನುಕೂಲಕ್ಕೆ ಅನುವು ಮಾಡಿಕೊಡುವಲ್ಲಿ ಅಲ್ಲಿನ ರಸ್ತೆಯನ್ನು ಗುತ್ತಿಗೆ ಪಡೆದ ಕಂಪನಿಯಾದ L&T ಎಂಬ ಅಡ್ನಾಡಿ ಕಂಪನಿ ಸ್ಥಳೀಯರ ಹಾಗೂ ವಿದ್ಯಾರ್ಥಿಗಳ ಜೀವನದಲ್ಲಿ ಆಟವನ್ನು ಆಡುವುದು ಎಷ್ಟು ಸರಿ ನೀವೇ ಹೇಳಿ, ಈ ಒಂದು ವಿಷಯದ ಬಗ್ಗೆ ಸುಮಾರು ಸಾರಿ ಅಲ್ಲಿನ ಸಿಬ್ಬಂದಿಗಳ ಹಾಗೂ ಸಂಬಂಧ ಪಟ್ಟ ತಾಲೋಕು ಆಡಳಿತಕ್ಕೆ ಸಾರ್ವಜನಿಕರು ಮನವಿಯನ್ನು ಕೊಟ್ಟರು ಕ್ಯಾರೇ ಎನ್ನದ ಈ ಕಂಪನಿಯ ಇಂದೇ ಯಾವ ರಾಜಕೀಯ ವ್ಯಕ್ತಿಯ ಕೈವಾಡವೀರಬಹುದು ಎಂಬುದೇ ಇಲ್ಲಿ ಸಂಶಯವಾಗಿರುವ ನಿಗೂಢ ಪ್ರಶ್ನೆ.

ಮತ್ತು ಈ ಒಂದು ಮಾರ್ಗವಾಗಿ,ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿಯ ಹಾಸ್ಟೆಲ್ ಇದ್ದರೂ ಸಹ ಈ ಒಂದು ಖಾಸಗಿ ಕಂಪನಿ ತಮಗೆ ಬೇಕಾದ ಎಲ್ಲಾ ಕಚ್ಚಾ ವಸ್ತುಗಳನ್ನು ಅಲ್ಲಿಯೇ ಸಿದ್ದಪಡಿಸಿಕೊಂಡು,ಸುಮಾರು ವಿದ್ಯಾರ್ಥಿಗಳ ಬಾಳಿಗೆ ಬೆಂಕಿಯನ್ನು ಇಡುವ ದುಸ್ಸಾಹಾಸವನ್ನು ಸಹ ಮಾಡಿದೆ ಮತ್ತು ಕಲ್ಲು ಕೊರೆಯ ಶಬ್ದದದ ಉಪಟಳಕ್ಕೆ ಅಲ್ಲಿನ ವಸತಿ ನಿಲಯದ ಗೋಡೆಗಳು ಸಹ ಬಿರುಕು ಬಿಟ್ಟಿವೆ ಮತ್ತು ಆ ಒಂದು ದೂಳಿನ ಆರ್ಭಟಕ್ಕೆ ಹಲವಾರು ವಿದ್ಯಾರ್ಥಿಗಳಿಗೆ ಹಲವಾರು ಖಾಯಿಲೆಗಳು ಸಹ ಬಂದಿವೆ ಅನ್ನುವುದರಲ್ಲಿ ಅನುಮಾನವೇ ಇಲ್ಲರೈತರು ನಮ್ಮ ದೇಶದ ಬೆನ್ನೆಲುಬು,ವಿದ್ಯಾರ್ಥಿಗಳು ನಮ್ಮ ದೇಶದ ಸಂಪತ್ತು ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ ಇಷ್ಟೆಲ್ಲಾ ಗೊತ್ತಿದ್ದರೂ ಸಹ L&T ಎಂಬ ಖಾಸಗಿ ಕಂಪನಿಯ ಕಳಪೆ ಕಾಮಗಾರಿ ಹಾಗೂ ರಸ್ತೆಗಳಿಗೆ ಹೊಂದಿಕೊಂಡಿರುವ ಹಳ್ಳಿಗಳ ಒಳಿತನ್ನು ಲೆಕ್ಕಿಸದೆ ಬೇಕಾಬಿಟ್ಟಿ ರಸ್ತೆಯನ್ನು