;

ಅಯೋಧ್ಯಯ ಶ್ರೀರಾಮ ಮಂದಿರ ನಿರ್ಮಾಣಕ್ಕೆ ನಿಧಿ ಸಮರ್ಪಣಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ..!!

ವರದಿ. ಮಂಜುನಾಥ್, ಎಚ್

ಚಿತ್ರದುರ್ಗ: ಮೊಳಕಾಲ್ಮುರು: ಪಟ್ಟಣದಲ್ಲಿ ಅಯೋಧ್ಯಾ ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನಕ್ಕೆ ವಿಶ್ವ ಹಿಂದೂ ಪರಿಷತ್ ತಾಲೂಕು ಅಧ್ಯಕ್ಷ ಡಿ.ಎಂ.ಈಶ್ವರಪ್ಪ ಚಾಲನೆ ನೀಡಿದರು. ಪಟ್ಟಣದ ವೆಂಕಣ್ಣನ ಬಾವಿ ಸಮೀಪದ ಶ್ರೀರಾಮ ನಿಲಯದಲ್ಲಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಹಿಂದುಗಳ ಬಹುದಿನದ ಕನಸಾಗಿರುವ ರಾಮ ಮಂದಿರವನ್ನು ಕೆ1400 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಸರ್ಕಾರದಿಂದ ಸಹಾಯ ಪಡೆಯದೆ ದೇಶದ ಪ್ರತಿ ಹಿಂದುಗಳ ಮನೆಯಿಂದ ನೀಡುವ ಹಣದಿಂದ ಭವ್ಯ ಮಂದಿರ ನಿರ್ಮಿಸಲಾಗುತ್ತಿದೆ ಎಂದರು. ಬಿಜೆಪಿ ಮಂಡಲ ಅಧ್ಯಕ್ಷ ಡಾ.ಪಿ.ಎಂ.ಮಂಜುನಾಥ, ನಗರ ಘಟಕದ ಅಧ್ಯಕ್ಷ ಕಿರಣ್ ಗಾಯಕ್ವಾಡ್, ಶಾಂತರಾಂ ಬಸಾಪತಿ, ಪಪಂ ಉಪಾಧ್ಯಕ್ಷೆ ಶುಭಾ ಪೃಥ್ವಿರಾಜ್, ಕೆ.ಪಿ.ಗೋಪಾಲ್, ಎಚ್.ಜೆ.ಮಂಜುನಾಥ, ಹರೀಶ್ ಪಾಳೇಗಾರ್, ಸಿದ್ದಣ್ಣ ವಿವೇಕಾನಂದ, ಶಿವುಕೆರೆ, ಪಾಂಡುರಂಗ ಗಾಯಕವಾಡ್ ಇನ್ನಿತರರು ಇದ್ದರು.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;