;

ಕೂಡ್ಲಿಗಿ:ಬೀದಿ ಬದಿ ವ್ಯಾಪಾರಿಗಳ ದಿನಾಚರಣೆ!!!

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

*ಕೂಡ್ಲಿಗಿ:ಬೀದಿ ಬದಿ ವ್ಯಾಪಾರಿಗಳ ದಿನಾಚಾರಣೆ*<->ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ಬೀದಿ ಬದಿ ವ್ಯಾಪಾರಿಗಳ ದಿನಾಚರಣೆ ಜರುಗಿತು,ಬೀದಿ ಬದಿ ವ್ಯಾಪಾರಿಗಳ ಸಂಘದಿಂದ ದಿನಾಚರಣೆ ಆಯೋಹಿಜಿಸಲಾಗಿತ್ತು.

ಗಾಂಧೀಜಿ ಚಿತಾಭಸ್ಮ ಸ್ಮಾರಕದಿಂದ ಪ್ರಾರಂಭಗೊಂಡ ಮೆರವಣಿಗೆ,ವಾಧ್ಯ ವೃಂದ ದೊಂದಿಗೆ ಪ್ರಮುಖ ರಸ್ಥೆ ಹಾಗೂ ವೃತ್ತಗಳಲ್ಲಿ ಸಂಚರಿಸಿತು.ನಂತರ ಶ್ರೀಕೊತ್ತಲಾಂಜನೇಯ ದೇವಸ್ಥಾನದ ಆವರಣದಲ್ಲಿ, ಏರ್ಪಡಿಸಲಾಗಿದ್ದ ಕಾರ್ಯಕ್ರಮದ ವೇದಿಕೆ ಆವರಣ ತಲುಪಿತು. ಕಾರ್ಯಕ್ರಮದಲ್ಲಿ ತಹಶಿಲ್ದಾರರಾದ ಎಸ್.ಮಹಾಬಲೇಶ್ವರ ಮಾತನಾಡಿದರು,ಕೊರೋನಾ ಸೋಂಕು ಹರಡದಂತೆ ಅಗತ್ಯ ಮುಜಾಗ್ರತೆಗಳನ್ನು ಎಲ್ಲರೂ ಅನುಸರಿಸಬೇಕು. ಕರೋನಾದಿಂದಾಗಿ ಎಲ್ಲರ ಆರ್ಥಿಕ ಸ್ಥಿತಿ ಹದಗೆಟ್ಟಿದೆ, ಸರ್ಕಾರ ಸೌಲಭ್ಯಗಳನ್ನು ಪಡೆದು ಎಲ್ಲರೂ ಛೇತರಿಸಿಕೊಳ್ಳಿ.ಧೂಳು, ಗಾಳಿ,ಮಳೆ,ಬಿಸಿಲಿಗೆ ಮೈ ಒಡ್ಡಿ ದುಡಿಯುವ ಕಾರ್ಮಿಕರಾಗಿದ್ದು,ಮಕ್ಕಳ ವಿದ್ಯಾಭ್ಯಾಸ ಹಾಗೂ ವೈಯಕ್ತಿಕ ಆರೋಗ್ಯದ ಕಡೆ ಹೆಚ್ಚು ಒತ್ತು ನೀಡಿ ಎಂದರು. ಪಿಎಸ್ಐ ತಿಮ್ಮಣ್ಣ ಮಾತನಾಡಿದರು,ರಸ್ಥೆ ಬದಿ ವ್ಯಾಪಾರಿಗಳು ಸುರಕ್ಷತೆ ಹಾಗೂ ಆರೋಗ್ಯದ ಕಡೆ ನಿಗಾ ವಹಿಸಬೇಕಿದೆ. ಪಾದಾಚಾರಿಗಳಿಗೆ ವಾಹನ ಸವಾರರಿಗೆ ಅಡಚಣೆಯಾಗದಂತೆ ವ್ಯಾಪಾರ ವಹಿವಾಟು ಮಾಡಬೇಕು,ರಸ್ಥೆ ನಿಯಮಗಳನ್ನು ಎಲ್ಲರೂ ಪಾಲಿಸಿದ್ದಲ್ಲಿ ಎಲ್ಲರಿಗೂ ಒಳಿತಾಗಲಿದೆ.ಬೀದಿಬದಿ ವ್ಯಾಪಾರಸ್ಥರು ಸ್ವಾವಲಂಭಿಗಳಾಗಿದ್ದಾರೆ,
ಸರ್ಕಾರದ ಸೌಕರ್ಯಗಳನ್ನು ಹೊಂದಿ ಮಕ್ಕಳ ಶೈಕ್ಷಣಾಕಾಭಿವೃದ್ಧಿ ಕಡೆ ಒತ್ತು ಕೊಡಬೇಕೆಂದರು.ಸಂಘಟನೆ ರಾಜ್ಯ ಜಿಲ್ಲಾ ತಾಲೂಕು ಮುಖಂಡರು ಮಾತನಾಡಿದರು,ಪಪಂ ಅಧ್ಯಕ್ಷರಾದ ಶ್ರೀಮತಿ ಎಮ್.ಶಾರದಾಬಾಯಿ.ಉಪಾಧ್ಯಕ್ಷರಾದ ಶ್ರೀಮತಿ ಊರಮ್ಮ,ಪಪಂ ಸದಸ್ಯ ಕಾವಲ್ಲಿ ಶಿವಪ್ಪ ನಾಯಕ,ಸೈಯದ್ ಶುಕೂರ್ ಅಹಮದ್,ಸೇರಿದಂತೆ ಕೆಲ ಸದಸ್ಯರಿದ್ದರು.ವಿವಿದ ಸಂಘ ಸಂಸ್ಥೆ ಮುಖಂಡರು ವೇದಿಕೆಯಲ್ಲಿದ್ದರು,ಬೀದಿ ಬದಿ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳು, ನೂರಕ್ಕೂ ಹೆಚ್ಚು ಬೀದಿ ಬದಿ ವ್ಯಾಪಾರಿಗಳು ಭಾಗಿಯಾಗಿದ್ದರು…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;