ನಿರ್ಮಿಸಿ,ಸಾರ್ವಜನಿಕರಿಗೆ ಹಾಗೂ ಶಾಲಾ ಮಕ್ಕಳಿಗೆ ಮುಳುವಾದ ಯಮಕಿಂಕರನ ರೀತಿಯಲ್ಲಿ ರಸ್ತೆ ನಿರ್ಮಾಣಮಾಡಿರುವ ಮತ್ತು ಸಾರ್ವಜನಿಕರ ಹಿತವನ್ನು ಯೋಚಿಸದೆ ರಸ್ತೆನಿರ್ಮಾಣಕ್ಕೆ ಮುಂದಾದ ಖಾಸಗಿ ಕಂಪನಿ ಉಪಟಳಕ್ಕೆ ಬೇಸತ್ತ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಹಿತವನ್ನು ಕಾಯುವಲ್ಲಿ ಮತ್ತು ಈ ಒಂದು ರಸ್ತೆಯನ್ನು ಡಾಟಲು ಅಲ್ಲಿನ ಗ್ರಾಮದ ವಯೋವೃದ್ಧರಿಗೆ ಮತ್ತು ವಿದ್ಯಾರ್ಥಿಗಳಿಗೆ ರೈತರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ರಸ್ತೆಯನ್ನು ಕಲ್ಪಿಸಿಕೊಡುವುದನ್ನು ಬಿಟ್ಟು ಮೀನಾಮೇಶವನ್ನು ಎಣಿಸುವುದಕ್ಕೆ ಮುಂದಾದರೆ,ಮುಂಬರುವ ಪರಿಣಾಮವನ್ನು ಎದುರಿಸಲು ರಾಜ್ಯ ಸರ್ಕಾರ ಬದ್ದವಾಗಿರಬೇಕು ಇಲ್ಲವಾದರೆ ಈ ಒಂದು ಖಾಸಗಿ L&T ಕಂಪನಿಯ ಕಳಪೆಯ ಕಾಮಗಾರಿಯನ್ನು ಪರೀಕ್ಷೆಮಾಡಿ ಈ ಒಂದು ರಸ್ತೆಗೆ ಹೊಂದಿಕೊಂಡಿರುವ ಗ್ರಾಮಗಳ ಒಳಿತಿಗಾಗಿ ಶ್ರಮವನ್ನು ವಹಿಸಬೇಕು ಎನ್ನುವುದೇ ನಮ್ಮ ಪತ್ರಿಕೆ ಹಾಗೂ ಜೈಕರುನಾಡು ಕನ್ನಡ ರಕ್ಷಣೆ ಸೇನೆಯ ಉದ್ದೇಶ ಇಲ್ಲವಾದಲ್ಲಿ ಈ ವಿಷಯದ ಬಗ್ಗೆ ಮಾನ್ಯ ತಾಲೋಕು ದಂಡಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು, ಮುಖ್ಯಮಂತ್ರಿಗಳಿಗೆ ಹಾಗೂ ಸಂಬಂಧ ಪಟ್ಟ ಶಾಸಕರುಗಳ ಗಮನಕ್ಕೆ ತರುದಕ್ಕೆ ಇದು ಎಚ್ಚರಿಕೆ ಪತ್ರಿಕೆಯ ಎಚ್ಚರಿಕೆಯ ಸಂದೇಶ…
ಈ ಅವ್ಯವಸ್ಥೆಯನ್ನು ಸರಿಪಡಿಸದೆ ಹೋದಲ್ಲಿ ಮಾನ್ಯ ಸಂಸದರು ಹಾಗೂ ವಿಧಾನಪರಿಷತ್ ವಿರೋಧಪಕ್ಷದ ನಾಯಕರ ಕೈಯಲ್ಲಿ ಈ ವಿಷಯ ಪ್ರಸ್ತಾವನೆ…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
