ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

*ಕೂಡ್ಲಿಗಿ:ರಸ್ಥೆ ಸುರಕ್ಷತಾ ಪಾಲನೆ ಎಲ್ಲರ ಹೊಣೆ-ಪಿಎಸ್ಐ ತಿಮ್ಮಣ್ಣ*<-> ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ಕೂಡ್ಲಿಗಿ ಪೊಲೀಸ್ ಠಾಣೆಯಿಂದ, ರಸ್ಥೆ ಸುರಕ್ಷತಾ ಸಪ್ತಾಹ ಪ್ರಯುಕ್ತ ಜಾಗೃತಿ ಮೂಡಿಸಲಾಯಿತು.
ಕೂಡ್ಲಿಗಿ ಪಿಎಸ್ಐ ತಿಮ್ಮಣ್ಣ ಚಾಮನೂರ್ ಮಾತನಾಡಿ, ರಸ್ತೆ ನಿಯಮ ಪಾಲನೆ ಎಲ್ಲರ ಹೊಣೆ ಎಂದರು. ನಿಯಮ ಉಲ್ಲಂಘಿಸಿದರೆ ಚಾಲಕರಿಗೂ ಸಾರ್ವಜನಿಕರಿಗೆ,ಹೆಚ್ಚಿನ ದಂಡ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜೀವ ರಕ್ಷಣೆಗೆ,ರಸ್ತೆ ನಿಯಮ ತಪ್ಪದೆ ಪಾಲಿಸುವಂತೆ ವಾಹನ ಸವಾರರಿಗೆ ಅವರು ಸೂಚಿಸಿದರು.
ಸಿಪಿಐ ವಸಂತ ವಿ.ಅಸೋದೆ ಮಾತನಾಡಿದರು, ಅಮೂಲ್ಯವಾದ ಪ್ರಾಣ ರಕ್ಷಣೆಗೆ ರಸ್ತೆ ನಿಯಮ ಎಲ್ಲರೂ ಪಾಲಿಸಬೇಕಿದೆ. ಸುರಕ್ಷತೆಯಿಂದ ವಾಹನ ಸವಾರಿ ಮಾಡಬೇಕು, ವಾಹನ ಚಾಲಕರು ಮತ್ತು ಪಾದಚಾರಿಗಳು ರಸ್ತೆ ನಿಯಮಗಳ ಪಾಲನೆ ಮಾಡಬೇಕು.ಈ ಮೂಲಕ ಅಪಘಾತ ನಿಯಂತ್ರಣ ಮಾಡುವ ಜೊತೆಗೆ ಅನೇಕರ ಜೀವ ಉಳಿಸಿದಂತಾಗುತ್ತದೆ ಎಂದರು.ಗುಡೇಕೋಟೆ ಪಿಎಸ್ಐ ರಾಮಪ್ಪ ಸೆರಿದಂತೆ ಕೆಲ ಎಎಸ್ಐರವರು,ಪೊಲೀಸ್ ಸಿಬ್ಬಂದಿಯವರು ಹಾಜರಿದ್ದರು.ವಿದ್ಯಾರ್ಥಿಗಳು,ಆಟೋಚಾಲಕರು,ನಾಗರೀಕರು ಇದ್ದರು.
*ಕೋ19.ನಿಯಮ ಗಾಳಿಗೆ:*-ರಸ್ಥೆ ಸುರಕ್ಷತಾ ಸಪ್ತಾಹದ ಜಾಗೃತಿ ಮೂಡಿಸುವ ಭರಾಟೆಯಲ್ಲಿ,ಕೋ19 ಸೋಂಕು ನಿಯಂತ್ರಣ ನಿಯಮಗಳನ್ನು ಪೊಲೀಸರೇ ಪಾಲಿಸಿಲ್ಲ ಎಂದು ಪ್ರಜ್ಞಾವಂತರು ತಿಳಿಸಿದ್ದಾರೆ.ಬೈಕ್ ಗಳಿಗೆ ಕೈ ಅಂದು ಮಾಸ್ಕ ಧರಿಸಿಲಚಲ ಎಂದು,ಬೈಕ್ ಸವಾರರಿಂದ ಬೇಕಾಬಿಟ್ಟಿ ಹಣ ವಸೂಲಿ ಮಾಡಿರುವ ಪೊಲೀಸ್ರು.ಜಾಗೃತಿ ಮೂಡಿಸುವ ಸಂದರ್ಭದಲ್ಲಿಯೇ ನಿಯಮಗಳನ್ನು ಗಾಳಿಗೆ ತೂರಿರುವುದು ಸ್ಪಷ್ಟವಾಗಿದೆ. ಮಾತ್ರವಲ್ಲ ಬಹುತೇಕ ಪೊಲೀಸರೇ ಹೆಲ್ಮೆಟ್ ಹಾಕುತಿಲ್ಲ ಮಾಸ್ಕ್ ಹಾಕುತ್ತಿಲ್ಲ,ಇವರು ಮೊದಲು ನಿಯಮ ಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿ ನಂತರ ಜಾಗೃತಿ ಮೂಡಿಸಬೇಕು ಎಂದು ಹಿರಿಯ ನಾಗರೀಕರೋರ್ವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊವಿಡ್ ನಿಯಮಗಳನ್ನು ಉಲ್ಲಂಘಿಸಿರುವದಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ,ಈ ಸಂಬಂಧ ಪೊಲೀಸ್ ಇಲಖಾ ಉನ್ನತಾಧಿಕಾರಿಗಳು ಸೂಕ್ತ ಶಿಸ್ಥು ಕ್ರಮ ಏಕೆ ಜರುಗಿಸುತ್ತಿಲ್ಲ,ಅವರಿಗೊಂದು ನ್ಯಾಯ ನಮಗೊಂದು ನ್ಯಾಯಾನಾ ನೀವ್ಯಾಕೆ ಇಂತಹ ವಿಷ್ಯ ಬರಿತಿಲ್ಲ ಎಂದು.ಹಿರಿಯ ನಾಗರೀಕರು ಪತ್ರಕರ್ತರನ್ನ ಹಾಗೂ ಸಂಘಟನೆಗಳ ಪದಾಧಿಕಾರಿಗಳು ಪ್ರೆಶ್ನಿಸಿದ್ದಾರೆ….
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
