ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

*ತೊಗರಿಕಟ್ಟೆ ಗ್ರಾಮ: ಬೆಂಕಿಗೆ ಹೊಲದಲ್ಲಿನ ಬಣವಿಗಳು ಭಸ್ಮ*<>ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲೂಕಿನ ತೊಗರಿಕಟ್ಟೆ ಗ್ರಾಮದಲ್ಲಿ,ಹೊಲದಲ್ಲಿದ್ದ ಬಣವಿಗಳು ಆಕಸ್ಮಿಕ ಬೆಂಕಿಗೆ ಭಸ್ಮವಾಗಿರುವ ಘಟನೆ ಜರುಗಿದೆ.ಗ್ರಾಮದ ಹೊರವಲಯದಲ್ಲಿರುವ ಅರಣ್ಯದ ಒಣಹುಲ್ಲಿಗೆ ಬೆಂಕಿ ತಗುಲಿದ್ದು,ಅದು ಗಾಳಿಗೆ ಹಾರಿಬಂದು ಬಾರ್ಕಿ ನಾಗರಾಜಪ್ಪ ಎಂಬುವರಿಗೆ ಸೇರಿದ ಹೊಲದಲ್ಲಿದ್ದ ಬಣಗೆ ಬೆಂಕಿ ತಗುಲಿದೆ.ಗಾಳಿ ಹೆಚ್ಚಿದ್ದ ಪರಿಣಾಮ ಹೊಂದಿಕೊಂಡಿದ್ದ,ಬಾರ್ಕಿ ಯುವರಾಜ ಹೊಲದಲ್ಲಿನ ಮೆಕ್ಕೇಜೋಳದ ಬಣವಿಗಳು ಸಂಪೂರ್ಣ ಭಸ್ಮವಾಗಿದ್ದು, ಹತ್ತಿರದಲ್ಲೇ ಇದ್ದ ಈಡಿಗರ ಶಂಕ್ರಪ್ಪಗೆ ಸೇರಿದ ಊಟದ ಜೋಳದ ತೆನೆರಾಶಿ, ಗಾಯಿತ್ರಮ್ಮಳಿಗೆ ಸೇರಿದ ರಾಗಿ, ಹೊಂದಿಕೊಂಡಿದ್ದ ಕೆಲವರ ತೊಗರಿ ಬೆಳೆ ಹೊಂದಿದ್ದ ರಾಶಿಗೆ ಬೆಂಕಿ ಹತ್ತಿದೆ.ಬೆಂಕಿಯನ್ನ ನಂದಿಸಲು ರೈತರು ಹರಸಾಹಸ ಪಟ್ಟಿದ್ದಾರೆ,ಅಷ್ಟರಲ್ಲಿ ಬಣವಿಗಳು ಕಾಳಿದ್ದ ರಾಶಿಗಳು ಸಟ್ಟಿ ಕರಕಲಾಗಿದ್ದು ಅಪಾರ ನಷ್ಟವಾಗಿದೆ.ತದನಂತರ ಹರಪನಹಳ್ಳಿಯ ಅಗ್ನಿಶಾಮಕ ದಳ ಆಗಮಿಸಿ ನಂದಿಸಿದ್ದು,ಸಂಭವಿಸಬಹುದಾಗಿದ್ದ ಹೆಚ್ಚಿನ ಅನಾಹುತ ತಡೆದಿದ್ದಾರೆ…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
