ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

*ಕೂಡ್ಲಿಗಿ:ಆಧುನಿಕ ಶಬರಿ ನೀಡಿದ್ದು-5100ಕೋಟಿ ಸರಿ ಸಮನಾದ ದೇಣಿಗೆ*<->ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಪಟ್ಟಣದ ಶ್ರೀರಾಮನ ಭಕ್ತಳಾದ ವೃದ್ಧೆಯೊಬ್ಬಳು,ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಭಾರೀ ಮೊತ್ತದ ಹಣಕ್ಕೆ ಸರಿ ಸಮಾನವಾದ ಹಣ. ನೀಡಿದ್ದಾಳಂತೆ ಹಾಗಂತ ಶ್ರೀರಾಮ ಭಕ್ತರ ಹೇಳಿಕೆಯಾಗಿದೆ.
ಹೀಗೆ ವೈಶಿಷ್ಟ ಪೂರ್ಣವಾಗಿ ದೇಣಿಗೆ ನೀಡೋ ಮೂಲಕ,
ವೃದ್ಧೆ ಸಮಾಜದಲ್ಲಿ ಅಧುನಿಕ ಶಬರಿಯಾಗಿ ಗುರುತಿಸಿಕೊಂಡಿದ್ದಾಳೆ. ಅನೇಕ ದಿನಗಳಿಂದ ತನ್ನ ಚಿಕ್ಕ ವ್ಯಾಪಾರದಿಂದ, ಬಂದಿದ್ದ ಅಲ್ಪ ಲಾಬಾಂಶದ ಹಣದಲ್ಲಿ,ಕೆಲ ಹಣವನ್ನು ಶ್ರೀರಾಮ ದೇವರ ಸೇವೆಗೆಂದು.ತುಂಬಾ ದಿನಗಳಿಂದ ಜಥನದಿಂದ ಕಾಪಾಡಿ ಮುಡಿಪಾಗಿಟ್ಟಿದ್ದಾಳಂತೆ,
ತನ್ಮ ಹೆಸರನ್ನೇ ಹೇಳಬಯಸದ ವೃದ್ಧೆ.ಅವಳ ಮಾತಿನಿಂದ ತಿಳಿಯಬಹುದು ಆಂದ್ರದವಳೆಂದು ತಿಳಿಯ ಬಹುದಷ್ಟೆ,ಆ ಮುಡಿಪು ಹಣ ಶ್ರೀರಾಮನ ಸೇವೆಗೆ ಅರ್ಪಿಸುವ ಸುಯೋಗ ಈಗ ಬಂದಿದೆ.ಅದಕ್ಕಾಗಿ ಶ್ರೀರಾಮನ ಸರ್ವ ಸೇವಕರಿಗೆ ತಾನು ಧನ್ಯವಾದಗಳನ್ನು ಅರ್ಪಿಸುವುದಾಗಿ ವೃದ್ಧೆ ತಿಳಿಸಿದ್ದಾಳೆ,ಶ್ರೀರಾಮನ ಮಂದಿರ ನಿರ್ಮಾಣದ ವಿಷಯ ಕೇಳಿದಾಕ್ಷಣ.
ಕೆಲ ಹೊತ್ತು ಆ ವೃದ್ಧೆ ಭಕ್ತಿ ಭಾವ ಪರವಶಳಾಗಿ, ಆನಂದದ ಭಾಷ್ಪಗಳನ್ನು ಕಣ್ಣಂಚಿನಲ್ಲಿ ತಂದುಕೊಂಡು ಹರ್ಷ ವ್ಯಕ್ತಪಡಿಸಿದ್ದಾಳೆ. ರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣ ಅಭಿಯಾನದಲ್ಲಿ,ಭಾಗವಹಿಸಿದ್ದ ರಾಮಣ್ಣ ಕಾಟ್ವ ಹಾಗೂ ಅಕ್ಕಿ ರಾಘವೇಂದ್ರ ರವರಿಗೆ ಹಣ ನೀಡೋ ಮುಖೇನ. ವೃದ್ಧೆ ತಾನು ಶ್ರೀರಾಮನ ಸೇವೆಗೆಂದು ಸಂಗ್ರಹಿಸಿಟ್ಟಿದ್ದ.
