;

ಭ್ರಷ್ಟ ಪಿಡಿಓ ಗಳ ಬೆನ್ನಿಗೆ ನಿಂತ ಕಲಬುರ್ಗಿ ZP CEO..!!!

ವರದಿ. ಎಚ್ಚರಿಕೆ ಪತ್ರಿಕಾ ವರದಿಗಾರ

ಭ್ರಷ್ಟ ಪಿಡಿಓಗಳ ಬೆನ್ನಿಗೆ ನಿಂತ ಕಲಬುರ್ಗಿ ZP CEO

—————————————-
ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳು ಆಯಾ ಗ್ರಾಮೀಣ ಪ್ರದೇಶದ ಜನರಿಗೆ ಗ್ರಾಮಪಂಚಾಯತಿಗಳ ಯೋಜನೆಗಳು ಸರಳವಾಗಿದೊರಕಲೆಂದು ಇದರ ಜವಾಬ್ದಾರಿಯನ್ನು ಆಯಾ ಗ್ರಾಮ ಪಂಚಾಯತಿಗೆ ಒಬ್ಬರಂತೆ ಒಬ್ಬರನ್ನು ಮತ್ತು ಕಾರ್ಯದರ್ಶಿಯನ್ನು ಸರ್ಕಾರ ನೇಮಿಸಿರುತ್ತದೆ.ವಿವಿಧ ಯೋಜನೆಗಳ ಸೌಲಭ್ಯಗಳು ಸಾರ್ವಜನಿಕರಿಗೆ ಮುಟ್ಟುತ್ತವೆ ಇಲ್ಲ ಎಂಬುದನ್ನು ಅರಿಯಲು ತಾಲೂಕ ಪಂಚಾಯತ್ ಅಧಿಕಾರಿಯನ್ನು ತಾಲೂಕ ಪಂಚಾಯತ್ ಕಾರ್ಯದಲ್ಲಿ ಕೂಡಿಸಿರುತ್ತದೆ ನಮ್ಮ ಸರ್ಕಾರ.ಕಾರ್ಯವೈಖರಿಯನ್ನು ಅಳೆದು-ತೂಗಿ ನೋಡಲೆಂದು ಗ್ರಾಮ ಪಂಚಾಯಿತಿ ಪಿಡಿಓ ಗಳು ಮತ್ತು ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ (ಇಓ) ಇವರುಗಳು ತಪ್ಪು ಮಾಡಿರುವ ಕಾರ್ಯಗಳನ್ನು ನೋಡಿ ಕಿವಿಹಿಂಡಿ ಇವರ ಹೆಡೆಮುರಿಗೆ ಕಟ್ಟೋದಕ್ಕೆಂದೇ ಪ್ರತಿಯೊಂದು ಜಿಲ್ಲೆಗೂಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನು ನಮ್ಮ ಸರ್ಕಾರ ನೇಮಕ ಮಾಡಿರುತ್ತೆ.ಎಂಥವರನ್ನು ಎನ್ನುವುದು ನಮಗೆಲ್ಲ ಗೊತ್ತಿರಬೇಕಲ್ಲ ಅದು ಐಎಎಸ್ IAS ಕಲಿತವರನ್ನು ಹುದ್ದೆಗೆ ನೇಮಕ ಮಾಡಿರುತ್ತಾರೆ.ಕಾರಣ ಭಾರತೀಯ ಆಡಳಿತದ ಕಾನೂನಿನ ಅರಿವು ಇರುವವರಿಗೆ ಜಿಲ್ಲಾ ಪಂಚಾಯತ್ ಸಿಇಓ ನೇಮಿಸಿರುತ್ತಾರೆ. ಹಾಗಾದರೆ ಈ ಜಿಲ್ಲಾ ಪಂಚಾಯತಿಗೆ ಇರೋವವರು ಐಎಎಸ್ ಕಲಿತವರಾ ?ಹೌದು ಸ್ವಾಮಿ ಐಎಎಸ್ ಕಲಿತವರೇ ಕಲಬುರ್ಗಿ ಜಿಲ್ಲಾ ಪಂಚಾಯತ್ ಕುರ್ಚಿಗೆ ಅಂಟಿಕೊಂಡಿದ್ದಾರೆ ಐಎಎಸ್ ಉನ್ನತ ಶಿಕ್ಷಣ ಹೊಂದಿರುವ ಶ್ರೀಯುತ ಪಿ.