ಚಿತ್ರದುರ್ಗ ಉಪನಿರ್ದೇಶಕ ರವಿಶಂಕರ್ ರೆಡ್ಡಿ ಮೊಳಕಾಲ್ಮೂರು ಪಟ್ಟಣಕ್ಕೆ ಆಗಮಿಸಿದ್ದರು..!!

ವರದಿ.ಮಂಜುನಾಥ್, ಎಚ್

ಚಿತ್ರದುರ್ಗ: ಮೊಳಕಾಲ್ಮುರು/ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಎಸ್ ಎಸ್ ಎಲ್‌ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಉತ್ತಮ ಫಲಿತಾಂಶವನ್ನು ತರಬೇಕೆಂದು ಡಿಡಿಪಿಐ ಕೆ.ರವಿಶಂಕರರೆಡ್ಡಿ ಹೇಳಿದರು. ಪಟ್ಟಣದ ಆದರ್ಶ ವಿದ್ಯಾಲಯದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಗುರುವಾರ ನಡೆದ ಪ್ರೌಢಶಾಲಾ ಮುಖ್ಯಶಿಕ್ಷಕರ ಪ್ರಗತಿ ಪರಿಶೀಲನಾ ಸಭೆ ಉದ್ಘಾಟಿಸಿ ಮಾತ ನಾಡಿದರು. ಕೊರೋನಾ ವೈರಸ್ ಭೀತಿ ಶಿಕ್ಷಣ ಕ್ಷೇತ್ರದ ಮೇಲೆ ಭಾರಿ ಪರಿಣಾಮ ಬೀರಿದೆ. ಈಗಾಗಲೇ 10ನೇ ತರಗತಿ ಆರಂಭಿಸಲಾಗಿದ್ದು, ಕೊರೋನಾ ಮಾರ್ಗಸೂಚಿ ಪಾಲಿಸಿ ಸರ್ಕಾರದ ನಿಯಮಗಳಂತೆ ಪೋಷಕರ ಮನವೊಲಿಸಿ ಪ್ರತಿ ಮಕ್ಕಳನ್ನು ಶಾಲೆಗೆ ಕರೆತರ ಬೇಕು. ಪರೀಕ್ಷೆ ಸಮಯದೊಳಗೆ ವಿಷಯವಾರು ಪಠ್ಯಗಳನ್ನು ಪುನರಾವರ್ತನೆ ಗೊಳಿಸಿ ಪರೀಕ್ಷೆಗೆ ಸಿದ್ಧತೆ ನಡೆಸಬೇಕೆಂದು ಹೇಳಿದರು. ಹತ್ತನೇ ತರಗತಿಯಲ್ಲಿ ಶೇ.30ರಷ್ಟು ವಿಷಯ ವಾರು ಕಡಿತಗೊಳಿಸಲಾಗಿದೆ. ಶಿಕ್ಷಕರು ಪರೀಕ್ಷೆ ಸಮಯಕ್ಕೂ ಮುನ್ನಾ ಎಲ್ಲಾ ಪಠ್ಯಗಳನ್ನು ಪೂರ್ಣಗೊಳಿಸಿ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಬೇಕು. ಕಳೆದ ಬಾರಿ ಹತ್ತನೇ ತರಗತಿ ಫಲಿತಾಂಶದಲ್ಲಿ ತಾಲೂಕಿಗೆ ಉತ್ತಮ ಫಲಿತಾಂಶ ಬಂದಿತ್ತು. ಈ ಬಾರಿಯೂ ತಾಲೂಕಿಗೆ ಉತ್ತಮ ಫಲಿತಾಂಶ ತರಬೇಕು. ಶಾಲೆಗೆ ಬರದಿರುವ ಮಕ್ಕಳ ಮನೆಗಳಿಗೆ ತೆರಳಿ ಪೋಷಕರ ಮನವೋಲಿಸಿ ವಿದ್ಯಾರ್ಥಿಯನ್ನು ಶಾಲೆಗೆ ಕರೆತಂದು ಗುಣ ಮಟ್ಟದ ಶಿಕ್ಷಣ ನೀಡಿ ತಾಲೂಕಿನಲ್ಲಿ ಉತ್ತಮ ಫಲಿತಾಂಶ ತರುವಂತೆ ತಿಳಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ದೇವರಾಜ ನಾಯ್ಕ, ವಿದ್ಯಾಧಿಕಾರಿಗಳಾದ ವಿಜಯಕುಮಾರ್, ಡಿ.ನರಸಿಂಗಪ್ಪ, ಡಿವೈಪಿಸಿ ನಾಗಭೂಷಣ, ಸೈಯದ್ ಮೋಸೀನ್, ಬಿಆರ್‌ಸಿ ಹನುಮಂತಪ್ಪ, ಇಸಿಒ ಓಂಕಾರಪ್ಪ, ಬಿಆರ್‌ಪಿ ಶಿವಣ್ಣ ಮತ್ತಿತರರಿದ್ದರು.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend