ವರದಿ.ಮುಕ್ಕಣ್ಣ ಹುಲಿಗುಡ್ಡ

ರಾಜ್ಯದಲ್ಲಿ ಹಳ್ಳಿಗಳು ಸುಬಿಕ್ಷಾವಾಗಿರಬೇಕೆಂದರೆ ಸಂಬಂಧ ಪಟ್ಟ, ಗ್ರಾಮಪಂಚಾಯಿತಿಯ ಪಾತ್ರ ಬಹುಮುಖ್ಯ ಅಲ್ವಾ ಇಲ್ಲವಾದಲ್ಲಿ ” ಬೇಲಿಯೇ ಎದ್ದು ಹೊಲವನ್ನು ಮೇದ “ಹಾಗೆ ಎನ್ನುವ ರೀತಿಯಲ್ಲಿ
ಆಗಿಬಿಡುತ್ತದೆ.
ಇದೆ ರೀತಿಯಲ್ಲಿ ನಡೆದಿರುವ ಒಂದು ಗ್ರಾಮಪಂಚಾಯಿತಿಯ ವಿಷಯವನ್ನು ಈ ಸಂದರ್ಭದಲ್ಲಿ ರಾಜ್ಯದ ಜನತೆಯ ಮುಂದಿಡಲು ಬಯಸುತ್ತಿದೆ ನಮ್ಮ ಒಂದು ಪತ್ರಿಕಾ ತಂಡ ಅಂದರೆ ಈಗ ನಾವು ಹೇಳಹೊರಟಿರುವ ಗ್ರಾಮಪಂಚಾಯಿತಿ ಇರುವುದು, ಕುಂದಾನಗರಿ ಎಂದೇ ಪ್ರಖ್ಯಾತಿ ಪಡೆದ ನಮ್ಮ ರಾಜ್ಯದ ಗಂಡುಮೆಟ್ಟಿದ
ನಾಡುಗಳಲ್ಲೊಂದದ ಬೆಳಗಾವಿ ಜಿಲ್ಲೆಯ, ರಾಯಭಾಗ ತಾಲೂಕಿನ “ನಿಡಗುಂದಿ”ಎನ್ನುವ ಗ್ರಾಮಪಂಚಾಯಿತಿಯ ಉದ್ಯೋಗ ಖಾತ್ರಿ ಯೋಜನೆಯ ಸಂಪೂರ್ಣ ಹಗರಣವನ್ನು ಎಳೆ ಎಳೆಯಾಗಿನಿಮ್ಮಗಳ ಮುಂದಿಡುವ ದುಸ್ಸಾಹಸ ನಮ್ಮದು ಅದಕ್ಕೆ ಸಂಪೂರ್ಣ ಸಹಕಾರ ರಾಜ್ಯದ ಜನತೆಯದ್ದು ಅಗೆಯೇ ಇನ್ನೂ ಇಂತಹ ಸುದ್ದಿಗಳನ್ನು ಪ್ರತಿನಿತ್ಯ ಹುಡುಕುವ ಪ್ರಯತ್ನದಲ್ಲಿ ನಾವು ಎಂದಿಗೂ ಹಿಂದೆ ಬಿಳೇವು ಅಂದರೆ ನಮ್ಮ ರಾಜ್ಯ ಸರ್ಕಾರ ಪ್ರತಿಯೊಂದು ಹಳ್ಳಿಯ ಜನಗಳು ಕೆಲಸವನ್ನು ಹರೆಸಿಕೊಂಡು ನಗರಗಳತ್ತ ಗುಳೆ ಹೋಗುವುದನ್ನು ತಪ್ಪಿಸಲು ಪ್ರತಿಯೊಂದು ಮನೆಗಳಿಗೆ, ಹೆಣ್ಣು ಗಂಡು ಎಂಬ ಭೇದ ಭಾವವನ್ನು ಮರೆತು ಎಲ್ಲರಿಗೂ ಸಮಾನವಾದ ಕೆಲಸವನ್ನು ಒದಗಿಸುವ ಒಂದು ಪಣವನ್ನು ತೊತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ ಸರಿ ಆದರೆ ಇಷ್ಟೆಲ್ಲಾ ಯೋಜನೆಯ ಒಂದು ದಿಕ್ಕನ್ನು ತಪ್ಪಿಸಿ ಕೆಲವು ಗ್ರಾಮಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು ಈ ನರೇಗಾ ಯೋಜನೆಯ ಹಣವನ್ನು ಮನಸ್ಸಿಗೆ ಬಂದವರ ಬ್ಯಾಂಕ್ ಖಾತೆಗೆ ಸಂದಾಯ ಮಾಡುವುದು ಎಷ್ಟು ಸರಿ.