500ರೂ ಕಾಣಿಕೆಯನ್ನ ಭಕ್ತಿ ಪೂರ್ವಕವಾಗಿ ಶ್ರೀರಾಮ ಮಂದಿರದ ದೇಣಿಗೆಗೆ ಅರ್ಪಿಸಿದ್ದಾಳೆ.
ತಾನು ಹಲವು ವರ್ಷಗಳ ಹಿಂದೆ ಅಯೋಧ್ಯೆಗೆ ಹೋಗಿ ಬಂದಿರುವುದಾಗಿ ವಿವರಿಸಿದ್ದಾಳೆ,ಈ ಮೂಲಕ ಶ್ರೀರಾಮದೇವರ ಬಗ್ಗೆ ತಾನು ಹೊಂದಿರುವ ಶ್ರದ್ಧಾ ಭಕ್ತಿ ಭಾವನೆಗಳನ್ನ ಹಂಚಿಕೊಂಡಿದ್ದಾಳೆ.ಗತಿಸಿಹೋದ ಅಪರೂಪದ ಭಕ್ತಿಪೂರ್ವಕ ಸನ್ನಿವೇಶಗಳನ್ನ,ಮೆಲುಕು ಹಾಕೋ ಮೂಲಕ ಆಧ್ಯಾತ್ಮಿಕ ಸವಿ ಸವಿ ನೆನೆಪುಗಳನ್ನ ಶ್ರೀರಾನ ಭಕ್ತರೊಂದಿಗೆ ಹಂಚಿಕೊಂಡಿದ್ದಾಳೆ.
*ಸ್ವಾವಲಂಬಿ ಬಡ ವೃದ್ಧೆಯ ದಾನ ಪ್ರೇರಣೀಯ-* ತಾನು ಅತಿ ಸಣ್ಣ ಸ್ವಾವಲಂಬಿ ಅಲ್ಪ ದುಡಿಮೆಯಿಂದ,ಜೀವನ ನಡೆಸುತ್ತಿರುವ ಅಪರೂಪದ ಅಜ್ಜಿ ಈ ವೃದ್ಧೆ ಮೂಲತಹಃ ಆಂದ್ರ ಮೂಲದವಳು.ಬಹು ವರ್ಷಗಳಿಂದಲೂ ಕೂಡ್ಲಿಗಿ ಪಟ್ಟಣದಲ್ಲಿ,ಉಪ್ಪಿನ ಕಾಯಿಯ ಡಬ್ಬ ಹೊತ್ತು ಮಾರಾಟ ಮಾಡಿ ಬಂದ ಅಲ್ಪ ಲಾಭದಲ್ಲಿ.ಏಕಾಂಗಿ ಯಾಗಿದ್ದರೂ ಸಂತೃಪ್ತಿ ಜೀವನ ಸಾಗಿಸುವ,ಬಲು ಅಪರೂಪದ ಸ್ವಾವಲಂಬಿ ವೃದ್ಧೆಯಾಗಿದ್ದಾಳೆ.ಇವಳು ಕೂಡಿಟ್ಟ ದೇಣಿಗೆ ಹಣ501ರೂ,ಶ್ರೀರಾಮ ಭಕ್ತರಿಗೆ5100ಕೋಟೆ ರೂಗೆ ಸಮ ಎಂದು ವೃದ್ಧೆಯನ್ನ ಅಭಿನಂದಿಸಿದ್ದಾರೆ.
ಇದು ಎಲ್ಲರಿಗೂ ಪ್ರೇರಣೆಯಾಗಲಿದ್ದು,ಜಾತಿ ಮತ ಪಂಥಗಳ ಎಲ್ಲೆ ಮೀರಿ ಸ್ವಯಂ ಪ್ರೇರಣೆಯಿಂದಾಗಿ, ಶ್ರೀರಾಮ ದೇಗುಲಕ್ಕೆ ಭಕ್ತಿಯಿಂದ ಶಕ್ತಾನುಸಾರ ಸೇವಾ ಹಣ ಅರ್ಪಿಸುತ್ತಿದ್ದಾರೆ.ಹೃದಯ ಶ್ರೀಮಂತರಾದ ಇವರೇ ನಿಜವಾದ ಶ್ರೀಮಂತರಾಗಿದ್ದಾರೆ, ಅವರೇ ನಿಜವಾದ ಶ್ರೀರಾಮ ಭಕ್ತರಾಗಿದ್ದಾರೆ.ವೃದ್ಧೆಯ ದೇಣಿಗೆ ಹಣ ಪ್ರೇರಣೀಯ ವಾದದ್ದು ಎಂದಿದ್ದಾರೆ ಶ್ರೀರಾಮ ಸೇವಕರು.
ವೃದ್ಧೆ ಶ್ರದ್ಧಾ ಭಕ್ತಿಯಿಂದ ಅರ್ಪಿಸಿದ ದೇಣಿಗೆ ಸ್ವೀಕರಿಸಿದ ರಾಮಣ್ಣ ಕಾಟ್ವ ಹಾಗೂ ಅಕ್ಕಿ ರಾಘವೇಂದ್ರ ಹರ್ಷ ವ್ಯಕ್ತಪಡಿಸಿದ್ದು,ಈ ಬಡ ವೃದ್ಧೆ ಶ್ರದ್ಧಾ ಭಕ್ತಿಯಿಂದ,ತಮಗೆ ನೀಡಿರುವ501ರೂ(ಐದು ನೂರ ಒಂದು ರೂ)ನಮಗೆ 5100ಕೋಟಿ ರೂಗೆ ಸಮ ಎಂದಿದ್ದಾರೆ,ದೇಣಿಗೆ ಸ್ವೀಕರಿಸಿದ ಶ್ರೀರಾಮ ಸೇವಾ ಭಕ್ತರು.
ವಿಷೇಶ ಹಾಗೂ ಅಚ್ಚರಿ ವಿಷಯ ಏನಂದರೆ.!?.
ಬಿಡಿಗಾಸನ್ನು ದೇಣಿಗೆ ನೀಡಿದವರು,ತಮ್ಮ ಹೆಸರು ಬರೆಯಿಸಿ ರಸೀದಿ ಪಡೆಯೋ ಈ ಜಮಾನದಲ್ಲಿ.ಈ ಬಡ ವೃದ್ಧೆ ದೇಣಿಗೆ ರಸೀದಿಯಲ್ಲಿ ತನ್ನ ಹೆಸರು ನಮೂದಿಸುವುದಕ್ಕೆ ಒಪ್ಪಿಗೆ ನೀಡಿಲ್ಲ,ತನ್ನ ಹೆಸರಿನ ಬದಲಾಗಿ ಸಾಕ್ಷಾತ್ ಶ್ರೀರಾಮ ದೇವರ ಹೆಸರು ಅಥವಾ ಶ್ರೀಭಗವಂತ ಎಂಬ ಹೆಸರನ್ನೇ ಬರೆಯಿರಿ ಅಂದಿದ್ದಾಳೆ ವೃದ್ಧೆ.
ತಾವು ಶ್ರೀರಾಮ ಭಕ್ತೆ ವೃದ್ಧೆಯನ್ನ ಸಂದರ್ಶಿಸಿದಾಗ.ಸಾಕ್ಷಾತ್ ಶಬರಿ ಮಾತೆ ದರ್ಶನ ಪಡೆದಷ್ಟು ಸಂತೋಷ ಸಂತೃಪ್ತಿಯ ಅನುಭವ, ತಮಗಾಯಿತು ಎಂದಿದ್ದಾರೆ ಶ್ರೀರಾಮ ಸೇವಕರಾದ ರಾಮಣ್ಣ ಕಾಟ್ವ ಹಾಗೂ ಅಕ್ಕಿ ರಾಘವೇಂದ್ರ…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
