;

ಮೊಳಕಾಲ್ಮೂರು: ಐತಿಹಾಸಿಕ ಸ್ಥಳ ಶ್ರೀ ನುಂಕಮಲೆ ಬೆಟ್ಟದ ಹಿನ್ನೆಲೆ..!!

ವರದಿ. ಮಂಜುನಾಥ್, ಎಚ್

ಚಿತ್ರದುರ್ಗ: ಮೊಳಕಾಲ್ಮೂರು ತಾಲ್ಲೂಕನ್ನು ರೇಷ್ಮೆ ಸೀರೆಯ ತವರೂರು ಎಂದು ಕರೆಯಲಾಗುತ್ತದೆ. ಇದು ಒಂದು ಐತಿಹಾಸಿಕ ಸ್ಥಳವಾಗಿದ್ದು. ಇಲ್ಲಿ ನುಂಕಪ್ಪನ ಪ್ರಸಿದ್ಧವಾದ ಬೆಟ್ಟವಿದೆ. ಈ ಬೆಟ್ಟದಲ್ಲಿ ಶ್ರೀ ನುಂಕಮಲೆ ಸಿದ್ದೇಶ್ವರ ಸ್ವಾಮಿಯು ನೆಲೆಸಿದ್ದು ಈ ಸ್ವಾಮಿಯ ಜಾತ್ರೆಯನ್ನು ವರ್ಷಕ್ಕೊಮೆ ನೆಡೆಸಲಾಗುತ್ತದೆ. ಅಲ್ಲದೆ ಮೊಳಕಾಲ್ಮೂರು ತಾಲ್ಲೂಕಿನ ಗ್ರಾಮವಾದ ಜಟ್ಟಂಗಿ ರಾಮೇಶ್ವರ ಎಂಬಲ್ಲಿ ಅಶೋಕ ಚಕ್ರವರ್ತಿಯ ಕಾಲದ ಶಾಸನ ಒಂದು ಸಹ ದೊರೆತಿದೆ. ಇಲ್ಲಿನ ಜನರ ಮೂಲ ಕಸುಬು ಕೃಷಿಯಾಗಿದ್ದು. ರೇಷ್ಮೆ, ನೆಲಗಡಲೆ (ಕಡಲೆ ಕಾಯಿ),  ಜೋಳ, ರಾಗಿ, ಮೆಕ್ಕೆಜೋಳ  ಮತ್ತು ಈರುಳ್ಳಿ  ಬೆಳೆಗಳನ್ನು ಹೆಚ್ಚಾಗಿ ಬೆಳೆಯುತ್ತಾರೆ.
ಮೊಳಕಾಲ್ಮೂರುನಲ್ಲಿರುವ ನುಂಕಿಮಲೆ‌ ಸಿದ್ದೇಶ್ವರ ಬೆಟ್ಟ ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿದೆ. ಉತ್ತರ ದಿಕ್ಕಿನಲ್ಲಿರುವ ಬೆಟ್ಟವು ಅಗಾಧ ಶಿಲೆಯುಳ್ಳ ಪರ್ವತ ಎನಿಸಿಕೊಂಡಿದೆ. ಈ ಐತಿಹಾಸಿಕ ಪುಣ್ಯ ಕ್ಷೇತ್ರಕ್ಕೆ ನಾಥಪಂಥದ ಆದಿಗುರು ಗೋರಕ್ಷನಾಥ ಶಾಖಾ ಪೀಠದಲ್ಲಿ ಒಂದಾದ ಲೋಕಿಮಠದ ಪೀಠಾಧ್ಯಕ್ಷ ಶ್ರೀ ರಾಜಗುರು ಮಂಗಲ್‌ನಾಥ್‌ಜೀ ಅವರ ಆಶೀರ್ವಾದ ಇದೆ ಎನ್ನಲಾಗಿದೆ.

ಬೆಟ್ಟದ ಹಿನ್ನೆಲೆ : ಹಿಂದೆ ನುಂಕಮಲೆ ಬೆಟ್ಟದಲ್ಲಿ ರಸಸಿದ್ದಿ ಮತ್ತು ಚಂಡಿ ಎಂಬ ರಾಕ್ಷಸರಿದ್ದರು. ಇವರ ಕಾಟ ಸಹಿಸದಾದ ಜನರು, ಕಾಲಭೈರವನ ಮೊರೆ ಹೋಗಿ ರಾಕ್ಷಸರೀರ್ವರ ಸಂಹಾರ ಮಾಡಿ ಕ್ಷೇತ್ರದಲ್ಲೇ ನೆಲೆಸುವಂತೆ ಕೋರಿಕೊಂಡರು. ಭಕ್ತರ ಆಸೆಯಂತೆ ಕಾಲಭೈರವ ಸ್ವಾಮಿ ಬೆಟ್ಟದ ತಪ್ಪಲಲ್ಲಿ ನೆಲೆಸಿ ಸುತ್ತಲಿನ 33 ಹಳ್ಳಿಗಳ ಗುಡಿಕಟ್ಟಿನ ಜನರ ಮನೆ ದೇವರಾದರು ಎಂಬ ಪ್ರತೀತಿ ಇದೆ. ಪ್ರಸ್ತುತ ಶ್ರೀಸ್ವಾಮಿಗೆ ನಾಡಿನೆಲ್ಲೆಡೆ ಭಕ್ತಗಣವಿದೆ.

ಮಹಾಭಕ್ತ ಹರಳಯ್ಯ : ಶ್ರೀ ಕಾಲಭೈರವ ಸ್ವಾಮಿ ರಾಕ್ಷಸರೊಂದಿಗೆ ಹೋರಾಡುವಾಗ ಕುದುರೆಯ ಲಗಾಮು ತುಂಡಾಗುತ್ತದೆ. ಈ ವಿಷಯ ಅರಿತ ಭೈರವೇಶ್ವರನ ಪರಮಭಕ್ತ ಹರಳಯ್ಯ, ತನ್ನ ಕಾಲಿನಿಂದ ತಲೆ ಭಾಗದವರೆಗಿನ ಚರ್ಮ ಸುಲಿದು ಲಗಾಮು ಮಾಡಿ ಕುದುರೆ ಮುನ್ನಡೆಸಲು ಹಾಗೂ ರಾಕ್ಷಸರ ಸಂಹಾರಕ್ಕೆ ಸಹಾಯ ಮಾಡಿದರು. ಈತನ ಭಕ್ತಿಗೆ ಮೆಚ್ಚಿದ ಕಾಲಭೈರವೇಶ್ವರ, ಹರಳಯ್ಯನ ಹರಕೆಯಂತೆ ತನ್ನ ಸನ್ನಿಧಾನದಲ್ಲೇ ಇರಲು ಅವಕಾಶ ನೀಡಿದರು. ಹೀಗಾಗಿ ಪ್ರತಿ ವರ್ಷ ಜಾತ್ರೆ ಸಂದರ್ಭದಲ್ಲಿ ಮೊದಲ ಪೂಜೆ ಹರಳಯ್ಯನಿಗೆ ನೆರವೇರುತ್ತದೆ.

ಕುದುರೆ ಹೆಜ್ಜೆ : ಮಲ್ಲಿಕಾರ್ಜುನಸ್ವಾಮಿ, ಆಂಜನೇಯ, ರೇಣುಕಾಯಲ್ಲಮ್ಮ, ತುಪ್ಪದಮ್ಮ, ಕೆಳಗಿನ ಹರಳಯ್ಯ, ಮೇಲಿನ ಹರಳಯ್ಯ, ನುಂಕವ್ವ, ಮಲಿಯವ್ವ ದೇವರು, ಬೃಹತ್ ಕಲ್ಲು ಬಂಡೆಯ ಮೇಲೆ ಕುದುರೆ ಹೆಜ್ಜೆ, ರಾಕ್ಷಸರಾದ ರಸಸಿದ್ದಿ ಮತ್ತು ಚಂಡಿ ಅವರ ಹೆಜ್ಜೆ ಗುರುತು, ಕುಮುತಿ ರೇವಿನ ಫಲುಮಹಾರಾಜರ ದೈತ್ಯ ಶಿಲೆ, ಹರಳಯ್ಯನ ಲಿಂಗದರ್ಶನ, ದ್ರೋಣಾದ್ರಿ ಮಲೆ ಇವು ಐತಿಹಾಸಿಕ ನುಂಕಮಲೆಯ ಪ್ರಮುಖ ಆಕರ್ಷಣೆಯಾಗಿವೆ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;