ಎಚ್ಚರಿಕೆ ವರದಿಗಾರ ವಿರೇಶ್. ಎಸ್


ಡಾ.ದ.ರಾ.ಬೇಂದ್ರೆಯರ ಕಾವ್ಯಾನುಭವ ಮತ್ತು ಗೀತಗಾಯನ ಕಾರ್ಯಕ್ರಮ
ಡಾ.ದ.ರಾ.ಬೇಂದ್ರೆಯವರ ಕಾವ್ಯ ಲೋಕ ಬಹು ವಿಶಿಷ್ಠವಾದುದು ದೇಶಿ ಮತ್ತು ಮಾರ್ಗಗಳ ಸಂಗಮಮೇ ಬೇಂದ್ರೆಯವರ ವೈಶಿಷ್ಟ್ಯ ಸರಳವಾಗಿ ಜನ ಸಾಮಾನ್ಯರಿಗೆ ಅರ್ಥವಾಗುತ್ತದೆ. ದೇಶಿ ಕಾವ್ಯ :ಶಿಷ್ಠ ಶೈಲಿಯ ಗ್ರಾಂಥಿಕ ಶೈಲಿಯ ವಿಶೇಷತೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತಿ ಕನ್ನಡ ಪ್ರಾಧ್ಯಾಪಕ ಡಾ.ಶಾಂತಿನಾಥ ದಿಬ್ವದ ನುಡಿದರು.
ಕೂಡ್ಲಿಗಿ ತಾಲೂಕು ಕಾನಾಹೊಸಹಳ್ಳಿಡಾ.ದ.ರಾಬೇಂದ್ರೆ ರಾಷ್ಟ್ರೀಯ ಸ್ಮಾರಕ ಪ್ರತಿಷ್ಠಾನ ಟ್ರಸ್ಟ್ ಧಾರವಾಡ ಹಾಗೂ ಶಾಂತಿನಿಕೇತನ ಎಜುಕೇಶನ್ ಟ್ರಸ್ಟ್ ಕಾನಹೊಸಹಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ ಬೇಂದ್ರೆ ಕಾವ್ಯನುಭವ ಹಾಗೂ ಬೇಂದ್ರೆ ಗೀತಗಾಯನ ಕಾರ್ಯಕ್ರಮ ಮುಖ್ಯ ಉಪನ್ಯಾಸಕರಾಗಿ ಮಾತನಾಡಿದರು.. ಮತ್ತೊಬ್ಬ ಉಪನ್ಯಾಸಕರಾಗಿ ಕರ್ನಾಟಕ ವಿ.ವಿ.ನಿವೃತ್ತಿ ಕನ್ನಡ ಪ್ರಾಧ್ಯಾಪಕರಾದ ಡಾ.ದುರ್ಗದಾಸ್ ಮಾತನಾಡಿ. ಬೇಂದ್ರೆಯವರ ಕಾವ್ಯಗಳಲ್ಲಿ ದೇಶಿ ಶೈಲಿ ಪ್ರಧಾನ ವೆನಿಸಿದರು. ತಲಸ್ವರ್ಶಿಯಾದ ಜೀವನಾನುಭವ .ಸಾಮಾಜಿಕ ಚಿಂತನೆ .ಗೇಯತೆ ಹಾಗೂ ವೇದ ಉಪನಿಷತ್ತು ಆಧ್ಯಾತ್ಮ ಎಲ್ಲಾ ಗೂಢಾರ್ಥಗಳು ಸಮ್ನಿಳಿತವಾಗಿರುತ್ತಿತ್ತು ಬೇಂದ್ರೆಯವರ ನವೋದಯ ಕಾಲದ ಸರ್ವಜ್ಞ ಎಂದು ಬಣ್ಣಿಸಿದರು. ಹಿರಿಯ ಗಾಯಕರು ವಿದ್ವಾಂಸರಾದ ಡಾ.ಎ.ವೃಷಬೇಂದ್ರಚಾರ್ ಬೇಂದ್ರೆಯವರ ಕವಿತೆ ಗಳನ್ನು ಭಾವಪೂರ್ಣ ವಾಗಿ ಹಾಡಿ ಗೀತಗಾಯನ ಕಾರ್ಯಕ್ರಮ ವನ್ನು ನಡೆಸಿಕೊಟ್ಟರು. ಚಲನಚಿತ್ರ ನಟ ಅನಂತ ದೇಶ ಪಾಂಡೆ ಧಾರವಾಡ ಬೇಂದ್ರೆಯವರ ಅನುಕರಣೆ ಬೇಂದ್ರೆ ದರ್ಶನ ಮಾಡಿಸಿದರು. ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಡಾ.ಡಿ.ಎಂ .ಹಿರೇಮಠ ಅಧ್ಯಕ್ಷತೆ ವಹಿಸಿದ ಕಾರ್ಯಕ್ರಮದಲ್ಲಿ ನಿವೃತ್ತಿ ಪ್ರಾಧ್ಯಾಪಕ ಡಾ.ಶಿವಾನಂದ .ಸಂಡೂರು ಮಾಜಿ ಕ.ಸಾ.ಪ. ಅಧ್ಯಕ್ಷ ಬಿ ನಾಗನಗೌಡ .ಕವಿ ಯು.ಜಗನ್ನಾಥ್. ನಿವೃತ್ತಿ ಉಪನ್ಯಾಸಕ ಮೌನೇಶಾಚಾರ್.ಎ.ನೀಲಕಂಠಾಚಾರ್.ಶ್ಯಾಮಸುಂದರ ಸಫಾರಿ .ನ್ಯಾಯವಾದಿ ಆರ್.ರಮೇಶ್ ಆಹ್ವಾನಿತರಾಗಿ ಭಾಗವಹಿಸಿದ್ದರು. ಉಪನ್ಯಾಸಕ ಅರ್ ಜಗದೀಶ್ ಚಂದ್ರ ಬೋಸ್ ಪ್ರಾಸ್ತಾವಿಕ ಮಾತನಾಡಿದರೆ .ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಎನ್. ಎಂ .ರವಿಕುಮಾರ್ ಕಾರ್ಯಕ್ರಮ ನಿರೂಪಣೆ ಮಾಡಿದರು .
ಮುಂದುವರೆದ ಕಾವ್ಯ ಗಾಯನ ಕಾರ್ಯಕ್ರಮದಲ್ಲಿ ಹೊಸಪೇಟ್ ಕೆ.ವಿರುಪಾಕ್ಷಪ್ಪ ಇಟಗಿ.ಮಲ್ಲಿಕಾರ್ಜುನ. ಪ್ರಕಾಶ್ ಬಡಿಗೇರು.ಕುಮಾರಿ ಅನುರಾಧ ಪತ್ತಾರ್ ಹೊಸಪೇಟೆ. ಕುಮಾರಿ ಗೌತಮಿ ಕರುಣಾನಿಧಿ ಹೊಸಪೇಟೆ.. ಕೊಟ್ರೇಶ್. ವಾಣಿ ವಿಜಯಕುಮಾರ್. ವಿಜಯಕುಮಾರ್ ಹೊಸಪೇಟೆ.. ಹಾಡಿದರೆ ಹಂಪಿ ವಿ .ವಿ. ಮಲ್ಲಿಕಾರ್ಜುನ್ ಚಾರ್ ,ಸಂಡೂರುನ ಕುಮಾರ ಸ್ವಾಮಿ ,ಮಹೇಶ್ ,ನಾಗಲಿಂಗಚಾರ್, ವಿರುಪಾಕ್ಷಪ್ಪ ,ಹಾಗೂ ಮಾರಿಕಾಂಬಾ ಭಜನೆ ತಂಡದವರು.ಮತ್ತು ಕುಂಬಾರ ತಿಪ್ಪೇರುದ್ರಪ್ಪ,ರೇಣುಕಾಧ್ಯ ಶಿಕ್ಷಕರು.ಅಜ್ಜಯ್ಯ,ಎ.ನಿರಂಜನ್ ಚಾರಿ ,ಎ..ಸುನಿಲ್ ಅಚಾರ್ .ಕಾಳಚಾರಿ ವಕೀಲರು ಕೊಟ್ಟೂರು.ಹಾಗೂ ಡಾ.ಎ. ವೃಷಬೇಂದ್ರಚಾರ್ ಕುಟುಂಬ ವರ್ಗದವರು ಮತ್ತು
ಮುಂತಾದವರು ವಾದ ವೃಂದ ನಡೆಸಿ ಕೊಟ್ಟರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