ಮತ್ತುಗ್ರಾಮಪಂಚಾಯಿತಿಯ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಕಾರ್ಯವನ್ನು ಮಾಡದೇ ಎಲ್ಲೋ ಇದ್ದು ಬೇರೊಂದು, ಲಿಮಿಟೆಡ್ ಕಂಪನಿಯಲ್ಲಿ ಕೆಲಸವನ್ನು ಮಾಡುವವರ ಹೆಸರಿಗೆ ಹಣವನ್ನು ಸಂದಾಯ ಮಾಡವುದು ಎಷ್ಟು ಸರಿ ಇದು, ದೊಡ್ಡ ಅಪರಾಧವೇ ಸರಿ ಮತ್ತು ಈ ತರನಾಗಿ ಸುಮಾರು ಅಕೌಂಟ್ಗಳಿಗೆ ಸುಮಾರು ಸಾವಿರಗಟ್ಟಲೆ ಅಮೌಂಟ್ ನ್ನು ಹಾಕಿ ಸರ್ಕಾರದ ಹಣವನ್ನು ದುರುಪಯೋಗ ಮಾಡಿದ್ದರು ಸಹ ಅಲ್ಲಿರುವ ಈಗಿನ ಅಭಿವೃದ್ಧಿ ಅಧಿಕಾರಿಗಳು ಮಾತ್ರ ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎನ್ನುವ ಒಂದು ದೊಡ್ಡ ಉಡಾಪೆಯ ಉತ್ತರವನ್ನು ಕೊಡುತ್ತಿರುವುದು ಮಾತ್ರ ದೊಡ್ಡ ದುರಂತ ಮತ್ತು ನಾನಿನ್ನು ಇಲ್ಲಿಗೆ ಬಂದು ಬರೀ 5 ರಿಂದ 6 ತಿಂಗಳುಗಳು ಮಾತ್ರ ಆಗಿದೆ ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎನ್ನುವುದಾದರೆ 2021ರ ವರ್ಷದಲ್ಲಿ ಇದೆ ಹಗರಣ ನಡೆದಿದೆ ಅಗಾದರೆ ಇದೆಷ್ಟು ವರ್ಷದ ಇಂದೇ ನಡೆದಿರಬಹುದು ಹೇಳಿ, ಆಗ ಯಾರಿರಬಹುದು ಅಭಿವೃದ್ಧಿ ಅಧಿಕಾರಿಗಳು ನೀವೇ ಹೇಳಿ ಮತ್ತು ಈ ಒಂದು ನಿಡಗುಂದಿ ಗ್ರಾಮಪಂಚಾಯಿತಿಯಲ್ಲಿ ಎಲ್ಲಾ ತರನಾದ ಹಗರಣಗಳು ಹೆಗ್ಗಿಲ್ಲದೇ ನಡೆಯುತ್ತವೆ ಎನ್ನುತ್ತಾರೆ ಈ ಪಂಚಾಯತಿಗೆ ಸಂಬಂಧ ಪಟ್ಟ ಗ್ರಾಮಗಳ ಸಾರ್ವಜನಿಕರು.

ಅಂದರೆ ಕೆಲಸವನ್ನು ಮಾಡದೇ ಇರುವ ಹಲವು ವ್ಯಕ್ತಿಗಳ ಹೆಸರಿಗೆ ಹಣವನ್ನು ವರ್ಗಾವಣೆ ಮಾಡುವುದು ಮತ್ತು ಎಲ್ಲೋ ಬೇರೊಂದು ಸ್ಥಳದಲ್ಲಿರುವ ಮತ್ತು ಬೇರೊಂದು ಕೆಲಸವನ್ನು ಮಾಡುವವರ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸುವುದು ಮತ್ತು ಮೂಲಭೂತ ಸೌಕರ್ಯ ಗಳ ಕೊರತೆಯನ್ನು ಸರಿಯಾದ ರೀತಿಯಲ್ಲಿ ನಿಭಾಯಿಸದೆ ಇರುವುದು ಸಹ ಈ ಒಂದು ಗ್ರಾಮಪಂಚಾಯಿತಿಯ ಅವ್ಯವಸ್ಥೆ ಎನ್ನುತ್ತಾರೆ ಅಲ್ಲಿರುವ ಸಾರ್ವಜನಿಕರು ನಮ್ಮ ಮುಂದೆ ತಮ್ಮಗಳ ಅಳಲನ್ನು ತೋಡಿಕೊಂಡಿದ್ದಾರೆ ಇಷ್ಟೆಲ್ಲಾ ಅವ್ಯವಹಾರದ ಆಗರಗಳ ತಾಣವಾಗಿರುವ ಇಂತಹ ಗ್ರಾಮಪಂಚಾಯಿತಿಯ ಅಭಿವೃದ್ಧಿಯ ಅಧಿಕಾರಿಯ ಅವಶ್ಯಕತೆ ಇದೆಯಾ ನಮ್ಮ ಗ್ರಾಮಗಳಿಗೆ ಎನ್ನುತ್ತಾರೆ ಅಲ್ಲಿನ ನೋವುಂಡ ಗ್ರಾಮಸ್ಥರು ಇದಕ್ಕೆಲ್ಲ ಸಂಬಂಧ ಪಟ್ಟ ಮೇಲಾಧಿಕಾರಿಗಳ ನಿರ್ಲಕ್ಷವೀರಬಹುದು ಎನ್ನುತ್ತ ಅಲ್ಲಿ ಇಲ್ಲಿ ಕೆಲ ರಸ್ತೆಯಲ್ಲಿ ಮಾತನಾಡುತ್ತಿದ್ದಾರೆ ಅಲ್ಲಿನ ಕೆಲ ಸಾರ್ವಜನಿಕರು ಇನ್ನಾದರೂ ಇಂತಹ ಅಧಿಕಾರಿಗಳ ವಿರುದ್ಧ ಸಂಬಂಧ ಪಟ್ಟ ಅಧಿಕಾರಿಗಳು ಕ್ರಮವನ್ನು ತೆಗೆದುಕೊಳ್ಳುತ್ತಾರೋ ಇಲ್ಲವೋ ಕಾಯ್ದು ನೋಡೋಣ ಎಂಬುದೇ ನಮ್ಮ ಒಂದು ಆಶಯ…ಮತ್ತು ಹೆಚ್ಚಿನ ಮಾಹಿತಿಯನ್ನು ಮುಂದಿನ ಸಂಚಿಕೆಯಲ್ಲಿ ಬಿತ್ತರಿಸಲಾಗುವುದು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