ರಾಜಾ ಮಾಡದ ಹೇಳೋದು ಇವರು ಪ್ರಾರಂಭದಲ್ಲಿ ಇವರು ನಿಜವಾಗಲೂ ಹೆಸರಿಗೆ ತಕ್ಕಂತೆ ರಾಜನೇ ಆಗಿದ್ದರು. ಇತ್ತೀಚಿನ ದಿನಗಳಲ್ಲಿ ಅವರು ಭಾಜೀರಾಯ ಆಗಿದ್ದಾರೆ ಎಂದು ಸ್ಥಳೀಯ ಪ್ರಜ್ಞಾವಂತರ ಅನಿಸಿಕೆಯಾಗಿದೆ. ಐಎಎಸ್ ಕಲಿತವರು ನಿಜವಾಗಲೂ ಈ ತರಹ ನಡೆದುಕೊಳ್ಳಬಾರದು ಎಂದು ಅಲ್ಲಿಯ ಜನರ ಹೇಳಿಕೆಯಾಗಿದೆ. ಕಾರಣವೇನೆಂದುಕೇಳಿದರೆ ಅಲ್ಲರೀ ಇವರು ಮುಂದೊಂದು ದಿನ ಬಡ್ತಿ ಹೊಂದಿ ಯಾವುದೋ ಒಂದು ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ನೇಮಕವಾಗಲೂಬಹುದು. ಜಿಲ್ಲಾ ಪಂಚಾಯತಿ ಸಿಇಓ ಆಗಿದ್ದಾಗಲೇ ಭ್ರಷ್ಟಾಚಾರ ಮಾಡಿದ ಅಧಿಕಾರಿಗಳನ್ನು ರಕ್ಷಿಸುವುದಾದರೆ ಜಿಲ್ಲಾಧಿಕಾರಿಗಳಾಗಿ ಪ್ರಮೋಷನ್ ಹೊಂದಿದಾಗ ಇನ್ನೆಷ್ಟು ಭ್ರಷ್ಟಾಚಾರಿಗಳಿಗೆ ಬೆಂಬಲ ನೀಡಬಹುದು ಎಂಬ ಕೂಗು ಸಿಇಓ ಪಿ ರಾಜಾ ಇವರ ವಿರುದ್ಧ ಕೇಳಿಬರುತ್ತಿದೆ. ಸಿಇಓ ಪಿ ರಾಜಾ ಅವರೇ ನಿಮ್ಮ ಅಧಿಕಾರದ ವ್ಯಾಪ್ತಿಯಲ್ಲಿ ಬರುವ ಜೇವರ್ಗಿ ತಾಲೂಕಿನಲ್ಲಿರುವ ಸರ್ವೇಸಾಮಾನ್ಯವಾಗಿ 80 ಪರ್ಸೆಂಟ್ ಗ್ರಾಮ ಪಂಚಾಯತಿಗಳಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಲಂಗುಲಗಾಮಿಲ್ಲದ ಪಿಡಿಓ ಗಳ ವರ್ತನೆಯಿಂದ ಆ ತಾಲ್ಲೂಕಿನ ಜನರು ಬೇಸತ್ತು ಹೋಗಿದ್ದಾರೆ. ಅಧಿಕಾರಿಗಳಾದ ನಿಮ್ಮ ಮೇಲೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.ಅನೇಕ ಪಿಡಿಓ ಗಳ ಬಗ್ಗೆ ತಾಲೂಕ ಪಂಚಾಯತಿ ಅಧಿಕಾರಿಯಿಂದ ಹಿಡಿದು ನಿಮ್ಮ ಸನ್ನಿಧಿಗೆ ಬಂದು ಸ್ವತಃ ದೂರು ಸಲ್ಲಿಸಿದರೂ ಸೂಕ್ತ ಕ್ರಮಕ್ಕೆ ಮುಂದಾಗದೆ ಇರುವುದು ಸೋಜಿಗವೆನಿಸುತ್ತದೆ. ಸಿಇಓ ಸಾಹೇಬ್ರೆ ನಿಮ್ಮ ವರ್ತನೆ ಹೀಗೇಕೆ ? ಯಾವ ಜನಪ್ರತಿನಿಧಿಯ ಹೊಡೆತಕ್ಕೆ ಬೆಂಡಾಗಿದ್ದೀರಿ ? ಯಾರ ಮಾತಿಗೆ ಮಣಿದಿದ್ದೀರಿ ? ಎಂಥವರ ಒತ್ತಡಕ್ಕೆ ನಿಮಗೆ ಈ ರೀತಿ ಮಾಡಲು ಹೇಳಿದೆ ? ಅಥವಾ ಲಂಚದ ಆಸೆಗೆ ಏನಾದರೂ ಜೋತುಬಿದ್ದು ಭ್ರಷ್ಟ ಪಿಡಿಓಗಳನ್ನು ರಕ್ಷಿಸಿ ಅವರ ಬೆನ್ನಿಗೆ ನಿಂತಿದ್ದೀರಾ ? ಯಾವುದಾದರೂ ಒಂದು ಹೊಡೆತಕ್ಕೆ ನೀವು ಬೆಂಡಾಗಿರಲೇಬೇಕೆಂದು ಸ್ಥಳೀಯ ಪ್ರಜ್ಞಾವಂತರು ನಮ್ಮ ಪತ್ರಿಕಾ ಕಾರ್ಯಾಲಯಕ್ಕೆ ಫೋನ್ ಮಾಡಿ ತಮಗೆ ಆದ ಅನ್ಯಾಯ ಅವರ ತಾಲೂಕಿನ ಪಿಡಿಓ ಗಳ ದುರಾಡಳಿತ ನಿರಂತರ ಭ್ರಷ್ಟಾಚಾರಕ್ಕೆ ಕೈಚಾಚುವ ಪಿಡಿಓಗಳೆಂಬ ಪೀಡಾಗಳ ದುರ್ನಡತೆ ಬಗ್ಗೆ ಸಾಕಷ್ಟು ದೂರುಗಳು ಮತ್ತು ಪಿಡಿಒಗಳು ಮಾಡಿದ ಕರ್ಮಕಾಂಡದ ಮತ್ತು ತಪ್ಪು ಮಾಡಿದ ತನಿಖಾ ವರದಿಯನ್ನು ನಿಮ್ಮ ವ್ಯಾಪ್ತಿಯಲ್ಲಿ ಬರುವ ಜೇವರ್ಗಿ ತಾಲೂಕಿನ ತಾಲೂಕ ಪಂಚಾಯತ್ ಅಧಿಕಾರಿಗಳು ಪೂರ್ಣ ಮಾಹಿತಿ ಒದಗಿಸಿ ಈ ಪಿಡಿಓ ತಪ್ಪಿತಸ್ಥನಾಗಿದ್ದಾನೆ ಇವನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬಹುದು ಎಂದು ಮೇಲಾಧಿಕಾರಿಗಳಾದ ನಿಮಗೆ ವರದಿ ಬಂದರೂ ನೀವು ನಿಮ್ಮ ಕೆಳಗಿನ ಅಧಿಕಾರಿಯಾದ ಇಓ ರವರ ವರದಿಗೂ ಕವಡೆ ಕಾಸಿನ ಕಿಮ್ಮತ್ತು ನೀಡದೇ ಭ್ರಷ್ಟ ಪಿಡಿಓನನ್ನು ರಕ್ಷಿಸಿರುವುದು ಪ್ರಜ್ಞಾವಂತ ನಾಗರಿಕರನ್ನು ಚಿಂತೆಗೀಡು ಮಾಡಿದೆ.ಏಕೆಂದರೆ ಪಂಚಾಯತಿಯಲ್ಲಿ ನಡೆದ ಭ್ರಷ್ಟಾಚಾರವನ್ನು ಇನ್ನುಮೇಲೆ ನಾವು ತಿಳಿಸುವುದಾದರೂ ಯಾರಿಗೆ ಎನ್ನುವ ಪ್ರಶ್ನೆ ಕಾಡುತ್ತಿದೆ. ಯಾಕೆಂದರೆ ಪಂಚಾಯತಿಗಳ ವ್ಯಾಪ್ತಿಯಲ್ಲಿ ಭ್ರಷ್ಟಾಚಾರ ನಡೆದರೆ ಭ್ರಷ್ಟ ಪಿಡಿಓ ಗಳ ದುರಾಡಳಿತದ ಬಗ್ಗೆ ರಕ್ಷಣೆಗೆ ಬೆನ್ನಿಗೆ ನಿಂತರೆ ನಾವು ಕೊಡೋದಾದರೂ ಯಾರಿಗೆ ? ಇಲಾಖೆಗೆ ಸಂಬಂಧಪಟ್ಟ ಉನ್ನತ ಅಧಿಕಾರಿ ಇವರೇ ಕೊನೆಯ ಅಧಿಕಾರಿ ಅಲ್ಲವೇ ? ಇನ್ನು ಇವರನ್ನು ಮೀರಿ ದೂರ ಕೊಡುವುದಾದರೆ ಕಲಬುರ್ಗಿ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ದೂರು ಕೊಡಬೇಕು. ಹಾಗಾದರೆ ಇವರಿಗೆ ದೂರು ಕೊಟ್ಟರೆ ಇವರೇನು ಮಾಡಬಹುದು , ಈ ದೂರಿನನ್ವಯ ಸೂಕ್ತ ಕ್ರಮಕೈಗೊಳ್ಳಲು ಮತ್ತದೇ ಜಿಲ್ಲಾ ಪಂಚಾಯತಿ ಸಿಇಓ ವರಿಗೆ ತಿಳಿಸುತ್ತಾರೆ. ಮತ್ತೆ ಅದೇ ರಾಗ ಅದೇ ಹಾಡು ಸಮಜಾಯಿಸಿ ನೀಡಿ ಜಿಲ್ಲಾಧಿಕಾರಿಗಳಿಗೆ ಸಮಾಧಾನ ಪಡಿಸುತ್ತಾರೆ. ಒಟ್ಟಾರೆ ಸ್ಥಳೀಯರು ಹೇಳುವ ಪ್ರಕಾರ ಕಲಬುರ್ಗಿ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಸಿಇಓ ಅವರು ಭ್ರಷ್ಟ ಪಿಡಿಒಗಳ ಬೆನ್ನಿಗೆ ಬೆನ್ನುಕೊಟ್ಟು ಭ್ರಷ್ಟ ಪಿಡಿಓ ಗಳನ್ನು ರಕ್ಷಿಸುತ್ತಿದ್ದಾರೆ.ಮುಖ್ಯ ಕಾರ್ಯದರ್ಶಿಗಳು ಮತ್ತು ಗ್ರಾಮೀಣಾಭಿವೃದ್ಧಿ ಪಂಚಾಯತಿ ಇಲಾಖೆಯ ಆಯುಕ್ತರು ಮತ್ತು ಇಲಾಖೆಯ ಮಂತ್ರಿ ಗಳ ಗಮನಕ್ಕೆ ತರುವ ಕೆಲಸವೂ ನಮ್ಮ ಪತ್ರಿಕೆ ಮಾಡಲಿದೆ ಎಂದು ಸಾರ್ವಜನಿಕರ ಗಮನಕ್ಕೆ ತರಲಾಗಿದೆ.
*ವಿಶೇಷ ಸೂಚನೆ ಬಾಕ್ಸ್*
ಜೇವರ್ಗಿ ತಾಲೂಕಿನ ನೇದಲಗಿ ಗ್ರಾಮ ಪಂಚಾಯಿತಿಯ ಪಿ ಡಿ ಓ ನನ್ನು ಸೇವೆಯಿಂದ ವಜಾಗೊಳಿಸುವಂತೆ ಇವನ ಭ್ರಷ್ಟಾಚಾರದ ಎಳೆ ಎಳೆಯನ್ನು ಜೇವರ್ಗಿ ತಾಲೂಕಿನ ಯುವ ಮುಖಂಡ ಹುಟ್ಟು ಹೋರಾಟಗಾರ ಭ್ರಷ್ಟಾಚಾರದ ವಿರುದ್ಧ ಎದೆಸೆಟೆದು ಮಾತನಾಡುವ ಗಂಡೆದೆಯ ಗಟ್ಟಿಗನಾಗಿ, ವೀರನಾಗಿ, ಧೀರನಾಗಿ ಭ್ರಷ್ಟಾಚಾರ ಮಾಡುವ ಕಿರಿಯ ಹಿರಿಯ ಅಧಿಕಾರಿಗಳೆನ್ನದೇ ಅವರ ವಿರುದ್ಧ ತೊಡೆತಟ್ಟಿ ಮಾತನಾಡಿಸುವ ತಾಲೂಕಿನ ಏಕೈಕ ವೀರಾಧಿವೀರ ಶ್ರೀಯುತ ಪೀರಪ್ಪ ಯಾತನೂರ ಇವರು ಸಾಕಷ್ಟು ಬಾರಿ ಗ್ರಾಮ ಪಂಚಾಯತಿಗಳ ವಿರುದ್ಧ ದೂರು ನೀಡಿದ್ದಾರೆ. ಭ್ರಷ್ಟರ ರಕ್ಷಣೆಗೆ ನಿಂತಿರುವುದು ಕಂಡುಬಂದಿದೆ. ವಿಧಾನಸೌಧದ ಮುಂದೆ ಸತ್ಯಾಗ್ರಹ ಮಾಡುತ್ತೇನೆಂದು ಶ್ರೀಯುತ ಪೀರಪ್ಪ ಯಾತನೂರ ಹೇಳಿದ್ದಾರೆ.ಇದಕ್ಕೆ ಸಂಬಂಧಿಸಿದ ಅಧಿಕಾರಿಗಳ ಮುಂದಿನ ನಡವಳಿಕೆಯನ್ನು ನೋಡಿಕೊಂಡು ನನ್ನ ಹೋರಾಟದ ನಡೆಯನ್ನು ಬೆಂಗಳೂರಿನ ವಿಧಾನಸೌಧದ ಮುಂದೆ ತೋರಿಸುತ್ತೇನೆಂದು ಹೇಳಿರುವುದು ಶ್ಲಾಘನೀಯ ಎಂದು ಸ್ಥಳೀಯ ಸಾರ್ವಜನಿಕರು ಪೀರಪ್ಪ ಯಾತನೂರ ಅವರಿಗೆ ಚಪ್ಪರಿಸಿ ಸಾಥ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;