ವರದಿ. ಮಂಜುನಾಥ್, ಎಚ್

ಚಿತ್ರದುರ್ಗ: ಮೊಳಕಾಲ್ಮೂರು / ಹಾಲು, ಹಣ್ಣು, ತರಕಾರಿ ಸೊಪ್ಪು ಸೇವಿಸಿದರೆ ಮಕ್ಕಳ ದೈಹಿಕ, ಮಾನಸಿಕ ಆರೋಗ್ಯ ಬೆಳವಣಿಗೆಗೆ ಸಹಕಾರಿ ಆಗಲಿದೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ.ಲಕ್ಷ್ಮಣ ಹೇಳಿದರು. ಪಟ್ಟಣದ ಶ್ರೀನಿವಾಸ ನಾಯಕ ಬಡಾವಣೆಯ ಅಂಗನವಾಡಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಪೋಷಣೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಆರೋಗ್ಯ, ಸಾಕ್ಷರತೆ ಮೂಲಕ ಮುಖ್ಯವಾಹಿನಿಗೆ ತರಲು ತಾಯಂದಿರು, ಅಂಗನವಾಡಿ ಶಿಕ್ಷಕಿಯರು ಎರಡು ಕಣ್ಣುಗಳಿದ್ದಂತೆ ಅವರು ಮಕ್ಕಳಿಗೆ ಬಾಲ್ಯದಲ್ಲಿ ಕಲಿಸುವ ವಿಷಯಗಳು
ಭವಿಷ್ಯದಲ್ಲಿ ಬೆಳಕು ಚೆಲ್ಲುತ್ತವೆ ಎಂದು
ಹೇಳಿದರು. ಪಪಂ ಸದಸ್ಯೆ ವಿಜಯಮ್ಮ
ಮಾತನಾಡಿ, ತಾಯಿ ಹಾಲು ಮಕ್ಕಳ ಆರೋಗ್ಯಕ್ಕೆ ಬುನಾದಿ. ಅದರ ಜತೆ ಪೌಷ್ಟಿಕಾಹಾರ ನೀಡಿದರೆ ಆರೋಗ್ಯಕರವಾಗಿ ಬೆಳವಣಿಗೆ ಹೊಂದುತ್ತಾರೆ
ಎಂದರು. ಜನಸಂಸ್ಥಾನ ಸಂಸ್ಥೆ ಕಾರ್ಯದರ್ಶಿ ವಿರೂಪಾಕ್ಷಪ್ಪ, ಅಂಗನವಾಡಿ ಶಿಕ್ಷಕಿಯರಾದ ಕಮಲಮ್ಮ, ಶರಣಮ್ಮ, , ಆಶಾ ಕಾರ್ಯಕರ್ತೆಯರಾದ ಭಾಗ್ಯಮ್ಮ, ಹೊನ್ನೂರಮ್ಮ, ಬಡಾವಣ ಮುಖಂಡರಾದ ಮಾರಣ್ಣ, ರಮೇಶ್ ನಾಯಕ, ಪ್ರವೀಣ್ ಇತರರು ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
