ವರದಿ. ಧನಂಜಯ್ ಹಡಗಲಿ


ರಾಜ್ಯದ ಹಲವು ಹಳ್ಳಿಗಳು ಅಭಿವೃದ್ಧಿ ಕಾಣದೆ, ಹಾಗೂ ಸರ್ಕಾರದ ಹಲವು ಯೋಜನೆಗಳು ಸಾರ್ವಜನಿಕರಿಗೆ ತಲುಪದೆ ಈಗಲೂ ಸಹ, ಮೂಲಭೂತ ಸೌಕರ್ಯಗಳನ್ನು ಕಾಣದೆ ಹಾಗೂ ದೌರ್ಜನ್ಯದಿಂದ ವರ್ತಿಸುವಂತ ಹಲವು ಜನನಾಯಕರ ಕೈಯಲ್ಲಿ ಸಿಲುಕಿ ಇತ್ತ ಯಾರ ಎದುರು ಹೇಳಲಾಗದೇ ಅಂತವರನ್ನು ಎದುರಿಸಿ ನಿಲ್ಲಲಾರದೆ ಅದೇ ಕಷ್ಟದಲ್ಲಿ ಕಾಲವನ್ನು ಕಳೆಯುತ್ತಿರುವ ಹಲವು ಹಳ್ಳಿಯ ಕೆಟ್ಟ ಸ್ಥಿತಿ ಇನ್ನೂ ಸಹ ನಮ್ಮ ರಾಜ್ಯದಲ್ಲಿ ಜೀವನಂತವಾಗಿರುವುದು ನೂವುಂಡ ಕುಟುಂಬಗಳಿಗೆ ಮಾತ್ರ ಗೊತ್ತು.
ರಾಜ್ಯದಲ್ಲಿ ಹಲವು ಗ್ರಾಮಗಳ ಮಟ್ಟದಲ್ಲಿ ಇನ್ನೂ ಸಹ ಸರ್ವರಿಗೂ ಸ್ವಾತಂತ್ರ ಸಿಕ್ಕಿಲ್ಲ ಯಾಕೆಂದರೆ ದುಷ್ಟಆಡಳಿತದ ಅವಧಿಯ ಕೈಗೆ ಸಿಕ್ಕು ನಲುಗುತ್ತಿದೆ ಎಂದರು ತಪ್ಪಾಗಲಾರದು ಇದಲ್ಲೆವನ್ನು ನೋಡಿದರೆ ನಮ್ಮ ಸಾರ್ವಜನಿಕರ ಹಕ್ಕು ಕೇಳುವುದೇ ತಪ್ಪಾ? ಎನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡುವ ಸಮಯದಲ್ಲಿ ಈಗೊಂದು ಗ್ರಾಮಪಂಚಾಯಿತಿಯ ವಿಷಯ ನಿಮ್ಮಗಳ ಮುಂದಿ ಡಲು ಬಯಸುತ್ತೇನೆ ಈ ಒಂದು ಗ್ರಾಮಪಂಚಾಯಿತಿ ಬರುವುದು ಬಳ್ಳಾರಿ ಜಿಲ್ಲೆಯ, ಹೂವಿನಹಡಗಲಿ ತಾಲೂಕಿನ ಮಹಾಜನದಹಳ್ಳಿ ಎನ್ನುವ ಗ್ರಾಮಪಂಚಾಯಿತಿಯ ಬಗ್ಗೆ ಇಲ್ಲಿನ ಹಲವು ಗ್ರಾಮಗಳು ಸರ್ಕಾರದ ಒಂದು” ನರೇಗಾ “ಯೋಜನೆಯಂತ ಯೋಜನೆಯನ್ನು ಸಂಪೂರ್ಣವಾಗಿ ಉಪಯೋಗಿಸಿ ಕೊಂಡಿರಬಹುದು ಎನ್ನಿಸುತ್ತಿದೆ ಇಲ್ಲಾಗಿರುವ ಕೆಲಸಗಳ ಕಾರ್ಯವೈಖರಿಯನ್ನು ನೋಡಿದರೆ, ಅಂದರೆ ಇಲ್ಲಿನ ಅಭಿವೃದ್ಧಿ ಅಧಿಕಾರಿಗಳು ತಮ್ಮ ಒಂದು ಕೆಲಸವನ್ನು ಸಾರ್ವಜನಿಕರಿಗೆ ಅರ್ಥವಾಗುವ ರೀತಿಯಲ್ಲಿ ತಲುಪಿಸುವ ಒಂದು ಕಾರ್ಯದಲ್ಲಿ ಜಯಶೀಲಾರಾಗಿದ್ದಾರೆ ಎಂದರು ತಪ್ಪಾಗಲಾರದು, ಆಗಂತ ಬೇರೆಯವರು ಮೂಗು ಮುರಿಯುವುದು ಬೇಡ ರಾಜ್ಯದಲ್ಲಿ ಎಷ್ಟೋ ಗ್ರಾಮಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು ಜಾಬ್ ಕಾರ್ಡ್, ಗಳನ್ನು ದುರುಪಯೋಗ ಮಾಡಿಕೊಂಡು ಎಲ್ಲೋ ಇರುವ ಕೆಲಸವನ್ನು ಮಾಡದೇ ಇರುವ ಕುಟುಂಬದ ಜಾಬ್ ಕಾರ್ಡ್ ಗೆ ಅಮೌಂಟ್ನ್ನು ಹಾಕಿ ತಮಗಿಷ್ಟು ನಿಮಗಿಷ್ಟು ಎನ್ನುವಂತೆ ಕಾರ್ಯವನ್ನು ಮಾಡುತ್ತಿರುವ ಉದಾಹರಣೆಗಳು ಸಾಕಷ್ಟು ಉಂಟು ಅದಕ್ಕೋಸ್ಕರ ಈ ವಿಷಯವನ್ನು ಹೇಳಬಯಸಿದ್ದು ಈ ಒಂದು ಸುದ್ದಿ ಬೇರೆಯವರಿಗೆ ನೋವೆನಿಸಬಾರದು ಹಾಗೂ ಇಂತಹ ಕೆಲವು ಅಧಿಕಾರಿಗಳ ಬಗ್ಗೆ ಸುದ್ದಿಯನ್ನು ಬಿತ್ತರಿಸಿದರೆ ಅಸೂಹೆ ಪಡಬಾರದು ಎನ್ನುವ ಉದ್ದೇಶದಿಂದಲೆ ಹೊರೆತು ಮತ್ಯಾಕೋ ಅಲ್ಲ ಬಿಡಿ.
ಪರವಾಗಿಲ್ಲ ಇದ್ದದ್ದು ಇದ್ದಂಗೆ ಹೇಳಲು ಯಾರ ಹಂಗೇನು, ಈಗ ನಾವು ಹೇಳುತ್ತಿರುವ ಗ್ರಾಮಪಂಚಾಯಿತಿಯಲ್ಲಿ ಜನ ಅಭಿವೃದ್ಧಿಗಳ ಕಾರ್ಯಗಳೇ ಆಗಿರಬಹುದು ಅನಿಸುತ್ತೆ ಅಲ್ಲಿನ ಕೆಲವು ಕಾರ್ಯಗಳನ್ನು ನೋಡಿದರೆ ಮತ್ತು ಅಲ್ಲಿನ ಸಾರ್ವಜನಿಕರ ಮಾತನ್ನು ಕೇಳಿದರೆ.

MGnarega ಯೋಜನೆಯಂತ, ಯೋಜನೆಯ ಸದುಪಯೋಗವನ್ನು ಎಲ್ಲಾ ರಾಜ್ಯದ ಸಾರ್ವಜನಿಕರು ಪಡೆದುಕೊಂಡು ತಮ್ಮ ತಮ್ಮ ಗ್ರಾಮಗಳನ್ನು ಅಭಿವೃದ್ಧಿಯತ್ತ ಕೊಂಡ್ಯಯಲಿ ಎನ್ನುವ ಉದ್ದೇಶದಿಂದ ಪ್ರತಿಯೊಂದು ಮನೆಯಲ್ಲಿ, ಪುರುಷರಿಗೂ ಮತ್ತು ಮಹಿಳೆಯರಿಗೂ ಉದ್ಯೋಗವನ್ನು ಕೊಡುವನಿಟ್ಟಿನಲ್ಲಿ ಈ ಯೋಜನೆಯನ್ನು ತಂದಿರುವುದು ಇಂತಹ ಒಂದು ಯೋಜನೆಯ ಪೂರ್ಣವಾದ ಕಾರ್ಯವನ್ನು ಈ ಒಂದು ಮಹಾಜನದಹಳ್ಳಿ ಗ್ರಾಮಪಂಚಾಯಿತಿ ವ್ಯಪ್ತಿಯಲ್ಲಿ ಬರುವ ತಳಕಲ್ಲು ಗ್ರಾಮದ ಗ್ರಾಮ ದೇವತೆಯಾದ ಕರಿಯಮ್ಮ ದೇವಿಯ, ಸಾರ್ವಜನಿಕರ ಕಲ್ಯಾಣಿಯನ್ನು ಪುನಶ್ಚತನವನ್ನು ಮಾಡಿ ಮತ್ತದೇ ಕಲ್ಯಾಣಿಯಲ್ಲಿ ನೀರನ್ನು ಕಾಣುವಂತಹ ಹಲವು ಕಾರ್ಯಗಳು ಮತ್ತು ಚೆಕ್ ಡ್ಯಾಮ್, ಬದು ನಿರ್ಮಾಣ, ಉಳೆತ್ತುವಂತ ಕಾರ್ಯಗಳು, ಹಾಗೂ ಸಿಸಿ ರಸ್ತೆಯ ಕಾಮಗಾರಿಗಳಂತ ಹತ್ತು ಹಲವು ಕೆಲಸಗಳ ಸದುಪಯೋಗವನ್ನು ಪಡೆದಂತ ನಾವೇ ದನ್ಯರು ಅನ್ನುತ್ತಾರೆ ಹಲ್ಲಿನ ಹಲವಾರು ಗ್ರಾಮಸ್ಥರು, ಅಂದರೆ ರಾಜ್ಯದಲ್ಲಿ ಈ ತರನಾದ ಕೆಲಸ ಮಾದರಿಯಾಗಲಿ ಎನ್ನುವುದೊಂದೇ ನಮ್ಮ ಉದ್ದೇಶ.ಮುಂದಿನ ಸಂಚಿಕೆಯಲ್ಲಿ ಇಂತಹದ್ದೇ ಸುದ್ದಿಯನ್ನು ಹೊತ್ತು ನಿಮ್ಮಗಳ ಮುಂದೆ…ಎಚ್ಚರಿಕೆ ಕನ್ನಡ ನ್ಯೂಸ್ ಸದಾ ಸಮಾಜದ ಏಳಿಗೆಗೆ ನಮ್ಮ ಪಣ…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
